ಜೀವನಪ್ರೀತಿ ಅನುಸರಿಸುವ ಹಕ್ಕು
ಮನುಷ್ಯನಿಗೆ ಸ್ವಾಭಿಮಾನ ಮುಖ್ಯವಾಗಿ ತನ್ನ ಸಖ್ಯದ ಬದುಕನ್ನು ತಂತಿಯ ಮೇಲೋ
ಮುಳ್ಳಿನ ಮೇಲೋ ಸಾಗಿಸುತ್ತಾನೆ.
ಇಲ್ಲಿ ಸಂಬಂಧ, ಜಾತಿ, ರೀತಿ ನೀತಿಗಳನ್ನು ಮೀರಲಾಗದ, ಮೀರಿದ್ದೇ ಮಹಾ ಹೀನಾಯವಾಗುವ ಜಡಬೇರುಗಳು ಕೂಡ ಇವನ ಹೆಗಲೇರುತ್ತವೆ.
ಇಂತಹ ಸಂದರ್ಭದಲ್ಲಿ ಹಳೆಯಬೇರುಗಳಿಗೆ ನಲುಗಿಹೋದ ಹೊಸ ಚಿಗುರುಗಳು ಇಂತಹ ಸಾಕ್ಷ್ಯಾಧಾರ.
ಇಲ್ಲಿ ಹೆಣ್ಣು ಗಂಡು ಮದುವೆ ಆಗಲೇಬೇಕಾ! ಆಗದಿದ್ದವರ ಕಥೆಗಳೇನು..
ಮನಸ್ಸಿನ ತೀರ್ಮಾನಗಳೇನು! ಅಬ್ಬಾ! ನಾವು ಗೋಡೆ ಬರಹಗಳಾಗಿದ್ದೇವೆ ಓದಲು ಚೆಂದ ಅದರಲ್ಲಿ ಬದುಕಿನ ಆನಂದ ಸಖ್ಯ ಸ್ವಲ್ಪ ಕಷ್ಟತಮ.
ಬದುಕನ್ನು ಹೋರಾಟದ ವಿಧಿ ನಾದದಲ್ಲಿ ಕೊಂಡೊಯ್ಯುವ ಹಕ್ಕಿರುವ ಪ್ರತಿ ಮನುಷ್ಯ ಸಮಾಜದ ಕೊಂಕಿಗಳಿಗೆ ಹೆದರುವ ಅಗತ್ಯವಿಲ್ಲ. ಸಮಾಜ ರೂಪಿಸಲ್ಪಟ್ಟಿದ್ದೇ ಹೊರೆತು ಸೃಷ್ಟಿ ಅಲ್ಲ. ಮದುವೆ ಒಂದು ಉತ್ತಮ ಆಯ್ಕೆ, ಸ್ಪಷ್ಟವಾದ ಅಲೋಚನೆ ಅದರ ವಿಧಿ..
ಜಾತಿ ನೆಪಗಳಲ್ಲಿ ಇನ್ನು ಬೇಯುವ ಅಗತ್ಯವಿಲ್ಲ. ದುಡಿಯುವ ಮನಸ್ಸಿಗೆ ಬದುಕುವ ಕಲೆಗೆ ಜಾತಿ ಎಂದಿಗೂ ನೆರವಾಗಿಲ್ಲ.. ಆಗಂತ ಜಾತಿ ಕೆಟ್ಟದ್ದು ಅಲ್ಲ, ಅದೊಂದು ಹಿಂದಿನಿಂದ ಆಚರಿಸಲ್ಪಟ್ಟದ್ದು. ಅದಕ್ಕೆ ಶರಣಾಗುತ್ತಾ ಸಾಗುವ ಹೆಜ್ಜೆ ಹೆಜ್ಜೆಯ ಸಂಬಂಧಗಳಲ್ಲೂ ಊಹಿಸಲಾರದಷ್ಟು ಗಾಯಗಳಿವೆ..
ಬದುಕು ಒಂದು ಆಯ್ಕೆ. ಗೆಲ್ಲುವ ಧೀಮಂತಿಕೆ ನಮ್ಮನ್ನು ಸದಾ ಹರ್ಷಗೊಳಿಸುತ್ತದೆ. ಸೋಲನ್ನು ಎಂದಿಗೂ ಒಪ್ಪಿಕೊಳ್ಳುವ ಅಗತ್ಯಕ್ಕೆ ಸಿಲುಕಬಾರದು..
ಕೆಲವೊಮ್ಮೆ ಕೆಲವು ಅನಿವಾರ್ಯಗಳಿಗೆ ರಾಜಿಯಾಗುತ್ತಾ ಅದರಾಚೆಗೆ ಅತಿಬೇಗ ಬರುವ ಲಘಿಮಾಕೌಶಲ ಕಲೆಯ ಅರಿವು ಬೇಕು.
ಸೋತ ಕಗ್ಗಸಾರ, ನುಡಿಯಾದ ಗುರುಪಾಠ ಇವೆಲ್ಲವೂ ಪ್ರಮಾಣಿಕತೆಗೆ ಒದಗಿದ ಅತ್ಯಂತ ಹೀನಾಯ ಸೋಲುಗಳು. ಆದರೆ ನಿಜವಾಗಿಯೂ ಸಮಾಜ ಗೆದ್ದಿರುವುದು ಸ್ವತಂತ್ರ ಆಯ್ಕೆಯ ಪ್ರಾಮಾಣಿಕ ಸತ್ವದಲ್ಲಿ ಮಾತ್ರ.
ಅದನ್ನು ಜೀವನಪ್ರೀತಿ ಎನ್ನೋಣ...
ಯಾವುದೇ ಜೀವಿ ಇಲ್ಲಿ ಸುಂದರವಾಗಿ ಬದುಕನ್ನು ಸಾಗಿಸುತ್ತಿದೆ ಎಂದು ಗಮನಿಸಿದಾಗ ಅದಕ್ಕೆ ಜೀವನಪ್ರೀತಿಯೇ ಮೂಲಾಧಾರ. ಈ ಜಾತಿ, ಅಪ್ರಮಾಣಿಕ ಹಠಗಳು, ಹಿರಿತನದ ಜಡ್ಡು ಕಟ್ಟಳೆಗಳು ಬದುಕನ್ನು ರೂಪಿಸಲಾರವು ಅವು ನಮ್ಮನ್ನು ಸದಾ ಒಂದು ಬಂಧನದೊಳಗೆ ಕಾಣಲು ಯತ್ನಿಸುವ ಅಚರಣೆಗಳಾಗಿವೆ ಅಷ್ಟೇ.
ಬದುಕಿಗೆ ಜೀವನಪ್ರೀತಿ ಮೂಲತಳಹದಿ. ಇದರಿಂದ ಆಯ್ಕೆ ನಮ್ಮ ಸ್ವತಂತ್ರ, ಅಲೋಚನಾ ಪರವಾದ ಹಕ್ಕು. ಅನಿವಾರ್ಯತೆಯಲ್ಲ.
ಉದ್ಯೋಗ, ಆನಂದ, ನೆಮ್ಮದಿಯ ನಲ್ಮೆತನಗಳಿಗೆ ಜೀವನಪ್ರೀತಿ ಒದಗಿಸೋಣ ಇಲ್ಲಿ ಗೆದ್ದವರಿಗೆ, ಪ್ರಮಾಣಿಕತೆಗೆ ಎಂದಿಗೂ ಗೌರವ ಇದೆ.
ಹೀಗೂ ಸಾಗೋಣ ಬನ್ನಿ - ಅಂಕುರ