ಬೇಂದ್ರೆ ಕಾವ್ಯ : ಪದನಿರುಕ್ತ ಲೋಕಾರ್ಪಣೆ
ಕಿಟೆಲ್ ಕೋಶದಂತೆ ಕನ್ನಡದಲ್ಲಿ ಮತ್ತೊಂದು ಸೇವೆ ಎಂದರೆ ಕೃಷ್ಣಪ್ಪನವರ ಬೇಂದ್ರೆ ಕಾವ್ಯ : ಪದನಿರುಕ್ತ –
ನಾಡೋಜ ಚಂದ್ರಶೇಖರ ಕಂಬಾರರು
ಜರ್ಮನಿಯಿಂದ ಬಂದು ಕನ್ನಡದ ದೇಸಿ ಪದಗಳನ್ನು ಊರೂರು ತಿರುಗಿ ಜನರಿಂದ ಅರ್ಥ ಸಂಗ್ರಹಿಸಿ ಕಿಟೆಲ್ ತಮ್ಮ ಕೋಶವನ್ನು ರಚಿಸಿದನು ಅಂತಹ ಕಾರ್ಯವನ್ನು ಸಮರ್ಥವಾಗಿ ಕೃಷ್ಣಪ್ಪನವರು ಬೇಂದ್ರೆ ಕಾವ್ಯದ ಮೇಲೆ ಮಾಡಿದ್ದಾರೆ ಈ ನಿಮ್ಮ ಕಾರ್ಯಕ್ಕಾಗಿ ಇಡೀ ಕನ್ನಡ ನಾಡು ಕೃತಜ್ಞವಾಗಿದೆ ಎಂದು ಡಾ. ಚಂದ್ರಶೇಖರ ಕಂಬಾರ ಅವರು ಉದಯಭಾನು ಕಲಾಸಂಘ ಎರ್ಪಡಿಸಿದ್ದ ‘ಬೇಂದ್ರೆಕಾವ್ಯ: ಪದನಿರುಕ್ತ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅಭಿಪ್ರಾಯ ಪಟ್ಟರು. ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಮತ್ತು ಸಾಮಾಜಿಕವಾಗಿ ಸುಮಾರು ಅರವತ್ತು ವರ್ಷಗಳ ಕಾಲ ಈ ನಗರದಲ್ಲಿ ಅನನ್ಯ ಸೇವೆ ಮಾಡಿದ ಉದಯಭಾನು ಕಲಾಸಂಘದ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ ಇದರ ಕಾರ್ಯವನ್ನು ಯಾವುದೇ ಸಂಸ್ಥೆಗೂ ಹೋಲಿಸಲಾಗದು, ಇದು ‘ಪ್ರಜಾ ಜನ್ಯಕಾರ್ಯ’ ಎಂದು ಗೌರವ ವ್ಯಕ್ತಪಡಿಸಿದರು. ಕುವೆಂಪು, ಬೇಂದ್ರೆ ಮತ್ತು ಪಂಜೆ ಮಂಗೇಶರಾಯರು ಈ ಮೂವರು ಜನಪದದಿಂದ ಸಾಕಷ್ಟು ಸಾಮಾಗ್ರಿಗಳನ್ನು ತಂದು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. ಕನ್ನಡ ಸಾಹಿತ್ಯದ ಸೂರ್ಯಚಂದ್ರರೆಂದು ಇವರಿಬ್ಬರನ್ನು ಕರೆಯುತ್ತಿದ್ದರು ಬೇಂದ್ರೆಯವರು ತುಂಟತನದಿಂದ ನಾನು ಸೂರ್ಯನೋ, ಚಂದ್ರನೋ ಹೇಳಿ ಎಂದು ತಮಾಷೆ ಮಾಡಿದ್ದರು. ಕಿಟೆಲ್ ಜರ್ಮನಿಯಿಂದ ಬಂದು ಜನಸಾಮಾನ್ಯರ ಬಳಿಗೆ ಹೋಗಿ ಪ್ರತಿಯೊಂದು ಪದವನ್ನು ತಿಳಿದವರು ಹೇಳಿ ಎಂದು ಕೇಳುತ್ತಾ ಕಿಟೆಲ್ ಕೋಶ ರಚಿಸಿದರು. ಇವತ್ತಿಗೂ ಶ್ರೇಷ್ಠವಾದ ಕೃತಿಯದು. ಅಂತಹ ಅನನ್ಯವಾದ ಕಾರ್ಯವನ್ನು ಕೃಷ್ಣಪ್ಪನವರು ಮಾಡಿದ್ದಾರೆ. ನಾಲ್ಕು ದಶಕಗಳ ಕಾಲ ತಪಸ್ಸಿನಂತೆ ಮಾಡಿದ್ದಾರೆ. ಇದು ಬಹಳ ಸಾರ್ಥಕ ಕೆಲಸ ಹಾಗೂ ಇನ್ನೊಬ್ಬರು ಮಾಡಲಾಗದ ಕೆಲಸವಾಗಿ ಕಾಣುತ್ತದೆ. ನಾನೂ ನಿಮಗೆ ಕೃತಜ್ಞನಾಗಿದ್ದೇನೆ ಇದಕ್ಕಿಂತ ಹೆಚ್ಚು ಹೇಳಲಾಗದು ಎಂದು ಗೌರವ ಸಲ್ಲಿಸಿದರು.
‘ಬೇಂದ್ರೆಕಾವ್ಯ : ಪದ ನಿರುಕ್ತ’ ಗ್ರಂಥವನ್ನು ಪರಿಚಯಿಸುತ್ತಾ ಮೂರು ಸಾವಿರ ವರ್ಷಗಳ ಹಿಂದೆ ಸಂಸ್ಕೃತದಲ್ಲಿ ವೇದಗಳಿಗೆ ವ್ಯುತ್ಪತ್ತಿಯನ್ನು ರಚಿಸಿ ನಿರುಕ್ತ ಎಂಬ ಹೆಸರಿನಲ್ಲಿ ಯಾಸ್ಕನು ಬರೆದಿದ್ದಾನೆ. ಇದು ಭಾರತದಲ್ಲಿಯೇ ಇಂತಹ ಕಾರ್ಯ ಇದುವರೆಗೂ ಆಗಿಲ್ಲ. ಕನ್ನಡ ಸಾಹಿತ್ಯದಲ್ಲಿ ಆಧುನಿಕ ಕಾಲದಲ್ಲಿ ಕೃಷ್ಣಪ್ಪನವರ ಬೇಂದ್ರೆಕಾವ್ಯ: ಪದನಿರುಕ್ತ ಬರುವವರೆಗೂ ಇಂತಹ ಕಾರ್ಯ ಮತ್ತೊಂದು ಆಗಿಲ್ಲ. ಒಬ್ಬ ಕವಿಯನ್ನು ಪೂರ್ಣವಾಗಿ ಅಧ್ಯಯನ ಮಾಡಿ ಬೇಂದ್ರೆ ಕಾವ್ಯ ಅಧ್ಯಯನ ಮಾಡುವವರಿಗೆ ನಿರುಕ್ತ ರಚಿಸಿಕೊಟ್ಟಿದ್ದಾರೆ. ಉಕ್ತ, ಅನುಕ್ತ, ದುರುಕ್ತ ಎಂಬ ಸಂಸ್ಕೃತದಲ್ಲಿ ಒಂದು ಯಾಸ್ಕನ ಕೃತಿ ಮಾತ್ರವಿದೆ. ಒಂದು ಕಾವ್ಯಕ್ಕೆ ಪ್ರವೇಶ ಮಾಡಲು ಅಂತಹ ಕಾರ್ಯವನ್ನು ಸಮಗ್ರವಾಗಿ ನೀಡಿದೆ. ತೆಲುಗಿನಲ್ಲಿ ಇಂತಹ ಹಲವು ಸಾಹಿತಿಗಳ ಮೇಲೆ ಇಂತಹ ಕಾರ್ಯವಾಗಿದೆ. ಕನ್ನಡದಲ್ಲಿ ಒಬ್ಬ ಕವಿಯ ಮೇಲೆ ಆಗಿರುವುದು ವಿಶೇಷ. ‘ಯಾವತ್ತು’ ಎಂಬ ಪದವು ಮೂರು ಅರ್ಥಗಳನ್ನು ಧ್ವನಿಸುತ್ತಾ ಹಲವು ಅರ್ಥಗಳಿಗೆ ದಾರಿ ಮಾಡಿಕೊಡುತ್ತದೆ. ಮೀಮಾಂಸೆಯ ವಾಚ್ಯಾರ್ಥ, ಲಕ್ಷಾö್ಯರ್ಥ, ವ್ಯಂಗ್ಯಾರ್ಥ ಈ ಮೂರು ಅರ್ಥಗಳನ್ನು ತಿಳಿದು ಕಾವ್ಯ ಪ್ರವೇಶ ಮಾಡಬೇಕು. ಈ ಮೂರು ಅರ್ಥದ ಜೊತೆಗೆ ಜನಪದ ಸಾಹಿತ್ಯವನ್ನು ಸೇರಿಸಿ ಬೇಂದ್ರೆ ಕಾವ್ಯವನ್ನು ಪ್ರವೇಶ ಮಾಡುವವರಿಗೆ ದಾರಿ ಮಾಡಿಕೊಟ್ಟಿದ್ದಾರೆ. ಕನ್ನಡದಲ್ಲಿ ಯಾಸ್ಕನ ಆ ಕಾರ್ಯವನ್ನು ನಿರ್ವಹಿಸಿದ್ದಾರೆ. ಈ ಗ್ರಂಥದ ಪ್ರತಿ ಪದವನ್ನು ಪರಿಶೀಲಿಸಿರುವ ನಾನು ನಿರುಕ್ತಎಂಬ ಹೆಸರನ್ನು ನೀಡಿದೆ. ವಿಶ್ವವಿದ್ಯಾಲಯದ ಅಧ್ಯಾಪಕರು, ವಿದ್ಯಾರ್ಥಿಗಳು ಬೇಂದ್ರೆಕಾವ್ಯ ಅಧ್ಯಯನ ಮಾಡಲು ಸದಾ ಜೊತೆಯಲ್ಲಿ ಇಟ್ಟುಕೊಳ್ಳುವ ಕೃತಿಯಾಗಿದೆ. ಬೇಂದ್ರೆ ಕಾವ್ಯಗಳ ಕ್ರಮಾನುಗತಿಯಲ್ಲಿ ಇದರೊಳಗೆ ಅಧ್ಯಯನದಲ್ಲಿ ಅಡ್ಡಿಯಾಗುವ ಪದಗಳನ್ನು ಅರ್ಥ ನೀಡುತ್ತಾ ಸಾಗಿದ್ದಾರೆ. ಒಬ್ಬ ವಿಮರ್ಶಕನಿಗೆ ಈ ಕಾರ್ಯ ಸಾಧ್ಯವಾಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಕೃಷ್ಣಪ್ಪನವರು ಬೇಂದ್ರೆಯವರನ್ನು ಪೂರ್ಣವಾಗಿ ತಮ್ಮೊಳಗೆ ಅವಗಾಹನೆ ಮಾಡಿಕೊಂಡು ಹಲವು ಓದಿನಲ್ಲಿ ದಕ್ಕಿಸಿಕೊಂಡು ‘ಬೇಂದ್ರೆ ಕಾವ್ಯಕ್ಕೆ ಸುವರ್ಣ ಪ್ರವೇಶಿಕೆ’ ನೀಡಿದ್ದಾರೆ. ಇದೊಂದು ಸಾರಸ್ವತ ಯಜ್ಞದಂತೆ ಈ ಕಾರ್ಯ ಮಾಡಿದ್ದಾರೆ ಎಂದು ಮಲ ಪುರಂ ಜಿ. ವೆಂಕಟೇಶ ಅವರು ಕೃತಿಯನ್ನು ತಮ್ಮ ಅಧ್ಯಯನದ ದೃಷ್ಠಿಕೋನದಲ್ಲಿ ಪರಿಚಯಿಸಿದರು.
ಲೇಖಕರಾದ ಡಾ. ಜಿ ಕೃಷ್ಣಪ್ಪನವರು ತಮ್ಮ ಕೃತಿ ರಚನೆ ಕುರಿತು ಚಂದ್ರಶೇಖರ ಕಂಬಾರರಿಂದ ಬಿಡುಗಡೆಯಾದ ಈ ನನ್ನ ಕೃತಿಯು ರಾಷ್ಟç ಗೌರವ ದೊರೆತಂತಾಯಿತು. ಈ ಕೃತಿಯಲ್ಲಿ ನನಗೆ ತಿಳಿದ ಕಾವ್ಯದ ಸವಿಯನ್ನು ಹಂಚಿದ್ದೆÃನೆ. ಮದಗ, ಅಕ್ಕಿ, ಮದಗುಣಕಿ, ಗುಂಭ, ಹಿಂಡವಳ, ಹಡಗದ ಹುಡುಗಿ, ಮಾವಿನ ಪೀಪಿ ಮೊದಲಾದ ಎಲ್ಲಿಯೂ ಅರ್ಥವಿಲ್ಲದ ಪದಗಳನ್ನು ಇಲ್ಲಿ ಮೊದಲಿಗೆ ಪರಿಚಯಿಸಿದ್ದೆÃನೆ. ಬೇಂದ್ರೆಯವರು ಆತ್ಮಕಥೆ ಬರೆದಿಲ್ಲವೆಂದು ಕೆಲವು ಬೀಸು ಹೇಳಿಕೆ ನೀಡುತ್ತಾರೆ ಆದರೆ ಒಬ್ಬ ಕವಿಯನ್ನು ಗದ್ಯದಲ್ಲಿಯೇ ಬರೆಯಬೇಕೆಂದು ಎಳೆಯುತ್ತಾ ನಾವು ಬೇಂದ್ರೆಯವರನ್ನು ಸರಿಯಾಗಿ ಗಮನಿಸಿಲ್ಲ. ಇವರ ಸಖೀಗೀತ, ಬಾಲ್ಯಕಾಂಡ ಮತ್ತು ಹಾಡು ಪಾಡು ಇವು ಮೊದಲ ಬಾರಿಗೆ ಕಾವ್ಯದಲ್ಲಿ ಆತ್ಮಚರಿತ್ರೆ ಬರೆದ ಕವಿ ಆಗಿದ್ದಾರೆ. ಕೃಷ್ಣಪ್ಪನವರು ತಮ್ಮ ಈ ಕೃತಿಯ ಕಾರ್ಯಕ್ಕೆ ಸಹಾಯಕವಾದ ಎಲ್ಲರನ್ನೂ ಅತ್ಯಂತ ಸಹೃದಯತೆಯಿಂದ ಕೃತಿಯನ್ನು ನೀಡುವುದರ ಮೂಲಕ ನೆನಪಿಸಿಕೊಂಡರು.
ಅಧ್ಯಕ್ಷತೆಯನ್ನು ವಹಿಸಿದ್ದ ಪಿ. ವಿ ನಾರಾಯಣ ಅವರು ಹಾಸು ಹೊದ್ದಾಸಿ ಹೊದ್ದವರು, ಕೊಟ್ಟು ತೊಟ್ಟವರು, ಉಂಡು ತೇಗಿದವರು ಎಂಬಂತೆ ತೇಗು ಈ ಪದನಿರುಕ್ತವಾಗಿದೆ. ತುಂಬು ಹೊಳೆಯಲ್ಲಿ ಈಜಿ ಬರುವ ಬಸವನ ಕೊಂಬು ಮಾತ್ರ ಕಾಣುತ್ತದೆ, ನೀರಿನಲ್ಲಿ ಅದರ ಕಾಲಿನ ಶ್ರಮ ಇರುತ್ತದೆ. ಆದೇ ರೀತಿ ಕೃಷ್ಣಪ್ಪನವರು ಶ್ರಮಪಟ್ಟಿದ್ದಾರೆ. ಹಾಗೇಯೆ ಅನಂತರಾಮು, ಶಂಕರ ಮೊಕಾಶಿ ಪುಣೇಕರ ಮೊದಲಾದವರು ಕೃಷ್ಣಪ್ಪನವರ ಕುರಿತ ಮಾತುಗಳನ್ನು ನೆನಪಿಸಿಕೊಂಡರು. ಕನ್ನಡದಲ್ಲಿ ವಿಮರ್ಶಕರು ದಾರಿ ತಪ್ಪಿಸುವ ಕಾರ್ಯ ಮಾಡುತ್ತಾರೆ ಹೊರೆತು ದಾರಿ ತೋರಿಸುವ ಕಾರ್ಯವಲ್ಲ. ಇಲ್ಲಿ ಕೃಷ್ಣಪ್ಪನವರು ಬೇಂದ್ರೆಯವರ ಕಾವ್ಯ ಅನುಸಂಧಾನದಲ್ಲಿ ಯಶಸ್ವಿಯಾಗಲು ನಮ್ಮಂತೆ ಕಾವ್ಯಮೀಮಾಂಸೆಯ ಚೌಕಟ್ಟಿನಲ್ಲಿ ದಾರಿ ತಪ್ಪಿದವರಲ್ಲ. ಅತ್ಯಂತ ಸಹಜವಾಗಿ ಬೇಂದ್ರೆಯವರ ಕಾವ್ಯ ಅನುಭವ ಮೂಲಕವಾದ ಅನುಸಂಧಾನವಾಗಿ ಕರಗತವಾಗಿದೆ, ಅಭ್ಯಾಸ ಪೂರ್ವಕವಾಗಿ ಅಲ್ಲ. ಇವರು ನೀಡುವ ಪದಗಳ ಅರ್ಥ ನನಗೂ ಬೇರೆ ಬೇರೆ ರೀತಿಯಲ್ಲಿ ಅರ್ಥವಾಗಿದೆ. ಬೇಂದ್ರೆ ಇವರಿಗೂ ಕೂಡ ಪೂರ್ಣವಾಗಿ ದಕ್ಕಿಲ್ಲ. ಏಕೆಂದರೆ ಒಬ್ಬ ಕವಿ ಪೂಣವಾಗಿ ಒಬ್ಬರಿಗೆ ದಕ್ಕಿದರೆ ಆ ಕವಿಯನ್ನು ಮತ್ತೆ ಓದುವುದಿಲ್ಲ. ಕುರ್ತಕೋಟಿ, ಆಮೂರ ಮೊದಲಾದವರ ಅಧ್ಯಯನದಲ್ಲಿ ಉಂಟಾದ ತಪ್ಪುಗಳನ್ನು ಗುರ್ತಿಸಿ ಸರಿಯಾದ ಅರ್ಥ ನೀಡಿ ಬೇಂದ್ರೆ ಕಾವ್ಯಕ್ಕೆ ಸಂಪಾದನಾ ಕಾರ್ಯವನ್ನು ಕೂಡ ಮಾಡಿದ್ದಾರೆ. ಈ ಕಾರ್ಯವನ್ನು ಮೆಚ್ಚಿದ ಪುಣೇಕರರು ಇವರ ಕಾರ್ಯಕ್ಕಾಗಿ ಐವತ್ತು ವರ್ಷ ಕಾದಿದ್ದೆÃನೆ ಎಂದು ಹೇಳಿದ ಮಾತನ್ನು ನೆನಪಿಸಿಕೊಂಡರು. ರವದಿ ಎಂಬ ಪದಕ್ಕೆ ಜನಪದ ಅರ್ಥವನ್ನು ಮತ್ತು ಆಧ್ಯಾತ್ಮಿಕ ಅರ್ಥದೊಂದಿಗೆ ಜೋಡಿಸುವ ಕ್ರಮವನ್ನು ನೋಡಬಹುದು ಎಂದರು. ಬೇಂದ್ರೆಯವರನ್ನು ಮಗುವಾಗಿ ಕಂಡು ಯಶೋಧೆಯಾಗಿ ಮಗುವಿನ ಎಲ್ಲಾ ಲೀಲೆಗಳನ್ನು ನೋಡಿದ್ದಾರೆ. ನಾವು ದೇವಕಿಯನ್ನು ಮರೆತು ಯಶೋಧೆಯನ್ನು ಕುವೆಂಪು, ಪುತಿನ ಅವರಿಗೂ ಇಂತಹ ಕಾರ್ಯ ಮಾಡುವ ಯಶೋಧೆ ಸಿಗಲಿ ಎಂದು ಬೇಂದ್ರೆ ಕಾವ್ಯದ ಯಶೋಧೆಯಾದ ಕೃಷ್ಣಪ್ಪನವರಿಗೆ ಅಭಿನಂದಿಸುತ್ತೆÃನೆ ಎಂದರು
ಪ್ರಸ್ತಾವಿಕ ನುಡಿಗಳನ್ನು ನುಡಿದ ಉದಯಭಾನು ಕಲಾ ಸಂಘದ ಕಾರ್ಯದರ್ಶಿಗಳಾದ ನರಸಿಂಹ ಅವರು ಚಂದ್ರಶೇಖರ ಕಂಬಾರರನ್ನು ಕನ್ನಡ ಸಾಹಿತ್ಯದ ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಹಾಗೂ ಕನ್ನಡದ ಜ್ಞಾನಪೀಠವೆಂದು ಗೌರವಿಸಿ ಸ್ವಾಗತಿಸಿದರು. ಕೃಷ್ಣಪ್ಪನವರು ಮೊದಲ ಭಾಷಣ ೧೯೭೪ರಲ್ಲಿ ನಮ್ಮ ಉದಯ ಭಾನು ಕಲಾಸಂಘದಲ್ಲಿ ಮಾಡಿದ್ದರು. ಅದು ಬೇಂದ್ರೆ ಸಾಹಿತ್ಯ ಕುರಿತ ಮೊದಲ ಭಾಷಣವಾಗಿತ್ತು. ಯಾವುರಾಕೀ ನೀ ಮಾಯಾಕಾರತಿ ಕವಿತೆಯನ್ನು ಜನಪದ ಕಂಸಾಳೆಗೆ ಅಳವಡಿಸಿದ್ದರು ಎಂದರು. ಈ ಎಲ್ಲಾ ಕಾರ್ಯಗಳÀನ್ನು ನೆನಪಿಸಿಕೊಳ್ಳುತ್ತಾ ಉದಯಭಾನು ಕಲಾ ಸಂಘವು ನಾಡಿನಲ್ಲಿ ಶ್ರೆÃಷ್ಠ ಕಾರ್ಯಗಳನ್ನು ಮಾಡುತ್ತಾ ಬಂದಿರುವ ಬಗೆಯನ್ನು, ಸಾರ್ವಜನಿಕ ಸೇವೆಯನ್ನು ನೆನಪಿಸಿಕೊಂಡರು. ಬೇಂದ್ರೆಯವರ ಕಾವ್ಯವನ್ನು ನಿರಂತರವಾಗಿ ಅಧ್ಯಯನ, ಪರಿಚಾರಿಕೆ ಮಾಡಿದ ಕೃಷ್ಣಪ್ಪನವರ ಸೇವೆಗೆ ೨೦೧೬ರಲ್ಲಿ ನಮ್ಮ ಸಂಘವು ಇವರು ರಚಿಸಿರುವ ಸಾಹಿತ್ಯ ಕುರಿತು ವಿಚಾರ ಸಂಕಿರಣ ಏರ್ಪಡಿಸಿ ‘ಕಾವ್ಯಶೋಧಕ’ ಗೌರವ ಗ್ರಂಥ ಅರ್ಪಿಸಿದೆ. ಈಗ ವಂಶಿ ಪ್ರಕಾಶನದ ಜೊತೆಗೆ ಬೇಂದ್ರೆಕಾವ್ಯ: ಪದನಿರುಕ್ತ ಬಿಡುಗಡೆ ಮಾಡುತ್ತಿದೆ ಎಂದು ಸಂತೋಷಪಟ್ಟರು. ಗಣ್ಯರಾದ ಕೃತಿಯನ್ನು ಲೋಕಾರ್ಪಣೆ ಮಾಡಿದ ಚಂದ್ರಶೇಖರ ಕಂಬಾರರು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪಿ.ವಿ ನಾರಾಯಣ, ಗ್ರಂಥ ಪರಿಚಯ ಮಾಡಿದ ವಿಶ್ರಾಂತ ಕುಲಪತಿ ಮಲ್ಲೆÃಪುರಂ ಜಿ. ವೆಂಕಟೇಶ್, ಸಂಘದ ಅಧ್ಯಕ್ಷರಾದ ಬಿ. ಕೃಷ್ಣ ಅವರು, ವಂಶಿ ಪ್ರಕಾಶನದ ಮಾಲೀಕರಾದ ಎನ್. ಪ್ರಕಾಶ್ ಅವರನ್ನು ಉದಯಭಾನು ಕಲಾಸಂಘದ ವತಿಯಿಂದ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ನಾಗಚಂದ್ರಿಕಾ ಭಟ್ ಹಾಗೂ ಸಂಗಡಿಗರು ಬೇಂದ್ರೆ ಕಾವ್ಯ ಗಾಯನ ಮಾಡಿದರು. ಸಂಘದ ಕಾರ್ಯಾಧ್ಯಕ್ಷರಾದ ಸತ್ಯನಾರಾಯಣ ಅವರು ಎಲ್ಲರಿಗೂ ವಂದನೆಗಳನ್ನು ಸಲ್ಲಿಸಿದರು.