ಈ ಬ್ಲಾಗ್ ಅನ್ನು ಹುಡುಕಿ

ಸೋಮವಾರ, ಏಪ್ರಿಲ್ 13, 2026

Let the Burden of Identity Change


English Version
 

Let the Burden of Identity Change

By Dr. Ravishankar A.K.

​The core purpose of education is to liberate a soul from its shackles. However, if education itself starts creating new bonds, its true value is lost. One such modern "shackle" is the heavy ID card that hangs around a child's neck. Today, we treat a child’s existence as a mere record, symbolized by a plastic card. For a tiny child heading to school, that thick nylon strap and heavy plastic tag feel like an unnecessary weight of discipline. While identity is important, it should never become a burden on a child's natural growth and innocence. Identity should be a reflection of one’s inner character, not an external display of pomp.

A Concern for Health

​If we look at this scientifically, the neck muscles of a young child are incredibly tender and delicate. Making them wear a heavy plastic card on a thick nylon strap for six to eight hours a day can have adverse effects on their physical well-being. These straps often cause skin irritation and discomfort. Every child is naturally active and energetic, yet we focus on "disciplining" them with these tags rather than nurturing their natural vibrance. Our thoughts should always center on the child’s comfort and happiness.

Global Perspectives

​Many developed nations have moved away from this rigid system. In Japan, primary schools use "Meifuda"—simple, lightweight tags that are pinned or clipped to the uniform. They are extremely light and do not strain the neck. In Finland, the culture of mandatory ID cards for young children is minimal; children are recognized through personal connection and trust, prioritizing their natural movement. In the UK, Health and Safety Executive (HSE) guidelines discourage hanging lanyards around the necks of small children, leading many schools to opt for clip-on badges instead.

The Responsibility of Elders

​When choosing these ID cards, parents often overlook the discomfort they cause, focusing instead on the school's "branding" or "discipline." It is time for parents to ask: "Is my child comfortable wearing this?" Educational institutions must stop using children as walking advertisements for their school logos through these heavy tags. A school’s reputation should be built on the wisdom it imparts, not on the weight of its accessories.

Meaningful Alternatives

​We must find alternatives that suit our climate and culture.

  • ​Information could be printed on a small piece of soft cotton fabric and stitched onto the uniform.
  • ​Instead of plastic, beautiful and soft embroidery can be used.
  • ​In this digital age, a tiny QR code could be printed on the sleeve, which can be scanned only when necessary.

Conclusion

​Identity is a part of a person's existence; it should not be a weight imposed from the outside. We often talk about the weight of school bags, but we remain silent about the "silent burden" of the plastic tag around their necks. We must break free from this rigid mindset.

​In truth, a child’s smile and their enthusiasm for learning are their real identity. A child is like a blooming flower; we should not weigh the flower down. Instead, we must create an environment where the flower can spread its fragrance freely. Let us remember—every child is the responsibility of this society.

ಭಾನುವಾರ, ಜನವರಿ 25, 2026

ಆಧ್ಯಾತ್ಮದೊಂದಿಗೆ ಗಣರಾಜ್ಯದ ಚಿಂತನೆಗಳು

 


 ಗಣರಾಜ್ಯದ ಚಿಂತನೆಗಳು

ಭಾರತವು ಬಹುತ್ವದೊಳಗೆ ಏಕತೆ ರೂಪಿಸಿಕೊಂಡ ದೇಶವಾಗಿದೆ. ೧೯೫೦ರ ಜನವರಿ ೨೬ರಂದು ಭಾರತಕ್ಕೆ ಸಂವಿಧಾನದ ಮೂಲಕ ಗಣರಾಜ್ಯ ಸ್ವರೂಪ ನೀಡಿದರು. ಈ ಮಣ್ಣಿನ ದಾರ್ಶನಿಕರು ಕಂಡುಕೊಂಡಿದ್ದ ಪರಮೋನ್ನತ ‘ಧರ್ಮ'ದ ಆಧುನಿಕ ಲಿಖಿತ ರೂಪವಾಗಿತ್ತು. ಗಣರಾಜ್ಯೋತ್ಸವದ ಈ ಸಂಭ್ರಮದ ಸಂದರ್ಭದಲ್ಲಿ, ನಮ್ಮ ಸಂವಿಧಾನದ ಆಶಯಗಳಿಗೂ ಮತ್ತು ಭಾರತೀಯ ಆಧ್ಯಾತ್ಮಿಕ ಚಿಂತನೆಗಳಿಗೂ ಇರುವ ಅವಿನಾಭಾವ ಸಂಬಂಧವು ದೇಹ ಮತ್ತು ಮನಸ್ಸಿನಂತಹ ಹೊಂದಾಣಿಕೆಯಾಗಿದೆ.

ವಸುದೈವ ಕುಟುಂಬಕಂ

ಭಾರತೀಯ ಆಧ್ಯಾತ್ಮದ ಸಾರವೆಂದರೆ ‘ಏಕತೆ'. ಈ ದೇಶದ ಋಷಿ-ಮುನಿಗಳು ಕಂಡುಕೊಂಡ ಅತ್ಯುನ್ನತ ಸತ್ಯವೇನೆಂದರೆ, ಈ ಜಗತ್ತಿನ ಎಲ್ಲ ಜೀವರಾಶಿಗಳೂ ಒಂದೇ ಪರಮ ಚೇತನದ ವಿವಿಧ ರೂಪಗಳು. ಮಹಾ ಉಪನಿಷತ್ತಿನ ಪ್ರಸಿದ್ಧ ಮಂತ್ರವು ಹೀಗೆ ಹೇಳುತ್ತದೆ: ‘ಅಯಂ ನಿಜಃ ಪರೋ ವೇತಿ ಗಣನಾ ಲಘುಚೇತಸಾಮ್ | ಉದಾರಚರಿತಾನಾಂ ತು ವಸುಧೈವ ಕುಟುಂಬಕಮ್ ||’ (ಮಹಾ ಉಪನಿಷತ್, ೬.೭೧) ಇವನು ನನ್ನವನು, ಇವನು ಪರಕೀಯನು ಎಂದು ಎಣಿಸುವುದು ಸಂಕುಚಿತ ಮನೋಭಾವದ ಲಕ್ಷಣ; ವಿಶಾಲ ಹೃದಯದವರಿಗೆ ಇಡೀ ಜಗತ್ತೇ ಒಂದು ಕುಟುಂಬ. ನಮ್ಮ ಸಂವಿಧಾನದ ಪೀಠಿಕೆಯಲ್ಲಿ ಉಲ್ಲೇಖಿಸಲಾದ ‘ಭ್ರಾತೃತ್ವ' ಎಂಬ ಪದಕ್ಕೆ ಮೂಲವೇ ಈ ಆಧ್ಯಾತ್ಮ ಚಿಂತನೆ. ವೈವಿಧ್ಯತೆಯನ್ನು ಸಂಭ್ರಮಿಸುತ್ತಲೇ ಎಲ್ಲರನ್ನೂ ಒಗ್ಗೂಡಿಸುವ ಈ ಮಂತ್ರವೇ ಗಣರಾಜ್ಯದ ಜೀವಾಳವಾಗಿದೆ. ನಾವು ಇಂದು ಮಾತನಾಡುತ್ತಿರುವ ‘ಜಾಗತಿಕ ಗ್ರಾಮ' ಪರಿಕಲ್ಪನೆಗೆ ಸಾವಿರಾರು ವರ್ಷಗಳ ಹಿಂದೆಯೇ ಭಾರತೀಯ ಆಧ್ಯಾತ್ಮವು ನಾಂದಿ ಹಾಡಿತ್ತು. ಸಂವಿಧಾನವು ಈ ಆಧ್ಯಾತ್ಮಿಕ ಸೋದರತ್ವವನ್ನು ಕಾನೂನಾತ್ಮಕ ಚೌಕಟ್ಟಿನಲ್ಲಿ ನಿರೂಪಿಸಿದೆ.

ಸಾಂವಿಧಾನಿಕ ಸಮಾನತೆ ಮತ್ತು ಅದ್ವೈತ ದರ್ಶನ

ಸಂವಿಧಾನದ ೧೪ನೇ ವಿಧಿಯು ‘ಕಾನೂನಿನ ಮುಂದೆ ಎಲ್ಲರೂ ಸಮಾನರು' ಎಂದು ಘೋಷಿಸುತ್ತದೆ. ಈ ಸಾಮಾಜಿಕ ಸಮಾನತೆಯ ಮೂಲವು ಉಪನಿಷತ್ತುಗಳ ‘ಅದ್ವೆöÊತ' ಚಿಂತನೆಯಲ್ಲಿದೆ. ‘ಸರ್ವಂ ಖಲ್ವಿದಂ ಬ್ರಹ್ಮ’ (ಛಾಂದೋಗ್ಯ ಉಪನಿಷತ್, ೩.೧೪.೧) ಅಂದರೆ ‘ಇರುವುದೆಲ್ಲವೂ ಆ ಪರಬ್ರಹ್ಮವೇ' ಎಂಬ ದರ್ಶನವು ಮನುಷ್ಯರಲ್ಲಿ ಮೇಲು-ಕೀಳು ಎಂಬ ಭೇದವನ್ನು ಸಂಪೂರ್ಣವಾಗಿ ನಿರಾಕರಿಸುತ್ತದೆ. ಸಮಾಜದಲ್ಲಿ ಜಾತಿ, ಧರ್ಮ ಅಥವಾ ಲಿಂಗದ ಹೆಸರಿನಲ್ಲಿರುವ ಅಸಮಾನತೆಯನ್ನು ತೊಡೆದುಹಾಕಲು ಸಂವಿಧಾನವು ಹಾಕಿಕೊಟ್ಟ ತತ್ವಗಳು, ವಾಸ್ತವವಾಗಿ ನಮ್ಮ ಅಂತರಾತ್ಮದಲ್ಲಿರುವ ದೈವತ್ವದ ಸಮಾನತೆಯನ್ನು ಸಾಮಾಜಿಕವಾಗಿ ಪ್ರತಿಷ್ಠಾಪಿಸುವ ಪ್ರಯತ್ನಗಳಾಗಿವೆ.

ಡಾ. ಬಿ.ಆರ್. ಅಂಬೇಡ್ಕರ್ ಅವರು ಸಮಾನತೆಯನ್ನು ಕೇವಲ ರಾಜಕೀಯ ಹಕ್ಕಾಗಿ ನೋಡಲಿಲ್ಲ, ಬದಲಿಗೆ ಅದನ್ನು ವ್ಯಕ್ತಿಯ ಘನತೆಯ ಪ್ರಶ್ನೆಯಾಗಿ ನೋಡಿದರು. ಋಗ್ವೇದವು “ಅಜ್ಯೇಷ್ಠಾಸೋ ಅಕನಿಷ್ಠಾಸೋ ಏತೇ ಸಭ್ರಾತರೋ ವಾ ವೃಧುಃ ಸೌಭಾಗ್ಯಾಯ” (ಋಗ್ವೇದ ೫.೬೦.೫) ಎಂದು ಹೇಳುತ್ತದೆ, ಅಂದರೆ “ಇಲ್ಲಿ ಯಾರೂ ದೊಡ್ಡವರಲ್ಲ, ಯಾರೂ ಸಣ್ಣವರಲ್ಲ; ಎಲ್ಲರೂ ಸೋದರರಂತೆ ಸಮಾನವಾಗಿ ಅಭಿವೃದ್ಧಿ ಹೊಂದಬೇಕು.” ಇದೇ ಆಶಯವನ್ನು ಕುವೆಂಪು ಅವರು ‘ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ’ವೆಂದರು. ಈ ಸಂದೇಶವು ಸಂವಿಧಾನದ ಸಮಾನತೆಯ ಹಕ್ಕಿನಲ್ಲಿ ಅಡಗಿದೆ.

ಧರ್ಮನಿರಪೇಕ್ಷತೆ ಮತ್ತು ಸರ್ವಧರ್ಮ ಸಮಭಾವ

ಭಾರತವು ಧರ್ಮನಿರಪೇಕ್ಷ ರಾಷ್ಟ್ರವೆಂದು ಕರೆಸಿಕೊಳ್ಳಲು ನಮ್ಮ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಸಹಿಷ್ಣುತೆಯೇ ಕಾರಣ. ಋಗ್ವೇದದ ಪ್ರಸಿದ್ಧ ವಾಕ್ಯ: “ಏಕಂ ಸತ್ ವಿಪ್ರಾ ಬಹುಧಾ ವದಂತಿ” (ಋಗ್ವೇದ, ೧.೧೬೪.೪೬) ಸತ್ಯವು ಒಂದೇ ಆಗಿದ್ದರೂ ಜ್ಞಾನಿಗಳು ಅದನ್ನು ವಿವಿಧ ರೀತಿಯಲ್ಲಿ ವರ್ಣಿಸುತ್ತಾರೆ. ಈ ಉದಾತ್ತವಾದ ಆಧ್ಯಾತ್ಮಿಕ ಚಿಂತನೆಯೇ ಸಂವಿಧಾನದ ೨೫ರಿಂದ ೨೮ನೇ ವಿಧಿಗಳವರೆಗೆ ಕಂಡುಬರುವ ‘ಧಾರ್ಮಿಕ ಸ್ವಾತಂತ್ರ‍್ಯದ ಹಕ್ಕು'ಗಳಿಗೆ ಪ್ರೇರಣೆ ಹೊಂದಿದೆ.

ಪಾಶ್ಚಿಮಾತ್ಯ ದೇಶಗಳಲ್ಲಿ ‘ಸೆಕ್ಯುಲರಿಸಂ' ಎಂದರೆ ಧರ್ಮ ಮತ್ತು ರಾಜಕಾರಣದ ನಡುವಿನ ಗೋಡೆ. ಆದರೆ ಭಾರತದಲ್ಲಿ ಅದು ‘ಸರ್ವಧರ್ಮ ಸಮಭಾವ'. ಅಂದರೆ, ರಾಜ್ಯವು ಎಲ್ಲ ಧರ್ಮಗಳನ್ನೂ ಸಮಾನ ಗೌರವದಿಂದ ಕಾಣುವುದು. ಇದು ಅಶೋಕ ಚಕ್ರವರ್ತಿಯ ಶಾಸನಗಳಿಂದ ಹಿಡಿದು ವಿವೇಕಾನಂದರ ಭಾಷಣಗಳವರೆಗೆ ಹರಿದು ಬಂದಿರುವ ಭಾರತೀಯ ಆಧ್ಯಾತ್ಮಿಕ ಉದಾರತೆಯ ಫಲವಾಗಿದೆ.

ಕರ್ಮಯೋಗ ಮತ್ತು ನಾಗರಿಕ ಕರ್ತವ್ಯಗಳು

ನಾವು ಸಾಮಾನ್ಯವಾಗಿ ಹಕ್ಕುಗಳ ಬಗ್ಗೆ ಹೆಚ್ಚು ಮಾತನಾಡುತ್ತೇವೆ. ಆದರೆ, ಹಕ್ಕುಗಳಿಗಿಂತಲೂ ಮುಖ್ಯವಾದುದು ‘ಧರ್ಮ' ಅಥವಾ ‘ಕರ್ತವ್ಯ'. ಭಗವದ್ಗೀತೆಯ ಪ್ರಸಿದ್ಧ ಶ್ಲೋಕ: “ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ|” (ಭಗವದ್ಗೀತೆ, ೨.೪೭) ನಾವು ನಮ್ಮ ಕರ್ತವ್ಯದಲ್ಲಿ ನಿಷ್ಠರಾಗಿರಬೇಕು ಎಂದು ಇದು ಬೋಧಿಸುತ್ತದೆ. ಸಂವಿಧಾನದ ೫೧ಎ ವಿಧಿಯಲ್ಲಿ ವಿವರಿಸಲಾದ ‘ಮೂಲಭೂತ ಕರ್ತವ್ಯಗಳು' ಒಬ್ಬ ನಾಗರಿಕನು ತನ್ನರಾಷ್ಟ್ರದ ಬಗ್ಗೆ ಹೊಂದಿರಬೇಕಾದ ಆಧ್ಯಾತ್ಮಿಕ ಶಿಸ್ತನ್ನೇ ಪ್ರತಿಬಿಂಬಿಸುತ್ತವೆ. ಪರಿಸರ ರಕ್ಷಣೆ (ಪ್ರಕೃತಿಯನ್ನು ದೈವವೆಂದು ಪೂಜಿಸುವ ಪರಂಪರೆ), ಸ್ತ್ರೀಯರು(ಯತ್ರ ನಾರ್ಯಸ್ತು ಪೂಜ್ಯಂತೇ...), ಮತ್ತು ದೇಶದ ಏಕತೆಯನ್ನು ಕಾಪಾಡುವುದು - ಇವೆಲ್ಲವೂ ಆಧ್ಯಾತ್ಮಿಕ ದೃಷ್ಟಿಯಲ್ಲಿ ‘ರಾಷ್ಟ್ರ ಧರ್ಮ'ಗಳಾಗಿವೆ. ವ್ಯಕ್ತಿಯು ತನ್ನ ಸ್ವಾರ್ಥವನ್ನು ಮೀರಿ ಸಮಾಜಕ್ಕಾಗಿ ಶ್ರಮಿಸಿದಾಗ ಮಾತ್ರ ಗಣರಾಜ್ಯವು ಸದೃಢವಾಗುತ್ತದೆ.

ನ್ಯಾಯದ ಪರಿಕಲ್ಪನೆ ಮತ್ತು ಸಾಮಾಜಿಕ ಹಿತ

ಸಂವಿಧಾನದ ಪೀಠಿಕೆಯಲ್ಲಿ ‘ನ್ಯಾಯ' ಎನ್ನುವ ಪದಕ್ಕೆ ಮೊದಲ ಸ್ಥಾನವಿದೆ. ಆಧ್ಯಾತ್ಮಿಕವಾಗಿ ನ್ಯಾಯವೆಂದರೆ ಕೇವಲ ತಪ್ಪು ಮಾಡಿದವರಿಗೆ ಶಿಕ್ಷೆ ನೀಡುವುದಲ್ಲ, ಬದಲಿಗೆ ಸಮಸ್ತ ಜೀವಿಗಳಿಗೂ ಬದುಕುವ ಅವಕಾಶ ಕಲ್ಪಿಸುವುದು. “ಪರಹಿತಾಯ ಪುಣ್ಯಾಯ ಪಾಪಾಯ ಪರಪೀಡನಮ್” (ಪುರಾಣ ಸಾರ) ಇತರರಿಗೆ ಒಳ್ಳೆಯದನ್ನು ಮಾಡುವುದೇ ಪುಣ್ಯ, ನೋಯಿಸುವುದೇ ಪಾಪ. ಸಂವಿಧಾನದ ‘ರಾಜ್ಯ ನಿರ್ದೇಶಕ ತತ್ವಗಳು' ಇದೇ ಪುಣ್ಯಕಾರ್ಯವನ್ನು ಸರ್ಕಾರಗಳ ಆದ್ಯ ಕರ್ತವ್ಯವನ್ನಾಗಿ ಮಾಡಿದೆ. ಅಸಹಾಯಕರಿಗೆ ರಕ್ಷಣೆ, ಹಸಿದವರಿಗೆ ಅನ್ನ ಮತ್ತು ದೀನರಿಗೆ ನ್ಯಾಯ ಒದಗಿಸುವ ಮೂಲಕ ‘ಕಲ್ಯಾಣ ರಾಜ್ಯ'ದ ಕನಸನ್ನು ನನಸು ಮಾಡಲು ಸಂವಿಧಾನವು ಹಾದಿ ಮಾಡಿಕೊಟ್ಟಿದೆ.

ಸ್ವಾತಂತ್ರ್ಯ ಮತ್ತು ಆತ್ಮ ಚೈತನ್ಯ

ಸಂವಿಧಾನವು ನೀಡುವ ಸ್ವಾತಂತ್ರö್ಯ ಕೇವಲ ಭೌತಿಕವಾಗಿಯೂ ಆಧ್ಯಾತ್ಮಿಕವಾಗಿಯೂ ಶಕ್ತವಾಗಿದೆ. ಆಧ್ಯಾತ್ಮಿಕವಾಗಿ ಸ್ವಾತಂತ್ರ ಎಂದರೆ ‘ಮುಕ್ತಿ' ಅಥವಾ ‘ಮೋಕ್ಷ'. ತನ್ನ ಪ್ರತಿಭೆ, ಚಿಂತನೆ ಮತ್ತು ವ್ಯಕ್ತಿತ್ವವನ್ನು ಯಾವುದೇ ಅಡೆತಡೆಯಿಲ್ಲದೆ ಬೆಳೆಸಿಕೊಳ್ಳುವ ಹಕ್ಕನ್ನು ಸಂವಿಧಾನ ನೀಡಿದೆ. ಇದು ಉಪನಿಷತ್ತುಗಳ “ಉದ್ಧರೇದಾತ್ಮನಾತ್ಮಾನಂ” (ನಿನ್ನನ್ನು ನೀನೇ ಉದ್ಧರಿಸಿಕೊ) ಎಂಬ ಮಾತಿಗೆ ಪೂರಕವಾಗಿದೆ. ತನ್ನನ್ನು ತಾನು ಅರಿತುಕೊಳ್ಳಲು ಬೇಕಾದ ವಾಕ್ ಸ್ವಾತಂತ್ರö್ಯ, ಅಭಿವ್ಯಕ್ತಿ ಸ್ವಾತಂತ್ರ‍್ಯ ಮತ್ತು ನಂಬಿಕೆಯ ಸ್ವಾತಂತ್ರ್ಯಗಳು ಪ್ರಜಾಪ್ರಭುತ್ವದ ಅಧ್ಯಾತ್ಮಿಕ ಆಯಾಮಗಳಾಗಿವೆ.

ಸಂವಿಧಾನವು ಓದುವ, ಕಾಣಿಸುವ ಪಠ್ಯವಾಗದೆ ಅಳವಡಿಸಿಕೊಳ್ಳುವ ‘ಸಂಸ್ಕಾರ’ವಾಗಬೇಕು. ಭಾರತೀಯ ಸಂಸ್ಕೃತಿಯಲ್ಲಿ ನಾವು ರೂಪಿಸಿಕೊಂಡಿರುವ ಎಲ್ಲಾ ಕಾನೂನಿನ ವಿಚಾರಗಳು ಸಂಸ್ಕೃತಿಯ ಹೆಸರಿನಲ್ಲಿ ನಿರ್ವಚನಗೊಂಡಿವೆ. ಆತ್ಮಶಕ್ತಿಯೆಂಬ ಆಧ್ಯಾತ್ಮ ಬೇರಿನಿಂದ ಸಂವಿಧಾನವೆಂಬ ಕಾನೂನು ಶಕ್ತಿಯು ರೂಪುಗೊಂಡಿರುವುದು ಭಾರತದ ಜೀವ ಚೈತನ್ಯವಾಗಿದೆ. 


ಡಾ. ರವಿಶಂಕರ್ ಎ.ಕೆ.

ಕನ್ನಡ ಅಧ್ಯಾಪಕ, ಕ್ರಿಸ್ತು ಜಯಂತಿ ಡೀಮ್ಡ್ ಟು ಬಿ ವಿಶ್ವವಿದ್ಯಾಲಯ, ಬೆಂಗಳೂರು


ಮಂಗಳವಾರ, ಅಕ್ಟೋಬರ್ 14, 2025

ಮಾವುತ

 






ಮಾವುತನೆ ಮಹಾರಾಜ

ಒಂದು ದಿನಕ್ಕಾದರೂ..

ಮಾಡಬಹುದೇ ಸವಾರಿ

ಎಷ್ಟು ಅಧಿಕಾರವಿದ್ದರೂ..!


ಸಿಗಬಹುದೇ ಯೋಗ

ಭಕ್ತಿಯ ಭಂಡಾರವಿದ್ದರೂ

ದೇವರ ಪದತಲದಲ್ಲಿ

ಕೂರುವುದು ಉತ್ಸವವಿದ್ದರೂ


ದೇವರಾದರೂ ಚಿನ್ನಚೌಕದಲ್ಲಿ

ಅಂಬಾರಿಯನ್ನು ಹೊತ್ತರೂ

ಮಾವುತನೇ ಸ್ವತಂತ್ರ

ಕೋಟಿ ಕಣ್ಣುಗಳೆದುರು


ಬೆಲೆಯಿಲ್ಲ ನೆಲೆಯಿಲ್ಲ

ಬಡವನಂತಿದ್ದರೂ

ಕೃಷ್ಣನೂ ಸಾರಥಿಯೇ

ಲೋಕ ಕಲ್ಯಾಣಕ್ಕಾದರೂ..


- ಅಂಕುರ

ಮಂಗಳವಾರ, ಜೂನ್ 17, 2025

'ಪಂಚಗವ್ಯ' ಎಂಬ ಹೊಸ ರಂಗನಾಟಕ ಪ್ರಯೋಗ...

 

ಪಂಚಗವ್ಯ ಎಂಬ ಹೊಸ ರಂಗನಾಟಕ  ಪ್ರಯೋಗ...



   ಪುರಾಣದೊಳಗೆ ಪ್ರವೇಶ ಮಾಡುವ ಪಂಚಗವ್ಯ ನಾಟಕವು ವಿಭಿನ್ನ ಮನೋಭಿತ್ತಿಯ ಪ್ರಯೋಗ. ಅಧ್ಯಯನ, ಪ್ರಯೋಗಗಳ ಮೂಲಕ ಇದುವರೆಗೂ ಹಲವು ಸಾಮಾಜಿಕ, ಪೌರಾಣಿಕ ಹಾಗೂ ಮಕ್ಕಳ ನಾಟಕಗಳನ್ನು ರಚಿಸಿ, ಪ್ರಯೋಗಿಸಿದ ಡಾ. ರಘುನಂದನ್ ಅವರು 'ಚಿಟ್ಟೆ'ಯಿಂದ 'ಪಂಚಗವ್ಯ'ಕ್ಕೆ ಗೋಕುಲ ಸಹೃದಯನ ವಿಕಾಸವಾದವನ್ನು ನುರಿತ ನಿರ್ದೇಶಕರಿಂದ ಪ್ರಯೋಗಿಸಿದ್ದಾರೆ. ಅದರ ಫಲಿತವು ವೇದಿಕೆಯಲ್ಲಿ ಪೂರ್ಣಗೊಂಡಿದೆ. 


ಪಂಚಗವ್ಯ ಎಂಬ ಭಾರತೀಯ ಪುರಾಣ ಕಾವ್ಯಗಳಲ್ಲಿ ಆದರ್ಶಗೊಂಡ ಪ್ರಹ್ಲಾದ, ನಚಿಕೇತ, ಧ್ರುವ, ಅಷ್ಟಾವಕ್ರ ಹಾಗೂ ಬಾಲಕ ಶಂಕರ(ಶಂಕರಾಚಾರ್ಯರು) ಈ ಪಾತ್ರಗಳು ತಂದೆ, ತಾಯಿ, ದೇವರು, ಗುರು ಮೊದಲಾದಂತೆ ಮುಖಾಮುಖಿಗೊಳ್ಳುವ ಮುಖ್ಯ ಕಥನಗಳನ್ನು ಒಂದೊಂದು ಭಾಗಗಳಲ್ಲಿ ಜೋಡಿಸಲಾಗಿದೆ. ಪ್ರತಿ ಕಥನವೂ ಕೂಡ ಪೂರ್ಣತೆ ಸಾರುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ 'ಪಂಚ' ವಿಶೇಷತೆಯನ್ನು ಹೇಳುತ್ತಲೇ ಅಂತಹ ವ್ಯಕ್ತಿತ್ವಗಳ ದರ್ಶನವಿಲ್ಲಿದೆ.








ಗೋಕುಲ ಸಹೃದಯನೆಂಬ ನಟನು ಕಟ್ಟುವ ಏಕವ್ಯಕ್ತಿ ಪ್ರಯೋಗವು ಆರಂಭದಿಂದ ಕೊನೆಯವರೆಗೂ ಜ್ಞಾನ, ಕುತೂಹಲ, ಅಭಿನಯಗಳ ಮೂಲಕವೇ ಪ್ರತಿ ಕ್ಷಣವನ್ನೂ ಹಿಡಿದಿಡುವ ಶಕ್ತಿಯು ಅದ್ಭುತವಾಗಿದೆ. ಈ ನಟನು ಈಗಾಗಲೇ ಬಹು ಎತ್ತರಕ್ಕೆ ಬೆಳೆದು ದಾಖಲೆಗಳನ್ನು ನಿರ್ಮಿಸಿರುವ ಕಾರಣ, ಶ್ರಮಕ್ಕೆ ತಕ್ಕ ಫಲ ಸಹಜವಾಗಿಯೇ ಲಭಿಸಿದೆ. ಹಿರಣ್ಯ ಕಶಿಪುವಿನ ಮೂಲಕ ಉಗ್ರನರಸಿಂಹ, ಯಮ,  ವಂದಿನ ಮೊದಲಾದ ಧೀರ, ಉಗ್ರ ಪಾತ್ರಗಳ ಮೂಲಕ ತನ್ನ ವಯಸ್ಸನ್ನೇ ಮೀರಿ ಅಭಿನಯಿಸುವ ಕಲೆಗೆ ಸಾವಿರ ಶರಣು ಎನಿಸುತ್ತದೆ. ಈಗಾಗಲೇ ಚಿಟ್ಟೆಯಾಗಿ ಮಿಂಚಿದ್ದ ಈತನಿಗೆ ಪ್ರಹ್ಲಾದ, ನಚಿಕೇತ, ಧ್ರುವ, ಬಾಲ ಶಂಕರ ಪಾತ್ರಗಳ ಅಭಿನಯ ಕಷ್ಟವಾಗಲಿಲ್ಲ. ಈ ದೃಷ್ಟಿಯಿಂದ ಏಷ್ಯಾ ಬುಕ್ ಆಫ್ ರೆಕಾರ್ಡ್ಗೆ ಈತ ಅರ್ಹನು. ಚಿಟ್ಟೆಯ ಧ್ವನಿ ಬೆಳೆದು ಪಂಚಗವ್ಯದಲ್ಲಿ ಕಾಣುವ ಅಭಿವ್ಯಕ್ತಿಯು ಭವಿಷ್ಯದ ರಂಗ ಕಲಾ ನಟನ ಸ್ಥಾನಕ್ಕೆ ಅರ್ಹತೆ ಪಡೆದಿದ್ದಾನೆ. ನವರಸಗಳ ಲೀಲಾಜಾಲ ಅಭಿನಯದಿಂದ ಈ ಕಾಲದ ಯುವಕರಿಗೆ ಮಾದರಿ ಪಠ್ಯವಾಗುವ ಶಕ್ತಿ ಈ ನಟನೆಗಿದೆ.










ಮನ ಸೆಳೆಯುವ ಅಭಿನಯ...

ಅಷ್ಟಾವಕ್ರನ ಅಭಿನಯದಲ್ಲಿ ಪ್ರತಿ ಕ್ಷಣವೂ 'ಪ್ರೇಕ್ಷಕರ ಸಹೃದಯ ಸೆಳೆತ'ವು ಮುಂದಿನ ಬಾಲ ಶಂಕರಾಚಾರ್ಯರ ಪಾತ್ರದಲ್ಲಿ ಅಭಿಮಾನವನ್ನು ಧಕ್ಕಿಸಿಕೊಳ್ಳುತ್ತದೆ. ಹಿರಣ್ಯ ಕಶಿಪು, ಯಮ ಏಕಮುಖವಾಗಿಯೇ ಗಾಂಭೀರ್ಯ ಪಡೆದು ನಟನ ಶಕ್ತಿಯನ್ನು ಪ್ರದರ್ಶಿಸುತ್ತವೆ. ಈ ನಾಟಕವು ರಂಗಭೂಮಿ ಪ್ರಯೋಗದಂತೆ ಕಂಡು ಬಂದರೂ ಪೌರಾಣಿಕ ನಾಟಕದ ಎಲ್ಲಾ ಚಹರೆಗಳನ್ನು ಅಭಿವ್ಯಕ್ತಪಡಿಸುತ್ತದೆ‌. ಧ್ವನಿ ಪ್ರಯೋಗ, ಪೌರಾಣಿಕ ಸ್ವರೂಪದ ಹಾಡುಗಳು, ಸಂಗೀತದಲ್ಲಿ ತಬಲ, ಹಾರ್ಮೋನಿಯಂ ಬಳಕೆ ಇವೆಲ್ಲವೂ ನಮ್ಮ ನಾಟಕ ಸಂಸ್ಕೃತಿಯ ಗುರುತುಗಳನ್ನು ಪ್ರತಿನಿಧಿಸಿ ಪ್ರಯೋಗಗೊಂಡಿವೆ.












ಈಗಾಗಲೇ ಎರಡನೇ ಪ್ರದರ್ಶನ ಕಂಡ ಈ ನಾಟಕವು ನಾಡಿನಾದ್ಯಂತ ಹೆಜ್ಜೆ ಧರಿಸಲಿ. ಒಂದು ಉತ್ತಮ ನಾಟಕ ನೋಡಲು, ಪ್ರದರ್ಶನಮಾಡಲು ಪಂಚಗವ್ಯ ಸೂಕ್ತ ಆಯ್ಕೆ. ಗೋಕುಲ ಸಹೃದಯನಲ್ಲಿ ಬದಲಾವಣೆಯ ಶಕ್ತಿಯು ಅಗಾಧವಾಗಿರುವ ಕಾರಣ, ಅರ್ಥಪೂರ್ಣವಾಗಿ ಕನ್ನಡಿಗರು ಪಂಚಗವ್ಯ ಸವಿಯಬಹುದು.

ರಚನೆ, ವಿನ್ಯಾಸ, ಸಂಗೀತ, ನಿರ್ದೇಶನ - ಡಾ. ಎಸ್. ಎಲ್.ಎನ್ ಸ್ವಾಮಿ


ಡಾ. ರವಿಶಂಕರ್ ಎ.ಕೆ

ಬಸವಣ್ಣನ ವಚನಗಳಲ್ಲಿ ನುಡಿ ತತ್ತ್ವ

 


ಶನಿವಾರ, ಮೇ 10, 2025

ಯುದ್ಧೋದ್ವೇಗ ಶಮನಕ್ಕೊಂದು ಅಭಯ - ತುರುವೇಕೆರೆ ಪ್ರಸಾದ್

 ಇಂದಿನ ವಿಜಯ ಕರ್ನಾಟಕದಲ್ಲಿ ನಿರಾಮಯ ನಾಟಕ ಕುರಿತು ಚಿಂತಕರಾದ ಗೌರವಾನ್ವಿತ ತುರುವೇಕೆರೆ ಪ್ರಸಾದ್ ಅವರು ಓದುನುಡಿ ಬರೆದಿದ್ದಾರೆ. ಇವರ ವ್ಯಕ್ತಿತ್ವದ ವಿಶೇಷ ಅಂದರೆ ಸಾಮಾನ್ಯರಂತೆ ಪುಸ್ತಕ ಕೊಂಡು, ಓದಿ ಅದನ್ನು ವರ್ತಮಾನಕ್ಕೆ ಮುಖಾಮುಖಿ ಮಾಡಿರುವುದು ನಮ್ಮಂತಹವರಿಗೆ ನಿಜ ಪ್ರಶಸ್ತಿಗಳು.


ಈ ಬರಹದ ಪೂರ್ಣ ರೂಪವಿದು...


ವಿಜಯ ಕರ್ನಾಟಕ-ಸಾಪ್ತಾಹಿಕ ಲವಲವಿಕೆ-ನಾನು ಓದಿದ ಪುಸ್ತಕ ವಿಭಾಗ

*ಯುದ್ದೋದ್ವೇಗ ಶಮನಕ್ಕೊಂದು ಅಭಯ: ನಿರಾಮಯ*

‘ನಿರಾಮಯ’ ಎಂಬುದು ಅಂಕುರ ಎಂಬ ಹೆಸರಲ್ಲಿ ಬರೆಯುತ್ತಿರುವ ಡಾ.ಎ.ಕೆ. ರವಿಶಂಕರ್ ಅವರ ವಿಶಿಷ್ಟ ಕೃತಿ. ಮುಖಪುಟದ ನಿರಾಮಯ ಶೀರ್ಷಿಕೆಯಡಿಯಲ್ಲಿರುವ ಬಾಲಂಗೋಚಿ (ಟ್ಯಾಗ್‌ಲೈನ್) ‘ಬಂದೂಕಿನ ವಿರುದ್ಧ ಪದ’ ಎಂಬುದೇ ನೋಡಿದ ತಕ್ಷಣ ಗಮನ ಸೆಳೆದುಬಿಡುತ್ತದೆ. ೩೦ ಆಪ್ತ ಕವಿತೆಗಳು, ಒಂದು ನಾಟಕ, ಒಂದು ಕಿರು ರೂಪಕದೊಂದಿಗೆ ಈ ಪುಟ್ಟ ಕೃತಿ ಹಿರಿದಾದ ಮೌಲ್ಯಗಳನ್ನು ಮತ್ತು ಆಶಯಗಳನ್ನು ಹೇಳುವಲ್ಲಿ ಗೆದ್ದಿದೆ.ಚಿಗುರು,ಶಾಂತಿ, ಗುಲಾಬಿ, ಪ್ರೇಮ. ಪ್ರೀತಿ, ಧ್ಯಾನ ಹೀಗೆ ೩೦ ಕವಿತೆಗಳೂ ಹೊಸ ಭರವಸೆ, ನವ ಚೈತನ್ಯ, ಹೊಸ ಹುಡುಕಾಟದಲ್ಲಿ ಕಂಡ ಜೀವನ್ಮುಖಿ ಹೊಳಹುಗಳನ್ನು ಸಮರ್ಥವಾಗಿ ಕಟ್ಟಿಕೊಡುತ್ತವೆ. ಚಿಗುರು ಕವಿತೆಯಲ್ಲಿ ‘ನಾನು ಚಿಗುರು, ನನ್ನೆದುರು ವಿನಾಶವೇ ಶರಣಾಗಿದೆ’, ಪ್ರೇಮ ಕವಿತೆಯ ‘ನೀನು ಬರಿ ಕಾಮವಲ್ಲ, ಆಕರ್ಷಣೆ, ಸಲ್ಲಾಪವಲ್ಲ, ಒಳತೋಟಿಗೆ ಲೇಪಿಸಿದ ಅಗಮ್ಯ ಸುಗಂಧ ದ್ರವ್ಯ’, ನಿರಾಮಯ ಕವಿತೆಯ ‘ನನಗಾಗಿಯೇ ಎಲ್ಲಾ ಹಿಂಸೆಗಳು ಮೂಡಿ ನನ್ನನ್ನೇ ಹುಡುಕುವ ಕರುಣೆ, ಪ್ರೀತಿ, ಅಹಿಂಸೆಗಳೇ, ನಿರಾಮಯವೇ ಕೊನೆಯ ದಾರಿ’ ಈ ಸಾಲುಗಳು ಹೊಸ ಆಶೋತ್ತರಗಳ ಚರಿತೆ ಸೃಷ್ಟಿಸುವಂತಿವೆ. 

ಇನ್ನು ನಾಟಕ ತಾತ ಮಗುವಿಗೆ ಗೆದ್ದವರ ಕತೆ ಬದಲು ಸೋತವರ ಕತೆ ಹೇಳುವುದರೊಂದಿಗೆ ಪ್ರಾರಂಭವಾಗುತ್ತದೆ. ಯಜಮಾನನ ಪಾತ್ರ ಹೇಳುವ ‘ಎಲ್ಲಿಯ ತನಕ ನಾನು ಇರುತ್ತೇನೆಯೋ ಅಲ್ಲಿಯ ತನಕ ಯುದ್ದ ಹಿಂಸೆ ನೋವು, ಸಾವು ಮತ್ತೆ ಮತ್ತೆ ಚಿಗುರುತ್ತವೇ ಇರುತ್ತವೆ. ನಾನು ಇರುವ ತನಕ ಬಂದೂಕಿನಿಂದ ಗುಲಾಬಿ ಮೂಡುವುದಿಲ್ಲ, ಬರೀ ಗುಂಡುಗಳು ಹಾರುತ್ತವೆ ಏಕೆಂದರೆ ನಾನು ಗೆಲ್ಲಲೇಬೇಕು. ನಾನು ಸೋಲುವ ಪಠ್ಯ ವಿಶ್ವದಲ್ಲೇ ಇಲ್ಲ, ನಾನು ನಿಮ್ಮೊಳಗೂ ಇರಬಹುದು’ ಎಂಬುದು  ಒಳಗಿನ ಅಹಂಕಾರ, ಸರ್ವಾಧಿಕಾರಿ ಧೋರಣೆ ಜೊತೆಗೆ ಪಕ್ಕಾ ಭಯೋತ್ಪಾದನೆಯ ಮನಸ್ಥಿತಿಯನ್ನೂ ಬಿಂಬಿಸುತ್ತದೆ. ಇಂತಹ ಯಜಮಾನ ಕೊರವಂಜಿಯು ಹೇಳುವ ‘ದಾರಿ ಗೊತ್ತಿರೋ ಮನುಷ್ಯ ದೂರ ಸಾಗ್ತಾನ, ದಾರಿನೇ ಇಲ್ಲದ ಮನುಷ್ಯ ಇಲ್ಲಿ ದರಿದ್ರನಾಗ್ತಾನ’ ಎಂಬ ಮಾತಿಗೆ ಅನುಗುಣವಾಗಿ ಬದಲಾಗಲು ಹೊರಡುತ್ತಾನೆ. ಹಣದ ಚಿಂತೆಯಿಲ್ಲದ, ಮನೆಯ ಬಾಗಿಲೇ ಮುಚ್ಚದ, ದುಡಿದು ತಿಂದುಂಡು, ಮಾತಾಡಿ  ಕಣ್ತುಂಬ ನಿದ್ದೆ ಮಾಡುವ ಮನಸೂರಿಗೆ ಬಂದು ಅಲ್ಲೂ ತನ್ನ ಚಾಳಿ ಬಿಡದೆ ಅಲ್ಲಿನ ಜನರಿಗೆ ಹಣದ ಆಮಿಷ ತೋರಿಸಿ ಬಂಧಿಯಾಗುತ್ತಾನೆ. ದಿಬ್ಬದ ತಾಯಿಯ ದೆಸೆಯಿಂದ ಮುಕ್ತಗೊಂಡು ಪರಿವರ್ತನೆ ಹೊಂದುವ ಯಜಮಾನ ‘ಇವರೆಲ್ಲರೂ ನನ್ನ ರೂಪಗಳೇ, ಇವರೆಲ್ಲರೂ ನಿಜವಾಗಿ ನನ್ನ ವಿರುದ್ಧ ಪದಗಳು, ತಾನೊಂದು ಈ ಜಗತ್ತಿನ ಬಂದೂಕು, ಸುತ್ತಲೂ ವಿರುದ್ಧ ಪದಗಳಿವೆ, ನನ್ನಿಂದ ಹಾರುವ ಗುಂಡಿಗೆ ಅವುಗಳ ಸ್ವರೂಪ ಕಾಣುತ್ತಿಲ್ಲ, ನನಗೂ ಉತ್ತರ ಕಾಣಿಸಿಲ್ಲ' ಎಂದು ಉದ್ಗರಿಸುವುದರೊಂದಿಗೆ ನಾಟಕ ಮುಗಿಯುತ್ತದೆ. 

ಕೊನೆಯ ೮ ಪುಟಗಳ ಕಿರು ರೂಪಕವಂತೂ ಇನ್ನೂ ಅದ್ಭುತವಾಗಿದೆ.ಬ್ರಹ್ಮಾಂಡದೊಂದಿಗೆ ಪಂಚಭೂತಗಳಾದ ಆಕಾಶ, ನೀರು, ಗಾಳಿ, ಬೆಂಕಿ, ಭೂಮಿ ಸಂವಾದ ನಡೆಸುತ್ತವೆ. ಸದಾ ಶೋಷಣೆಗೊಳಗಾಗಿ ವಿಷಾಧ ಮಡುಗುಟ್ಟಿದ ಭೂಮಿ, ತಾನು ಹರಿಯಲಾರದೆ ನಿಂತು ಕಲ್ಮಶಗೊಂಡೆನೆಂದು ಕೊರಗುವ ನೀರು, ನಾಲ್ಕು ಭೂತಗಳ ಪೋಷಕಳೂ, ಜೀವಜಂತುಗಳ ಉಸಿರೂ ಆದ ತಾನೂ ಮಾಯೆಗೆ ಸಿಲುಕಿದ್ದೇನೆ ಎನ್ನುವ ಗಾಳಿ, ಎಲ್ಲವನ್ನೂ ಶುದ್ಧ ಮಾಡುವ ನಾನೆ ಅಶುದ್ಧವಾಗಿದ್ದೇನೆ ಎಂದು ಹಪಹಪಿಸುವ ಬೆಂಕಿ, ಎಲ್ಲರನ್ನೂ ಪೊರೆಯುವ ಪರದೆ ಜಾರದಿರಲಿ ಎಂದು ಅವಲತ್ತುಕೊಳ್ಳುವ ಆಕಾಶ ಎಲ್ಲಾ ಒಟ್ಟಿಗೆ ಸೇರಿ ಬ್ರಹ್ಮಾಂಡವನ್ನು ಮುತ್ತುತ್ತವೆ. ಬಿಡುಗಡೆಗಾಗಿ ಹಂಬಲಿಸುತ್ತವೆ. ಇವಕ್ಕೆಲ್ಲ ಬ್ರಹ್ಮಾಂಡ ವಸ್ತುಸ್ಥಿತಿ ಮತ್ತು ಅವರವರ ಅಂತರಾಳದ ಸಾಮರ್ಥ್ಯದ ಅರಿವು ಮೂಡಿಸುತ್ತದೆ. ‘ಎಲ್ಲರೂ ಬದಲಾಗೋಣ, ನಿಮ್ಮ ಹೃದಯದಲ್ಲಿ ಜಾಗ ಕೊಡಿ, ನಾವು ನಿಮ್ಮ ಬೆಳಕು, ಹಿಂಸೆ ಕ್ರೋಧಗಳ ಕಳಚಿ ನಮ್ಮನ್ನು ಪ್ರೀತಿಸಿ ಸ್ವಚ್ಛಂದವಾಗಿ ಬದುಕಿ ಉಳಿಯೋಣ, ಉಳಿಸೋಣ’ ಎಂಬ ಆಶಯದೊಂದಿಗೆ ರೂಪಕ ಮುಗಿಯುತ್ತದೆ. 

 ನಮ್ಮ ಸ್ವಾಭಿಮಾನ, ಸುರಕ್ಷತೆಗೆ ಇನ್ನೊಂದು ದೇಶ ಸವಾಲಾದಾಗ ಯುದ್ಧ ಅನಿವಾರ್ಯ. ಆದರೆ ಮುಗ್ಧ ಹೃದಯಗಳಲ್ಲಿ  ಯುದ್ಧ ಯಾವತ್ತೂ ತಲ್ಲಣಗಳನ್ನು ಉಂಟುಮಾಡುತ್ತದೆ, ಉದ್ವೇಗ ಸೃಷ್ಟಿಸುತ್ತದೆ. ಯುದ್ಧದ ಈ ಹೊತ್ತಿನಲ್ಲಿ ನಿರಾಮಯ ಓದು ನಮ್ಮ ಮನಸ್ಸಿನ ದುಗುಡವನ್ನು ಸ್ವಲ್ಪ ಮಟ್ಟಿಗಾದರೂ ಶಮನ ಮಾಡಬಹುದು.  ಡಾ. ರವಿಶಂಕರ್ ಸಂಪರ್ಕ: ೯೬೬೩೪೩೩೪೦೩

~ತುರುವೇಕೆರೆ ಪ್ರಸಾದ್




ಶನಿವಾರ, ಏಪ್ರಿಲ್ 12, 2025

ವಿಹಾರಿಕಾ ಎಂಬ ಪ್ರವಾಸ ಪರಿಧಿ

 


ವಿಹಾರಿಕಾ ಎಂಬ ಪ್ರವಾಸ ಪರಿಧಿ


ಏನು ಸವಿಯೊ ಅದನೆ ಕುಡಿ

ನಿನ್ನ ರುಚಿಯ ಹದವ ಹಿಡಿ

ನನ್ನನೇನು ಕೇಳುವೆ, 

ಆದರೂನು ಹೇಳುವೆ

-ದ.ರಾ ಬೇಂದ್ರೆ

ಪ್ರವಾಸವು ಮನುಷ್ಯನ ಉಗಮದಿಂದಲೇ ಪ್ರಾರಂಭವಾಗಿದೆ. ತನ್ನ ನೋಟಕ್ಕೆ ಸಿಲುಕುವ ಎಲ್ಲಾ ಅಂಶಗಳನ್ನು ಮನಸ್ಸಿನಲ್ಲಿ ಸೆರೆಯಿಡಿಯುವ ಜ್ಞಾನವು ಪ್ರವಾಸದ ಅನುಭವಗಳನ್ನೇ ತಿಳಿಸುತ್ತದೆ. ಈ ಮನುಷ್ಯ ನಾಗರೀಕನಾಗಿ, ಭಾಷೆ ಕಲಿತು, ಬರವಣಿಗೆ ಕಲಿತು ಸಾಹಿತ್ಯ ರಚಿಸುವ ಹಂತದಲ್ಲಿ ಈ ಪ್ರವಾಸ ಅನುಭವಗಳನ್ನು ಕನಸಿನಂತೆ ದಾಖಲು ಮಾಡಿದ್ದಾನೆ. ಅದು ಮೊದಲಿಗೆ ಸೊಲ್ಲಾಗಿ ಜನಪದರಲ್ಲಿ ಮೂಡಿದೆ. ನಂತರ ನಮ್ಮ ಸಂಸ್ಕೃತ ಸಾಹಿತ್ಯದ ಕಾವ್ಯಗಳಲ್ಲಿ ಕಥನವಾಗಿದೆ. ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳಲ್ಲಿ ನಮ್ಮ ಆದರ್ಶ ಪಾತ್ರಗಳೆಲ್ಲಾ ಈ ಭರತಖಂಡವನ್ನು ನಾಲ್ಕು ದಿಕ್ಕಿಗೂ ಪ್ರವಾಸ ಮಾಡಿವೆ.

ಕನ್ನಡ ಸಾಹಿತ್ಯದ ಮೊದಲ ಕವಿಯಾದ ಪಂಪನು ತನ್ನ ಭಾರತದಲ್ಲಿ ‘ಸೊಗಯಿಸಿ ಬಂದ ಮಾಮರನೆ..’ ಎಂದು ಬನವಾಸಿಯನ್ನು ವರ್ಣಿಸುವ ಕ್ರಮವನ್ನು ಪ್ರವಾಸದ ಮೊದಲ ಸೂಚನೆಯಾಗಿ ವಿದ್ವಾಂಸರು ಅಧ್ಯಯನಮಾಡಿದ್ದಾರೆ. ಅಕ್ಕಮಹಾದೇವಿಯ ವಚನಗಳಾಗಲಿ, ಹರಿಹರನ ರಗಳೆಯಾಗಲಿ, ಲಕ್ಷ್ಮೀಶನ ಕಾವ್ಯವೂ ಕೂಡ ಈ ಪ್ರಕೃತಿಯನ್ನು ವರ್ಣಿಸುವಾಗ ನೋಟವನ್ನು ವಿಸ್ತರಿಸುವ ಹಲವು ಬಗೆಗಳು ಪ್ರವಾಸದ ಚಿಂತನೆಗಳೇ ಆಗಿವೆ. ದಾಸರು, ಸರ್ವಜ್ಞನು, ತತ್ತ್ವಪದಕಾರರು ಇದೇ ಹಾದಿಯಲ್ಲಿ ಪ್ರಕೃತಿ-ಮನುಷ್ಯ ಪ್ರಕೃತಿಯನ್ನು ಕೇಂದ್ರೀಕರಿಸಿ ಮನೋಚೈತನ್ಯ ಮೂಡಿಸುವಾಗ ಅವರ ಕಣ್ಣಲ್ಲಿ ಮೂಡಿದ್ದೆಲ್ಲಾ ಅದ್ಭುತ ಪ್ರವಾಸ ಸಾಹಿತ್ಯವೇ ಆಗಿದೆ. ವಿದೇಶಿಯರ ಆಳ್ವಿಕೆಗಳಲ್ಲಿ ಪ್ರವಾಸ ಸಾಹಿತ್ಯವು ಭಾರತದ ವೈಭವದ ದಾಖಲು ಬರಹಗಳಲ್ಲಿ ವಿಶಿಷ್ಟ ಸ್ಥಾನ ಪಡೆಯಿತು. ಆದರೆ, ಇದೊಂದು ಸಾಹಿತ್ಯ ಪ್ರಕಾರವಾಗಿ ಕಂಡು ಬಂದುದು ಪಾಶ್ಚಾತ್ಯ ಸಾಹಿತ್ಯದ ಪ್ರೇರಣೆಯೇ ಆಗಿದೆ. ೨೦ನೇ ಶತಮಾನದಲ್ಲಿ ಇದು ಪ್ರತ್ಯೇಕ ಸಾಹಿತ್ಯವಾಗಿ ಪ್ರಾರಂಭಗೊಂಡು, ಇಂದು ಜಾಲತಾಣದ ಬಹುಮುಖ್ಯ ಮಾರ್ಗವಾಗಿಯೇ ರೂಪುಗೊಂಡಿದೆ.

ಮನೋವಿಜ್ಞಾನದ ಪ್ರಕಾರ ಮಗು ಹುಟ್ಟಿನಿಂದ ತನ್ನ ಹದಿನಾರು-ಹತ್ತೊಂಬತ್ತನೇ ವಯಸ್ಸಿನವರೆಗೂ ತಾನು ಕಲಿತ, ಅನುಭವಿಸಿದ, ಆನಂದಿಸಿದ ಎಲ್ಲಾ ವಿಚಾರಗಳನ್ನು, ಸೂಕ್ಷö್ಮಗಳನ್ನು ಅರ್ಥಪೂರ್ಣವಾಗಿ ಇಡೀ ಜೀವನಪರ್ಯಂತ ತನ್ನ ಮೆದುಳಿನಲ್ಲಿ ದಾಖಲಿಸಿಕೊಂಡು ಮುಂದಿನ ಎಲ್ಲಾ ಅನುಭವಗಳಿಗೂ ಲೇಪಿಸುತ್ತದೆ. ಇದಕ್ಕೆ ಸೂಕ್ತ ಉದಾಹರಣೆಯೆಂದರೆ ಕುವೆಂಪು ಅವರ ಸಾಹಿತ್ಯದ ವೈಭವವೇ ಮಲೆನಾಡು ಕಾಡು, ಬದುಕು ಹಾಗೂ ದರ್ಶನ. ಈ ಹಿನ್ನಲೆಯಲ್ಲಿ ‘ಪ್ರವಾಸದ ಆ ದಿನಗಳು’ ಕೃತಿಯನ್ನು ಸ್ಪರ್ಷಿಸಿದಾಗ ವಿಹಾರಿಕಾ ಅಂಜನಾ ಹೊಸಕೇರಿ ಅವರ ಎಲ್ಲಾ ಅನುಭವಗಳು ಇದೇ ಮಾದರಿಯಲ್ಲಿ ದಾಖಲಾಗುತ್ತವೆ. ಭವಿಷ್ಯಕ್ಕೂ ಅಚ್ಚಳಿಯದ ನೆನಪಾಗುತ್ತವೆ. 

ವಿಹಾರಿಕಾ ಹೆಸರಿನಲ್ಲಿಯೇ ಮೂಡಿರುವಂತೆ ಇವರು ಪ್ರಕೃತಿ ಪ್ರಿಯೆ. ಬದುಕೇ ಒಂದು ಸವಾಲು ಎಂಬ ಗಹನ ವಿಚಾರದ ಮೂಲಕ ಸಾಹಿತ್ಯಕ್ಕೆ ಹೆಜ್ಜೆಯಿಟ್ಟು ಇಂದು ತನ್ನ ಅನುಭವಗಳನ್ನು ಪ್ರವಾಸದ ಮಾದರಿಯಲ್ಲಿ ದಾಖಲಿಸಿದ್ದಾರೆ. ಈ ಪ್ರಕೃತಿಯನ್ನು ಆನಂದಿಸುವ ವಿಹಾರ ಮನೋವ್ಯಕ್ತಿತ್ವದ ಇವರ ಈ ಕೃತಿಯನ್ನು ಹಿರಿಯರ ಪ್ರವಾಸ ಕಥನಗಳೊಟ್ಟಿಗೆ ಇಟ್ಟು, ಅಳತೆಮಾಡುವುದಕ್ಕಿಂತ, ಇವರದೇ ವಯಸ್ಸಿನ ಕಣ್ಣುಗಳಲ್ಲಿಯೇ ನೋಡಿದರೆ ಇದೊಂದು ಅದ್ಭುತ ಪ್ರಯತ್ನ. ಸರಳವಾದ ಶೀರ್ಷಿಕೆಯೊಂದಿಗೆ ಉದುಗಿಸಿಟ್ಟ ನೆನಪುಗಳನ್ನು ಹತ್ತು ದಿನಗಳಲ್ಲಿ ದಾಖಲಿಸಿದ್ದಾರೆ. ನನಗಂತೂ ಕೃಪಾಕರ ಸೇನಾನಿಯವರ ‘ಸೆರೆಯಲ್ಲಿ ಕಳೆದ ಹದಿನಾಲ್ಕು ದಿನಗಳು’ ಜೊತೆಗೆ ಓ.ಎಲ್ ನಾಗಭೂಷಣ ಸ್ವಾಮಿಯವರ ‘ನನ್ನ ಹಿಮಾಲಯ’ ಕೃತಿಗಳೇ ನೆನಪಾದವು. ಆದರೆ, ಇದು ಅಂತಹ ಸಂಕೀರ್ಣ ಪ್ರಯತ್ನವಾಗದೇ ಬರಹಕ್ಕೆ ಮಾತ್ರ ದಿನಗಳ ತುರ್ತು ಪಡೆದಿರುವುದನ್ನು ತಿಳಿಯಬಹುದು. 

ನಾಲ್ಕು ಪರಿಸರಗಳಲ್ಲಿ ಮೂಡಿದ ಆರು ಕಥನಗಳ ಮನೋಚೈತನ್ಯವು ಇಲ್ಲಿ ಮೂಡಿದೆ. ಪ್ರತಿ ಪ್ರವಾಸಕ್ಕೂ ಉದ್ದೇಶಿತ ಕಾರಣವಿದೆ. ಆರು ಕಣ್ಣುಗಳಲ್ಲಿ ಮೂರು ಜನರು ದಾಖಲಿಸಿದ ಅನುಭವಗಳಿದ್ದರೂ ಇಲ್ಲಿ ದಾಖಲಾಗುವುದು ಮುಗ್ಧ ಮನಸ್ಸಿನ, ಧೈರ್ಯವಂತ ಹೆಣ್ಣುಮಗುವಿನ ಪ್ರಯಾಣದ ಪ್ರಜ್ವಲಿತ ಇಲ್ಲವೇ ಪ್ರಯಾಸದ ಅನುಭವಗಳ ದಾಖಲೆ ಎನ್ನಬಹುದು. ಬಾಲ್ಯವನ್ನು ಕಳೆದು ಯೌವನಕ್ಕೆ ಕಾಲಿಡುತ್ತಿರುವ ಈ ಹಂತದಲ್ಲಿನ ಯಾವ ಕುತೂಹಲವೂ ಇಲ್ಲಿ ದಾಖಲಾಗುವುದಿಲ್ಲ. ಬಾಲ್ಯವೂ ನಿರೂಪಿತವಾಗುವುದಿಲ್ಲ. ಯೌವನದ ಬಾಲ್ಯವು ಹಿರಿತನ ತೇಜಸ್ಸು ಪಡೆದರೆ ಏನೆಲ್ಲಾ ಮೂಡಬಹುದೋ ಆ ಎಲ್ಲಾ ಅಂಶಗಳೂ ಇಲ್ಲಿ ಪಡಿಯಚ್ಚಾಗಿವೆ. 

ಈ ಶತಮಾನದ ಮೂರನೇ ದಶಕದ ಕ್ರಾಂತಿಯೆಂದರೆ ಜಗತ್ತನ್ನು ದೃಶ್ಯಗಳಲ್ಲಿ ಶ್ರೀಸಾಮಾನ್ಯರು ದಾಖಲಿಸಲು ಹೊರಟಿದ್ದು. ಹಳ್ಳಿ ನಗರಗಳ ಅಂತರ ಕಳಚಿ, ಸ್ಥಳೀಯ ವಿದೇಶಗಳ ದೂರವನ್ನು ಸಡಿಲಿಸಿ ಪ್ರತಿಯೊಬ್ಬರೂ ತಮ್ಮದೇ ರೀತಿಯಲ್ಲಿ ಚಿತ್ರೀಕರಿಸಲು ಪ್ರಾರಂಭಿಸಿದ್ದು. ಪ್ರವಾಸ ಕಥನಗಳ ಬರವಣಿಗೆಯೇ ಕಡಿಮೆ ಇರುವಾಗ, ಈ ದೃಶ್ಯಮಾಧ್ಯಮಗಳ ದಾಖಲೀಕರಣ ಕ್ರಾಂತಿಯು ಶುರುವಾದ ಮೇಲೆ ಪ್ರವಾಸ ಕಥನಗಳು ಬರಹದಲ್ಲಿ ಮೂಡುವುದೇ ಅತಿ ವಿರಳವಾಗಿದೆ. ಓದುವ ಕಣ್ಣುಗಳು ವೀಕ್ಷಣೆಯ ಕಡೆ ಹೊರಳಿವೆ. ಇಂತಹ ಸಂದರ್ಭದಲ್ಲಿ ಈ ಕೃತಿಯನ್ನು ಏಕೆ ಓದಬೇಕು? ಇದರಿಂದ ದೊರೆಯುವ ಸುಖಗಳೇನು? ಎಂಬ ಪುಸ್ತಕ ಪ್ರೀತಿಗಳ ಪ್ರಶ್ನೆಗೆ ಕೆಲವು ಉತ್ತರಗಳನ್ನು ಇಲ್ಲಿ ದಾಖಲಿಸಬಹುದು. ದೇಶ ಸುತ್ತುವ ಮನಸ್ಸಿಗೆ ಧೈರ್ಯ ಹೇಗಿರಬೇಕು ಎಂಬುದಕ್ಕೆ ವಿಹಾರಿಕಾ ಅವರು ಉತ್ತಮ ಉದಾಹರಣೆ. ಆರು ಪ್ರವಾಸಗಳಲ್ಲೂ ಇವರು ಸೃಷ್ಟಿಸಿಕೊಳ್ಳುವ ಮನೋಚೈತನ್ಯ ವಿಶಿಷ್ಟವಾಗಿದೆ. ಪ್ರತಿ ಪ್ರವಾಸದಲ್ಲಿಯೂ ಇವರು ಬಯಸುವ ಮೊದಲ ನೋಟವೆಂದರೆ ಒಂದು ‘ಸೂರು’. ಎರಡನೇ ನೋಟವೆಂದರೆ ಶೌಚಾಲಯ ಮತ್ತು ಊಟ. ಇವು ಎಲ್ಲಿಯೂ ಪ್ರಧಾನವೆಂದು ಪರಿಗಣನೆಯಾಗಿ ದಾಖಲಾಗದಿದ್ದರೂ ಇವುಗಳ ಶಿಸ್ತು, ಸ್ವರೂಪಗಳ ಕಡೆ ಸೂಕ್ಷ್ಮನೋಟ ಚೆಲ್ಲುತ್ತಾರೆ. ಮಹಾರಾಷ್ಟದ ಪ್ರವಾಸವು ತೆರೆಯುವ ವಿಮಾನ ಪ್ರಯಾಣ, ರೈಲು ಪ್ರಯಾಣ ಹಾಗೂ ಆಟೋ ಪ್ರಯಾಣಗಳು ಹೊಸ ಅನುಭವಗಳನ್ನು ದಾಖಲಿಸುತ್ತವೆ. ಹಣವು ನಮಗೆ ನೀಡುವ ಸೌಲಭ್ಯಗಳನ್ನು, ಹಣದ ಕೊರತೆಯು ಕಲಿಸುವ ಪಾಠಗಳನ್ನು ನೋಟ ಮತ್ತು ನಿರ್ವಹಣೆಯೊಂದಿಗೆ ಸ್ಪಷ್ಟಪಡಿಸುತ್ತಲೇ ಕುತೂಹಲವನ್ನು ಕೆರಳಿಸುತ್ತಾರೆ. ಎಲಿಫೆಂಟಾ ಗುಹೆಗಳಂತ ಪ್ರಯಾಣದಲ್ಲಂತೂ ನಮ್ಮದೇ ಪ್ರಯಾಣವೇನೋ ಅನಿಸಿಬಿಡುತ್ತದೆ. ಈ ಪ್ರವಾಸದಲ್ಲಂತೂ ಸಾಯಿಬಾಬಾ ದೇವಾಲಯ ಒಂದು ಕೇಂದ್ರ ಬಿಂದು. ನ್ಯಾಯ ಅನ್ಯಾಯಗಳ ಕುತೂಹಲವಂತೂ ಈ ಸುದೀರ್ಘ ಬರಹವನ್ನು ಓದುವವರೆಗೂ ಬಂಧಿಸುತ್ತದೆ.

ಮೈಸೂರು ನಮಗೆ ತಿಳಿದ ಸ್ಥಳವೆಂದು ಭಾವಿಸಿ ಓದಲು ಪ್ರಾರಂಭಿಸಿದರೆ, ಹತ್ತಿರವಿದ್ದೂ ದೂರನಿಲ್ಲುವ ಸೂರಿನ ಸಂಕಷ್ಟವು ಅದರ ಎರಡನೇ ಭಾಗದಲ್ಲಿ ಅದರ ಸಾಹಸ ಸಂಚಲವಂತೂ ವಿಭಿನ್ನ ಅನುಭವಗಳ ಸಂಗ್ರಹವಾಗಿದೆ. ಕರಾವಳಿಯ ಪ್ರವಾಸಕ್ಕೆ ಧರ್ಮಸ್ಥಳ, ಉಡುಪಿ, ಮುರುಡೇಶ್ವರಗಳ ಸರ್ವೇಸಾಮನ್ಯ ಪ್ರವಾಸೀ ತಾಣಗಳು ಸಿಲುಕಿದರೂ ವಿಹಾರಿಕಾ ನೋಡುವ ನೋಟವು ವಿಭಿನ್ನವಾಗಿ ಕಾಣಿಸುತ್ತದೆ. ಎಲ್ಲಾ ಇದ್ದೂ ಏನೂ ಇಲ್ಲದ ಪರಿಸ್ಥಿತಿಗಳು, ಜೇಬಿನಲ್ಲಿ ಹಣವಿದ್ದರೂ ಅಪ್ರಯೋಜನಕಾರಿಯಾಗುವ ಸ್ಥಿತಿಯಾಗಲೀ, ಅಸಹಾಯಕರಾದಾಗ ನಾವು ನಂಬುವ ಹಾಗು ಅನುಮಾನಿಸುವ ಅನುಭವಗಳಾಗಲಿ ಇಲ್ಲಿ ವಿಶೇಷವಾಗಿ ದಾಖಲಾಗುತ್ತವೆ. ಸ್ಥಳ ಪುರಾಣಗಳು ಕಥನಗಳಾಗಿ ಓದುಗರನ್ನು ಕುತೂಹಲ ಭರಿಸುವುದುಂಟು. ಈ ಐತಿಹ್ಯಗಳ ಹಿನ್ನಲೆಯನ್ನು ಯಾವುದೇ ಪ್ರಶ್ನಿಸದೇ ನೇರವಾಗಿ ದಾಖಲಿಸುವ ಮುಗ್ಧ ಮನಸ್ಸಿನಲ್ಲಿ ನಿಚ್ಛಳವಾಗಿರುವುದು ಭಕ್ತಿಯೊಂದೇ ಆಗಿದೆ. ಬದುಕಿನ ಪಾಠಗಳನ್ನು ಅತ್ಯಂತ ಗಂಭೀರವಾಗಿ ಸ್ವೀಕರಿಸುವ ಈಕೆಗೆ ಕರಾವಳಿಯ ಜನ ಹಾಗೂ ಅವರ ಭಾಷೆ, ಸಂದರ್ಭಗಳು ತಾತ್ಕಲಿಕ ಬೇಸರ ಮೂಡಿಸಿ ಕೊನೆಗೆ ಹೆಮ್ಮೆಯ ವಿಚಾರಗಳೇ ಆಗಿ ಬಿಡುತ್ತವೆ. ಮೊಬೈಲ್ ಕಳೆದುಕೊಂಡ ಪ್ರಸಂಗವಂತೂ ಪ್ರತ್ಯೇಕ ಅಧ್ಯಾಯವಾಗಿದ್ದರೂ ಅರ್ಥಪೂರ್ಣ ಎನಿಸುತ್ತದೆ. ಓದುಗ ಕೂಡ ಅದೇ ಕುತೂಹಲದಲ್ಲಿ ಹುಡುಕಾಟದ ನಡುವಿನ ಪ್ರಸಂಗಗಳ ಪ್ರವಾಸವನ್ನು ಬೇಸರದಲ್ಲಿಯೇ ಓದುತ್ತಾ ಪತ್ತೆದಾರಿಯ ಕಾದಂಬರಿಯ ಪಾತ್ರವಾಗುತ್ತಾನೆ. ಪ್ರತಿಯೊಬ್ಬರ ಬದುಕಿನಲ್ಲೂ ಒಳ್ಳೆಯತನಗಳ ಕಥನಗಳಿರುತ್ತವೆ. ಅವೆಲ್ಲವೂ ಮೊಬೈಲ್ ಸಿಗುವ ಪ್ರಸಂಗದಲ್ಲಿ ನೆನಪಾಗುತ್ತವೆ. 

ಹಂಪಿ ಪ್ರವಾಸವು ಒಮ್ಮೆ ಇತಿಹಾಸದ ಘಟನೆಗಳ ಕಡೆ ದರ್ಶನ ಮಾಡಿಸುತ್ತಾ ನಿಧಾನವಾಗಿ ಕಥೆ ಹೇಳುತ್ತದೆ. ಪ್ರವಾಸ ಸಾಹಿತ್ಯವು ಕಥನವಾಗುವ ಮಾರ್ಗಕ್ಕೆ ಇದು ಸೂಕ್ತ ಉದಾಹರಣೆಯಾಗುತ್ತದೆ. ಹಂಪಿಯನ್ನು ನೋಡದವರಿಗೆ ಬದುಕಿನಲ್ಲಿ ಒಮ್ಮೆ ನೋಡಲೇಬೇಕೆಂಬ ಆಕಾಂಕ್ಷೆಗಳನ್ನು ಈಕೆಯ ನೋಟಗಳು ಕೇಂದ್ರಿಕರಿಸಿವೆ. 

‘ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತದೆ’ ಎಂಬ ಬಲವಾದ ನಂಬಿಕೆಯೇ ಈಕೆಯ ದೃಢಮಂತ್ರವಾಗಿದೆ. ಅದರ ಫಲಿತಗಳನ್ನು ರೈಲ್ವೇ ನಿಲ್ದಾಣದಲ್ಲಿ ಮಲಗಿದರೂ ದೇವರು ಕಾಪಾಡುವ ಅಭಯವಾಗಲಿ, ಯಾರದೋ ಮನೆಯ ಮುಂದೆ ಮುಂಜಾನೆ ಕಾಣುವ ಉಡುಪಿಯ ಅನುಭವಗಳಾಗಲಿ, ಕಳೆದು ಹೋದ ಮೊಬೈಲು ಮತ್ತೆ ಸಿಗುವ ಮೂಲಕ ಮೂಡಿಸುವ ನಂಬಿಕೆಗಳನ್ನು ಪ್ರವಾಸಗಳ ಮುಖ್ಯ ನೋಟವನ್ನಾಗಿ ಗಮನಿಸಬಹುದು. ತನ್ನ ತಂದೆ, ತಾಯಿ ಜೊತೆಯಲ್ಲಿದ್ದರೂ ತನ್ನದೇ ಏಕಾಂತ ಪ್ರಯಾಣವನ್ನು ದಾಖಲಿಸುವ ಸ್ವಾವಲಂಬಿತನದ ಮನೋಧೈರ್ಯವು ಈ ಪ್ರವಾಸ ಕಥನದ ಪ್ರಧಾನ ಅಂಶವಾಗಿದೆ. 

ತನ್ನ ವಯಸ್ಸಿನವರು ಚಿತ್ರ-ದೃಶ್ಯಗಳಲ್ಲಿ ಕಳೆದುಹೋಗುತ್ತಿರುವ ಈ ಸಂದರ್ಭಗಳಲ್ಲಿ ಈಕೆಯು ಕಣ್ಣಳತೆಯ ಕ್ಯಾಮರಾವನ್ನು ಆಸೆಗಳಿಗಾಗಿಯೇ ದಿಟ್ಟಿಸುತ್ತಾ ‘ಈ ತುಂಬಿ ಬಾಳು ತುಂಬಿರುವ ತನಕ ತುಂತುಂಬಿ ಕುಡಿಯಬೇಕಾದ’ ಬೇಂದ್ರೆ ಕಾವ್ಯಗುಣವನ್ನು ಅಳವಡಿಸಿಕೊಂಡಿದೆ. ಈ ಕಣ್ಣುಗಳು ಹಲವು ಪ್ರವಾಸ ಕಥನಗಳನ್ನು ತನ್ನ ಒಳನೋಟಗಳಿಂದ ಓದುತ್ತಾ, ‘ಶ್ರೀ ಸಾಮಾನ್ಯರ ನೋಟಗಳನ್ನು ಕಳಚಿ, ಯಾರೂ ನೋಡದ ನೋಟವೊಂದನ್ನು’ ತನ್ನ ವೈಜ್ಞಾನಿಕ, ವೈಚಾರಿಕ ದೃಷ್ಟಿಯಲ್ಲಿ ಸೆರೆಯಿಡಿಯುವ ಶಕ್ತಿ ಪಡೆಯುತ್ತವೆ ಎಂಬ ಭರವಸೆ ಇದೆ. 

‘ಕಣ್ಣು ತಿಳಿ ಆದರ ಎಲ್ಲಾ ತಿಳಿ’ ಎಂಬ ಬೇಂದ್ರೆ ನುಡಿಯೊಂದಿಗೆ ವಿರಾಮ ಹೇಳುತ್ತಿದ್ದೇನೆ. ಈ ಕೃತಿಯು ಪ್ರತಿಯೊಬ್ಬರ ಓದುವಿನ ಹೊಸ ನೋಟಗಳಿಗೆ ಸಿಲುಕಿ ‘ವಿಹಾರಿಕಾ’ ಪದಕ್ಕೆ ಹೆಚ್ಚಿನ ಅರ್ಥ ಬರಲಿ, ಭವಿಷ್ಯದ ಭರವಸೆಯ ಮನೋಚೈತನ್ಯವಾಗಿ ನಿರೀಕ್ಷಿಸುತ್ತೇನೆ. ಶುಭವಾಗಲಿ.


- ಡಾ. ರವಿಶಂಕರ್ ಎ.ಕೆ


ಬುಧವಾರ, ಡಿಸೆಂಬರ್ 18, 2024

ಕೆ.ವಿ ನಾರಾಯಣ ಅವರ ಸಮಗ್ರ ಸಾಹಿತ್ಯ ಉಚಿತ ಕೊಡುಗೆ

 ಕನ್ನಡದ ಭಾಷಾ ವಿಜ್ಞಾನಿ, ಪ್ರಾಧ್ಯಾಪಕರು, ವಿಮರ್ಶಕರು ಆದ ಡಾ. ಕೆ.ವಿ ನಾರಾಯಣ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿರುವುದು ಹರ್ಷನೀಯ. 

ಇಂತಹ ಸಂತಸವನ್ನು ಅರ್ಥಪೂರ್ಣವಾಗಿ ಅನುಭವಿಸಲು ನಮ್ಮ ಬಿಡುವಿನಲ್ಲಿ ಕೆ.ವಿ. ನಾರಾಯಣ ಅವರ ಕೃತಿಗಳನ್ನು ಅಧ್ಯಯನ ಮಾಡುವುದು ಅವರ ಸಾಹಿತ್ಯ ಸೇವೆಯನ್ನು ತಿಳಿಯುವುದು ಸಾರ್ಥಕ ಕೆಲಸ. ಅವರ ಸಮಗ್ರ ಸಾಹಿತ್ಯಗಳಾದ ತೊಂಡುಮೇವು ಹೆಸರಿನ ೧೦ ಸಂಪುಟಗಳನ್ನು ಸಂಚಯದವರು ಸರಿಯಾಗಿ ಓದಲು ಉಚಿತವಾಗಿ ಅನುವು ಮಾಡಿಕೊಟ್ಟಿದ್ದಾರೆ. ಧನ್ಯವಾದಗಳು ಸಂಚಯ..


ಸಹೃದಯರಿಗಾಗಿ ಸಮಗ್ರ ಸಾಹಿತ್ಯ ಕೆಳಗಿನ ಲಿಂಕ್ ಕ್ಲಿಕ್ ಮಾಡಿ..


ಕೆ. ವಿ. ನಾರಾಯಣ ಅವರ ಸಮಗ್ರ ಸಾಹಿತ್ಯ



ಗುರುವಾರ, ಅಕ್ಟೋಬರ್ 24, 2024

ಪ್ರಧಾನ ಕನ್ನಡ ಸೇವಕ ಪಿ.ವಿ. ನಾರಾಯಣ ಅವರು

ಹಿರಿಯ ವಿದ್ವಾಂಸರಾದ ಪಿ.ವಿ ನಾರಾಯಣ ನಮ್ಮ ನಡುವಿನ ಸಜ್ಜನರು. ಇವರು ಪ್ರಾಧ್ಯಾಪಕರಾಗಿ, ಸಾಹಿತಿಯಾಗಿ, ವಿದ್ವಾಂಸರಾಗಿ ನೀಡಿದ ಸೇವೆ ಅನನ್ಯ. 

ಇವರ ಕುರಿತು ಕಣಜ ಸಾಕಷ್ಟು ಮಾಹಿತಿಯನ್ನು ನೀಡುತ್ತದೆ.

ಪಿ.ವಿ.ನಾರಾಯಣ ಅವರ ಪರಿಚಯ







(ಚಿತ್ರ : ಪ್ರಜಾವಾಣಿ)




ಇವರಲ್ಲಿ ಗಮನಿಸಬಹುದಾದ ಗುಣಗಳು

ದಣಿವರಿಯದ ಪ್ರಧಾನರಾಗಿ ಶ್ರಮಿಸುತ್ತಿರುವುದು

ಹಳಗನ್ನಡ ಹಾಗೂ ಶಾಸ್ತ್ರ ಸಾಹಿತ್ಯ ಕುರಿತ ಬೋಧನೆ

ಸರಳತೆ

ಸಮಯ ನಿರ್ವಹಣೆ ಹಾಗೂ ಬದುಕಿನ ಶಿಸ್ತು


ಇವರ ನಲವತ್ತೆಂಟು ಕೃತಿಗಳು ಉಚಿತ ಓದುವಿಗೆ ಲಭ್ಯ ಇರುವುದು ಕನ್ನಡ ಸಾಹಿತ್ಯದ ಹಿರಿಮೆ. ಬರಹಗಳೇ ಮಾರಾಟದ ಬಂಡವಾಳವಾಗಿರುವ ಕಾಲದಲ್ಲಿ ಎಲ್ಲದನ್ನೂ ಸಮಾಜಕ್ಕೆ ಅರ್ಪಿಸಿರುವ ಹಲವು ಸಹೃದಯರಲ್ಲಿ ಇವರು ಕೂಡ ವಿಶ್ವಮಾನ್ಯರು.

ಇವರ ಕೃತಿಗಳು ಈ ಲಿಂಕ್ ಮೂಲಕ ಲಭ್ಯ ಇವೆ.

ಪಿ.ವಿ. ನಾರಾಯಣ ಅವರ ಕೃತಿಗಳು

ಸಂಚಯದಲ್ಲಿ ಕೃತಿಗಳು ಉಚಿತ ಓದುವಿಗಾಗಿ


ಓದುಗರು ಈ ಸಾಹಿತ್ಯ ಭಂಡಾರವನ್ನು ಮುಕ್ತವಾಗಿ ಬಳಸುತ್ತಾ, ಜ್ಞಾನ ಹೆಚ್ಚಿಸಿಕೊಳ್ಳಬಹುದು.

ಸೋಮವಾರ, ಅಕ್ಟೋಬರ್ 21, 2024

ಕೆಲಸವಿಲ್ಲದವರು

 ಕೆಲಸವಿಲ್ಲದವರು

(PHOTO From Wikipedia)

ನಿಜಕ್ಕೂ ಕರಾಳಯುಗದಲ್ಲಿ ಬದುಕುತ್ತಿದ್ದೇನೆ ನಾನು!

ಮುಗ್ಧತೆಯ ಮಾತುಗಳು ನಗೆಪಾಟಲಾಗಿವೆ.

ತಿದ್ದಿ ಅಂದಗೊಳಿಸಿದ ಹುಬ್ಬುಗಳ

ಹಿಂದೆ ಅ-ಸಂವೇದನೆಯು ಅಡಗಿ ಕುಳಿತಿದೆ.

ಭೀಕರ ವರದಿಗಳು ನಮಗೇನೂ ಗೊತ್ತೇಯಿಲ್ಲ

ಎಂಬತೆ ಮುಖದ ಮೇಲೆ ನಗುವು ಸುಳಿದಾಡುತ್ತಿದೆ.

ಬರ್ಟಾಲ್ಟ್ ಬ್ರೆಕ್ಟ್ (೧೯೩೭-೩೮)

ನಾವು ಯಾವುದನ್ನು ಯೋಚಿಸುತ್ತೇವೆಯೋ ಅದನ್ನು ಗಳಿಸಲು ಮಾಡುವ ಎಲ್ಲಾ ತಂತ್ರಗಳೇ ನಮ್ಮ ಸೋಲುಗಳು. ಈ ಸೋಲನ್ನೇ ಇಂದು ಅಭಿವೃದ್ಧಿ ಹಾಗೂ ವ್ಯವಹಾರವೆಂದು ಭಾವಿಸಿದ್ದೇವೆ. ಇಲ್ಲಿ ನಮ್ಮ ಗೆಲವು ಮಾತ್ರ ನಮ್ಮ ಕಣ್ಣಿನ ಮುಂದೆ ಇರುತ್ತದೆ. ಆದರೆ ಸುತ್ತಲೂ ಸೋಲುಗಳ ಶವದಿಂದ ನಮ್ಮ ಗೆಲುವಿನ ನೈಜತೆಯನ್ನು ತಿಳಿಯುವುದೇ ಇಲ್ಲ. ಇಂತಹ ನೈಜತೆಯ ಬೆಳಕೇ ಯೌವನದ ಪಾತ್ರಗಳು.

ಪ್ರತಿಯೊಬ್ಬರೂ ಜೀವನದಲ್ಲಿ ಹಂಬಲಿಸುವ ವಯಸ್ಸೆಂದರೆ ಅದುವೇ ಯೌವನ. ಆದರೆ ಅದೇ ಸಮಸ್ಯೆ ಎಂದರೆ ಒಪ್ಪುವುದಾದರೂ ಹೇಗೆ? ಈ ಒಪ್ಪಿಗೆಯ ಹಿಂದೆ ಸಮಸ್ಯೆಗಳನ್ನೆ ಚೆಲ್ಲಿಕೊಂಡು ಕುಳಿತಾಗ ಸಾಹಸಗಳೆಲ್ಲಾ ಗೌಣವಾಗುತ್ತವೆ. ಸೈನ್ಯದಲ್ಲಿ ಯೌವನಕ್ಕೆ ಮಾತ್ರ ಅವಕಾಶ. ಯೌವನ ಮೀರಿದ ಪ್ರತಿಯೊಬ್ಬರೂ ನಿವೃತ್ತರು. ಜಗತ್ತನ್ನೇ ಕಾಪಾಡುವ ಮೊದಲ ಹುದ್ದೆಯಾದ ಸೈನ್ಯದಲ್ಲಿಯೇ ಯುವ ಮನಸ್ಸುಗಳಿಗೆ ಸರಿಯಾದ ವ್ಯಾಖ್ಯಾನವಿದೆ.

ಕೆಲಸವಿಲ್ಲದವರುಎಂಬ ಕಣ್ಣೋಟವು ಸಮಾಜದಲ್ಲಿ ಯೌವನದಲ್ಲಿರುವ ಪ್ರತಿಯೊಬ್ಬರಿಗೂ ಬೀರುತ್ತದೆ. ಕಂಡ ತಕ್ಷಣವೇ ಓದಿದ್ದು ಮುಗೀತಾ, ಏನ್ ಕೆಲಸ ಮಾಡ್ತಾ ಇದ್ದೀಯಾ, ಹೀಗಾದರೆ ಜೀವನಕ್ಕೆ ಹೇಗೆ?’ ಈ ಎಲ್ಲಾ ಪ್ರಶ್ನೆಗಳು ಪ್ರತಿಹೆಜ್ಜೆಯಲ್ಲೂ ಕಾಡುತ್ತವೆ. ಪುರುಷರಿಗಾದರೆ ಈ ಪ್ರಶ್ನೆಗಳು ಆಯ್ಕೆಯಿಲ್ಲದ ಸೂಚನೆಗಳು. ಮಹಿಳೆಗಾದರೆ ಇಷ್ಟು ಪ್ರಶ್ನೆಗಳೇ ಇಲ್ಲದೇ ಒಂದು ಜೈಲು ವಾಸಕ್ಕಾಗಿ ಸಕಲ ಸಿದ್ಧತೆಗಳು. ಅಂದರೆ ಒಂದು ಗಂಡು ನೋಡಿ ಮದುವೆ ಮಾಡಿದರಾಯಿತು. ಮದುವೆಯಾದರಾಯಿತು ಅಂದರೆ ಎಲ್ಲಾ ಮುಗಿಯಿತು.

ಯೌವನವೆಂದರೆ ಕೆಲಸವಿಲ್ಲದ ವಯಸ್ಸೆಂದು ಭಾವಿಸುವುದಾದರೂ ಹೇಗೆ? ಮನೆಯ ಎಲ್ಲಾ ಕೆಲಸಗಳು ಲೆಕ್ಕವಿಲ್ಲದೆ ಮಾಡುವವರು ಯಾರು? ತಾನು ಶಾಲೆಯಿಂದ ಕಾಪಾಡಿಕೊಂಡೋ, ಕಿತ್ತಾಡಿಕೊಂಡೊ ಬಂದತಹ ಸ್ನೇಹಿತರನ್ನೆಲ್ಲಾ ದಿನನಿತ್ಯ ವಿಚಾರಿಸಿಕೊಂಡು ಕಾಪಾಡುವವರು ಯಾರು? ಇವರು ಸಾಲುವುದಿಲ್ಲವೆಂದು ಜಾಲತಾಣಗಳಲ್ಲಿ ಜಾಲಾಡಿ ಹೊಸ ಸ್ನೇಹಿತರನ್ನು ಸಂಪಾದಿಸುವವರು ಯಾರು? ಈ ಸಂಪಾದಿಸಿದ ಸ್ನೇಹಿತರ ಕಷ್ಟ-ಸುಖಗಳಿಗಾಗಿ ಮಾಡುವ ಸಾಹಸಗಳು ಅಷ್ಟಿಷ್ಟೇ. ಇದೆಲ್ಲವನ್ನೂ ಕೆಲಸವೆಂದು ಏಕೆ ಪರಿಗಣಿಸಿಲ್ಲ. ಅಂದರೆ ನಮ್ಮಲ್ಲಿ ಕೆಲಸವೆಂದರೆ ಸಂಬಳವಿರಬೇಕು. ಹಣದಿಂದ ಅಳೆಯುವುದು, ಹಣಕ್ಕಾಗಿ ದುಡಿಯುವುದು ಮಾತ್ರ ಕೆಲಸವೆಂದು ಭಾವಿಸಲಾಗಿದೆ.

      ಈ ವಿಚಾರವನ್ನು ಸೂಕ್ಷ್ಮವಾಗಿ ನೋಡಿದರೆ ಪ್ರೀತಿಯನ್ನು ಈ ಜಗತ್ತಿನಲ್ಲಿ ಕಾಮವನ್ನಾಗಿ ಪರಿವರ್ತಿಸಿ ಅದರ ಮೌಲ್ಯವನ್ನು ನಾಶಗೊಳಿಸಲಾಗಿದೆ. ಕೆಲಸವಿಲ್ಲದವರು ಎಂದು ಕರೆಯುವ ಪ್ರತಿಯೊಬ್ಬರೂ ಈ ಪ್ರೀತಿಯ ಕಾರ್ಯಗಳನ್ನು ಮಾಡುತ್ತಿರುತ್ತಾರೆ. ಅದಕ್ಕೆ ಸರಿಯಾದ ಪೋಷಣೆ ದೊರೆತರೆ ಆಲದ ಮರವೂ ಆಗಬಹುದು. ಜಗತ್ತನ್ನೇ ವಿಶ್ವಾಸದ ಅಡಿಯಲ್ಲಿ ಬಿಳಲು ಬಿಟ್ಟು ನೆರಳಾಗಬಹುದು. ಬರಿ ಋಣಾತ್ಮಕ ಘೋಷಣೆಯಿಂದ ಹಣೆಪಟ್ಟಿ ಕಟ್ಟಿದರೆ ಸತ್ಯದ ಜಾಗದಲ್ಲೆಲ್ಲಾ ಸುಳ್ಳುಗಳು ಸಹಜವಾಗುತ್ತವೆ. ಪ್ರೀತಿಯು ಕೇವಲ ಕಾಮವಾಗುತ್ತದೆ. ತನ್ನ ಅಗತ್ಯವನ್ನು ಸದಾ ಆಸೆಪಡುತ್ತದೆ. ತೃಪ್ತಿಯಿಲ್ಲದ ಅತೃಪ್ತಿಯಲ್ಲಿ ಸದಾ ಹಂಬಲಹೊಂದುತ್ತದೆ.

ಮಾರ್ಗದಲ್ಲಿ ನಿಮ್ಮ ಜಗತ್ತಿನಲ್ಲಿರುವ ಕೆಲಸವಿಲ್ಲದವರನ್ನು. ಗಮನಿಸಿ. ಅವರಿಗೆ ಪ್ರೀತಿ ತುಂಬಿ, ಅವರ ಕೆಲಸಗಳನ್ನು ಗೌರವಿಸಿ, ಪೋಷಿಸಿ, ಸರಿಯಾದ ರೂಪಕೊಡಿ. ಇದು ಸರಿಯಿಲ್ಲವೆಂದು ಹೇಳುವುದಕ್ಕಿಂತ, ಇದರಲ್ಲಿ ಸರಿಯಾದ ದಾರಿಯಿದು ಎಂದು ತೋರಿದರೆ ಅವರಿಂದ ಕಾಣುವ ಬೆಳಕು ನಿಮ್ಮಿಂದ ಪ್ರಕಾಶವಾಗಿ ಜಗತ್ತನ್ನು ಬೆಳಗುತ್ತದೆ.

-ಅಂಕುರ ೧೧-೧೨-೨೦೨೦

ಬುಧವಾರ, ಅಕ್ಟೋಬರ್ 16, 2024

ಇರುವ ಭಾಗ್ಯವ ನೆನೆದು - ಕನ್ನಡ ಭಾಷೆಯಲ್ಲಿ ಆಡಳಿತ ಮಾಡಿದ ರಾಜರು

 ಕನ್ನಡ ನೆಲದಲ್ಲಿ, ಕನ್ನಡ ಭಾಷೆಯಲ್ಲಿ ಆಳ್ವಿಕೆ ಮಾಡಿದ ರಾಜರು




ಮಯೂರ ವರ್ಮ

ಮಯೂರಶರ್ಮ ಅಥವಾ ಮಯೂರವರ್ಮ ( ಆಳ್ವಿಕೆ 345-365 CE)

ತಾಳಗುಂದದ (ಆಧುನಿಕ ಶಿವಮೊಗ್ಗ ಜಿಲ್ಲೆಯಲ್ಲಿ), ಬನವಾಸಿಯ ಕದಂಬ ಸಾಮ್ರಾಜ್ಯದ ಸ್ಥಾಪಕರಾಗಿದ್ದರು , ಇದು ಇಂದಿನ ಆಧುನಿಕ ಕರ್ನಾಟಕ , ಭಾರತದ ರಾಜ್ಯವನ್ನು ಆಳುವ ಆರಂಭಿಕ ಸ್ಥಳೀಯ ಸಾಮ್ರಾಜ್ಯವಾಗಿದೆ ಕದಂಬರ ಉದಯದ ಮೊದಲು, ಭೂಮಿಯನ್ನು ಆಳುವ ಅಧಿಕಾರದ ಕೇಂದ್ರಗಳು ಕರ್ನಾಟಕ ಪ್ರದೇಶದ ಹೊರಗಿದ್ದವು; ಹೀಗೆ ಕದಂಬರು ಸ್ವತಂತ್ರ ಭೌಗೋಳಿಕ-ರಾಜಕೀಯ ಘಟಕವಾಗಿ ಅಧಿಕಾರಕ್ಕೆ ಬಂದದ್ದು, ಮಣ್ಣಿನ ಭಾಷೆಯಾದ ಕನ್ನಡವನ್ನು ಪ್ರಮುಖ ಪ್ರಾದೇಶಿಕ ಭಾಷೆಯಾಗಿ, ಆಧುನಿಕ ಕರ್ನಾಟಕದ ಇತಿಹಾಸದಲ್ಲಿ ಮಯೂರಶರ್ಮ ಪ್ರಮುಖ ಐತಿಹಾಸಿಕ ವ್ಯಕ್ತಿಯಾಗಿ ಒಂದು ಹೆಗ್ಗುರುತಾಗಿದೆ. 

ಕನ್ನಡ ಭಾಷೆಯ ಪ್ರಾಚೀನ ಶಾಸನಗಳು ಬನವಾಸಿಯ ಕದಂಬರಿಗೆ ಸಲ್ಲುತ್ತವೆ. 


ಕಾಕುತ್ಸ್ಥ ವರ್ಮ

ಕಾಕುತ್ಸ್ಥವರ್ಮ ಕದಂಬ ರಾಜಮನೆತನದ ಪ್ರಖ್ಯಾತ ದೊರೆಗಳಲ್ಲೊಬ್ಬ. ಭಗೀರಥನ (365-385) ಮಗ ಮತ್ತು ರಘುವಿನ (385-405) ಸೋದರ. 405 ರಿಂದ 430ರ ವರೆಗೆ ಆಳಿದ. ಇವನ ಕಾಲದಲ್ಲಿ ಕದಂಬರಾಜ್ಯ ವಿಸ್ತಾರಗೊಂಡಿತು. ಈತ ದಕ್ಷಿಣದಲ್ಲಿ ಪಲ್ಲವರೊಂದಿಗೆ ಹೋರಾಡಿದ. ಗಂಗ ಮತ್ತು ವಾಕಾಟಕ ರಾಜವಂಶಗಳವರಿಗೆ ತನ್ನ ಹೆಣ್ಣುಮಕ್ಕಳನ್ನು ಕೊಟ್ಟು ವಿವಾಹ ಮಾಡಿ ರಾಜ್ಯದ ಸುಭದ್ರತೆ ಖ್ಯಾತಿಗಳನ್ನು ಬೆಳೆಸಿದ. ಈತನ ಕಾಲದಲ್ಲಿ ರಾಜ್ಯ ಸುರಕ್ಷಿತವಾಗಿತ್ತು. ರಾಜ್ಯವನ್ನು ತನ್ನ ಮಕ್ಕಳಾದ ಶಾಂತಿವರ್ಮ ಮತ್ತು ಮೊದಲನೆಯ ಕೃಷ್ಣವರ್ಮನಿಗೆ ವಿಭಾಗ ಮಾಡಿ ಕೊಟ್ಟಿದ್ದನೆಂದೂ ಶಾಂತಿವರ್ಮ ಬನವಾಸಿಯಿಂದಲೂ ಕೃಷ್ಣವರ್ಮ ತ್ರಿಪರ್ವತದಿಂದಲೂ ಸ್ವತಂತ್ರರಾಗಿ ಆಳಿದರೆಂದೂ ತಿಳಿದುಬರುತ್ತದೆ.

ದುರ್ವಿನೀತ

ದುರ್ವಿನೀತ ದೊರೆಯು ಗಂಗರಲ್ಲಿ ಅತ್ಯಂತ ಪ್ರಸಿದ್ದ ದೊರೆ. ಈತನ ತಾಯಿ ಜೇಷ್ಠದೇವಿ ಹಾಗೂ ತಂದೆ ಅವಿನೀತ. ಈತ ಜೈನ ಮತಾವಲಂಬಿಯಾಗಿದ್ದನು. ಭಾರವಿಯ ೧೫ನೇ ದಗಂಕ್ಕೆ ಭಾಷ್ಯವನ್ನ ಬರೆದನು.

ಈತ ಗುಣಾಡ್ಯನ “ವಡ್ಡ ಕಥಾ“ವನ್ನು ಪೈಶಾಚಿ ಭಾಷೇಯಿಂದ ಸಂಸ್ಕೃತಕ್ಕೆ ತರ್ಜುಮೆ ಮಾಡಿದರು. ಈತನ ಗುರು -ಪೂಜ್ಯಪಾದ ಅಥವಾ ದೇವಾನಂದಿ.

ದುರ್ವಿನೀತ ದೊರೆಗಿದ್ದ ಬಿರುದುಗಳು - ಅವನೀತ ಸ್ತರ, ಪೂಜಾಲಾಯ, ಅಹೀತ, ಅನೀತ ಹಾಗೂ ಧರ್ಮ ಮಹಾರಾಜ. ಕುಲೋಥರ , ನೀತಿಶಾಸ್ತ್ರ ವಕ್ತ , ಪ್ರಯೋಕ್ಷ ಕುಶಲ. ಈತನ ಗುರು ದೇವಾನಂದಿಯು ಸಂಸ್ಕೃತ ವ್ಯಾಕರಣ “ಶಬ್ದಾವತಾರ“ ಕೃತಿಯನ್ನು ಬರೆದಿದ್ದಾನೆ .


ಇಮ್ಮಡಿ ಪುಲಿಕೇಶಿ

ಇಮ್ಮಡಿ ಪುಲಿಕೇಶಿಚಾಲುಕ್ಯ ವಂಶದ ಪ್ರಸಿದ್ಧ ದೊರೆ.(ಕ್ರಿ.ಶ ೬೧೦-೬೪೨) ಇವನ ಕಾಲದಲ್ಲಿ ಬಾದಾಮಿ ಚಾಲುಕ್ಯರ ಸಾಮ್ರಾಜ್ಯವು ದಖನ್ ಪ್ರಸ್ಥಭೂಮಿಯ ಹೆಚ್ಚಿನ ಪ್ರದೇಶವನ್ನು ಆವರಿಸಿತು. ಬಾದಾಮಿಯ ಚಾಳುಕ್ಯರೆಂದು ಪ್ರಸಿದ್ಧರಾದ ಈ ವಂಶಜರು ಸುಮಾರು ೨೦೦ ವರ್ಷಗಳ ಕಾಲ ತಮ್ಮ ರಾಜ್ಯಭಾರವನ್ನು ಸ್ಥಾಪಿಸಿದ್ದರು."ಇವರು ಮೂಲತಃ ಬನವಾಸಿಯಿಂದ ಬಂದ ಕನ್ನಡದ ಜನಾಂಗದವರು.ಮುಂದೆ ಜೈನ ಸಂಪ್ರದಾಯ ಪಾಲಿಸಿದರು. ಕ್ರಿ.ಶ.ಸು. ೫3೦ರಲ್ಲಿ ಜಯಸಿಂಹನಿಂದ ಪ್ರಾರಂಭವಾದ ಚಾಲುಕ್ಯ ಮನೆತನದ ಆಡಳಿತವು ಕ್ರಿ.ಶ. ೭೫೭ರಲ್ಲಿ ಎರಡನೆಯ ಕೀರ್ತಿವರ್ಮನ ಕಾಲದಲ್ಲಿ ಮುಕ್ತಾಯವಾಯಿತು. ಕ್ರಿ.ಶ. ೭೫೭ರ ರಾಷ್ಟ್ರಕೂಟ 'ದಂತಿದುರ್ಗ'ನು ಚಾಲುಕ್ಯ ಅರಸ 'ಇಮ್ಮಡಿ ಕೀರ್ತಿವರ್ಮ'ನನ್ನು ಯುದ್ಧದಲ್ಲಿ ಸೋಲಿಸಿ ಪ್ರಾಚೀನ ಕರ್ನಾಟಕದ ರಾಜಕೀಯ ವಲಯದಲ್ಲಿ ಚಾಲುಕ್ಯರು ವಿರಮಿಸುವಂತೆ ಮಾಡಿದನು. ಸಾರ್ವಭೌಮರಾಗಿ ಮೆರೆದ ಬಾದಾಮಿ ಚಾಲುಕ್ಯರು ಕರ್ನಾಟಕದಲ್ಲಿ ಸ್ವತಂತ್ರವಾದ ವಿಶಾಲ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದರು. ಕರ್ನಾಟಕದ ಭೌಗೋಳಿಕ ಗಡಿಗಳನ್ನು ವಿಸ್ತರಿಸಿದ ಕನ್ನಡ ಅರಸರಲ್ಲಿ ಇವರ ಪಾತ್ರ ಮಹತ್ವದ್ದು. ತಮ್ಮ ಆಡಳಿತಾವಧಿಯುದ್ದಕ್ಕೂ ಕಂಚಿ ಪಲ್ಲವರ ಜೊತೆಗೆ ಹಗೆತನ ಸಾಧಿಸಿದ ಬಾದಾಮಿ ಚಾಲುಕ್ಯರು, ಕನ್ನಡದ ಶ್ರೇಷ್ಠ ದೊರೆ 'ಇಮ್ಮಡಿ ಪುಲಕೇಶಿ'(ನೌಕಾಪಡೆಯ ಪಿತಾಮಹ)ಯನ್ನು ಕಳೆದುಕೊಂಡು ಹದಿಮೂರು ವರ್ಷಗಳ ಪರಕೀಯ ಆಡಳಿತದ ಬಿಸಿಯನ್ನು ಸಹಿಸಿದರು. ಆದರೆ ಸೋಲಿನ ಕಹಿ ಅನುಭವವನ್ನು ಇಮ್ಮಡಿ ವಿಕ್ರಮಾದಿತ್ಯನು ಪಲ್ಲವರನ್ನು ಸೋಲಿಸುವುದರ ಮೂಲಕ, ಬಾದಾಮಿ ಚಾಲುಕ್ಯ ಸಾಮ್ರಾಜ್ಯವನ್ನು ಮರುಕಟ್ಟಿದ ಕೀರ್ತಿಗೆ ಪಾತ್ರನಾದನು. ಕರ್ನಾಟಕ ಇತಿಹಾಸದಲ್ಲಿ ನಡೆದು ಹೋದ ಈ ಸೋಲು ಗೆಲುವುಗಳು ದೇಶದ ಸಾಂಸ್ಕೃತಿಕ ಕೊಡು ಕೊಳ್ಳುವಿಕೆಯ ಮೇಲೆ ಅಗಾಧವಾದ ಪರಿಣಾವುವನ್ನು ಬೀರಿದವು. ಮುಖ್ಯವಾಗಿ ಕಲಾ ಸಾಂಸ್ಕೃತಿಕ ಆಯಾಮಗಳು ಬದಲಾವಣೆ ಹೊಂದಿ ಆಚರಣೆಯಲ್ಲಿ ಬಂದವು.


ವಿಜಯಾಧಿತ್ಯ

ಬಾದಾಮಿ ಚಳುಕ್ಯರ ರಾಜರುಗಳ ಪೈಕಿ ಇವನ ಆಳಿಕೆಯ ಕಾಲ ಅತಿ ದೀರ್ಘವಾದುದೂ ಶಾಂತಿ ಮತ್ತು ಸುಭಿಕ್ಷೆಯಿಂದ ಕೂಡಿದ್ದೂ ಆಗಿತ್ತು. ವಿಜಯಾದಿತ್ಯ ತನ್ನ ತಂದೆ ವಿನಯಾದಿತ್ಯನ ರೀತಿಯಲ್ಲೇ ಆಡಳಿತದ ಸುವ್ಯವಸ್ಥೆಗಾಗಿ ರಾಜ್ಯದಲ್ಲಿ ಆಗಿಂದಾಗ್ಗೆ ಸಂಚರಿಸುತ್ತಿದ್ದ ನೆಂದೂ ಹಾಗೂ ತನ್ನ ಆಳಿಕೆಯ ಕಾಲದಲ್ಲಿ ಏಲಾಪುರ, ಹತಂಪುರ, ರಕ್ತಪುರ ಹೀಗೆ ಅನೇಕ ಕಡೆ ಬೀಡು ಬಿಟ್ಟಿದ್ದನೆಂದು ಶಾಸನಗಳಿಂದ ತಿಳಿಯುತ್ತದೆ. ಬಾಣರು, ರೇನಾಡುವಿನ ತೆಲುಗು ಚೋಡರು, ಭೂಪಾದಿತ್ಯ, ಉಪೇಂದ್ರ ಮುಂತಾದ ರಾಜರು ಇವನ ಸಾಮಂತರಾಗಿದ್ದರು.

ವಿಜಯಾದಿತ್ಯನ ಕಾಲ ದೇವಾಲಯ ನಿರ್ಮಾಣಕ್ಕೂ ಪ್ರಸಿದ್ಧವಾಗಿದೆ. ಪಟ್ಟದಕಲ್ಲಿನಲ್ಲಿ ವಿಜಯೇಶ್ವರ ಎಂಬ ಈಶ್ವರ ದೇವಸ್ಥಾನವನ್ನು (ಈಗಿನ ಸಂಗಮೇಶ್ವರ ದೇವಾಲಯ) ಕಟ್ಟಿಸಿದ. ವಿಜಯಾದಿತ್ಯ ಜೈನಧರ್ಮಕ್ಕೂ ತನ್ನ ಗೌರವಾದರವನ್ನು ತೋರಿಸಿ ಅನೇಕ ಜೈನಗುರುಗಳಿಗೆ ದತ್ತಿಗಳನ್ನು ನೀಡಿದ. ಇವನ ಸಹೋದರಿ, ಆಳುಪ ಚಿತ್ರವಾಹನನ ಹೆಂಡತಿ ಕುಂಕುಮ ಮಹಾದೇವಿ ಜೈನಧರ್ಮದಲ್ಲಿ ಅಪಾರ ನಿಷ್ಠೆಯನ್ನು ಹೊಂದಿದ್ದಳು. ಈಕೆ ಲಕ್ಷ್ಮೇಶ್ವರದಲ್ಲಿ ಒಂದು ಜೈನ ದೇವಸ್ಥಾನವನ್ನು ಕಟ್ಟಿಸಿದಳು. ವಿಜಯಾದಿತ್ಯ 733ರಲ್ಲಿ ನಿಧನನಾದ. 



ಮೂರನೇ ಗೋವಿಂದ

ಗೋವಿಂದ III (ರಾಷ್ಟ್ರಕೂಟ)ರಾಷ್ಟ್ರಕೂಟ ವಂಶದ ಪ್ರಖ್ಯಾತ ರಾಜ (ಸು.793-814). ಧ್ರುವನ ಮೂರನೆಯ ಮಗ. ಪ್ರಭೂತವರ್ಷ, ಜಗತ್ತುಂಗ, ಶ್ರೀ ವಲ್ಲಭ, ಕೀರ್ತಿನಾರಾಯಣ, ಜಗತ್ರುದ್ರ, ತ್ರಿಭುವನಧವಳ ಎಂಬ ಬಿರುದುಗಳನ್ನು ಹೊಂದಿದ್ದ.

ತನ್ನ ತಂದೆ ಧ್ರುವನ ಇಚ್ಛೆಯಂತೆ ಅವನ ಅನಂತರ ರಾಷ್ಟ್ರಕೂಟ ಸಿಂಹಾಸನವನ್ನೇರಿದ. ಇವನು ರಾಜನಾದ ಮೇಲೆ ಇವನ ಅಣ್ಣ ರಣಾವಲೋಕ ಸ್ತಂಭ ಸ್ವಲ್ಪಕಾಲ ತೆಪ್ಪಗಿದ್ದರೂ ತಮ್ಮನ ಏಳಿಗೆಯನ್ನು ಸಹಿಸಲಿಲ್ಲ. ತನ್ನನ್ನು ಬಿಟ್ಟು ತಮ್ಮನಿಗೆ ತಂದೆ ಪಟ್ಟಗಟ್ಟಿದುದರಿಂದ ಮೊಳೆತ ಅಸೂಯೆ ಹೆಮ್ಮರವಾಗಿ ಬೆಳೆಯತೊಡಗಿತು. ತಮ್ಮನಿಂದ ಅಧಿಕಾರವನ್ನು ಕಸಿದುಕೊಳ್ಳಲು ಕಂಚಿಯವರೆಗಿನ ಹನ್ನೆರಡು ಮಂದಿ ಸಾಮಂತರನ್ನು ಒಂದುಗೂಡಿಸಿ ಗೋವಿಂದನ ವಿರೋಧವಾಗಿ ಒಂದು ಮಹತ್ತರ ಕೂಟವನ್ನು ರಚಿಸಿದ. ಅವರಲ್ಲಿ ಕಂಚಿಯ ದಂತಿಗ, ನೊಳಂಬವಾಡಿಯ ಚಾರುಪೊನ್ನೇರ ಮತ್ತು ಬನವಾಸಿಯ ಕತ್ತಿಯರ ಮುಖ್ಯರು. ಅಲ್ಲದೆ ಗೋವಿಂದನ ಕೆಲವರು ಮಂತ್ರಿಗಳೂ ಸ್ತಂಭನ ಪರವಾಗಿದ್ದರು. 788ರಲ್ಲಿ ಗಂಗರಾಜ ಶ್ರೀಪುರುಷ ಮರಣಹೊಂದಿದಾಗ ಅವನ ಅನಂತರ ಪಟ್ಟಕ್ಕೆ ಬರಬೇಕಾಗಿದ್ದ ಶಿವಮಾರ ರಾಷ್ಟ್ರಕೂಟ ಕಾರಾಗೃಹದಲ್ಲಿ ಬಂದಿಯಾಗಿದ್ದ. ಗೋವಿಂದ ರಣಾವಲೋಕನನ್ನು ಸದೆಬಡಿಯುವುದಕ್ಕೆ ಅನುಕೂಲವಾಗಲೆಂದು ಶಿವಮಾರನನ್ನು ಬಿಡುಗಡೆಮಾಡಿ ಅವನ ರಾಜ್ಯಕ್ಕೆ ಕಳುಹಿಸಿಕೊಟ್ಟ. ಆದರೆ ಶಿವಮಾರ ರಣಾವಲೋಕ ಸ್ತಂಭನ ಪಕ್ಷಕ್ಕೆ ಸೇರಿಕೊಂಡ. ಗೋವಿಂದ ಸ್ತಂಭನ ದಂಗೆಯನ್ನಡಗಿಸಲು ನಿರತನಾದ. ಸ್ತಂಭನಿಗೆ ಮಿತ್ರರಾಜರಿಂದ ಸಹಾಯ ಬರುವುದಕ್ಕೆ ಮೊದಲೇ ಅವನನ್ನು ಸೆರೆಹಿಡಿದ. ಆದರೆ ಅವನ ತಪ್ಪನ್ನು ಕ್ಷಮಿಸಿ ಪುನಃ ಗಂಗವಾಡಿಯ ಮಾಂಡಲಿಕನನ್ನಾಗಿ ನೇಮಿಸಿದ. ಶಿವಮಾರನನ್ನು ಪುನಃ ಕಾರಾಗೃಹಕ್ಕೆ ತಳ್ಳಿದ. ಅನಂತರ ಗೋವಿಂದ ಕಂಚಿಯ ದಂತಿಗನ ಮೇಲೆ ದಂಡೆತ್ತಿಹೋಗಿ ಅವನನ್ನು ಸೋಲಿಸಿದ; ನೊಳಂಬವಾಡಿಯ ಚಾರುಪೊನ್ನೇರ ಶರಣಾಗತನಾದ. 796ರ ಹೊತ್ತಿಗೆ ಗೋವಿಂದ ಇವೆಲ್ಲ ದಿಗ್ವಿಜಯಗಳನ್ನು ನಿರ್ವಹಿಸಿ ದಕ್ಷಿಣಾಪಥದ ಏಕೈಕ ಪ್ರಭುವಾದ.



ಅಮೋಘವರ್ಷ ನೃಪತುಂಗ 

ಅಮೋಘವರ್ಷ  ಒಬ್ಬ ನಿಪುಣ ಕವಿ ಮತ್ತು ವಿದ್ವಾಂಸ. ಅವರು ಕವಿರಾಜಮಾರ್ಗವನ್ನು ಬರೆದರು (ಅಥವಾ ಸಹ-ಲೇಖಕರು) ಕನ್ನಡದಲ್ಲಿ ಅತ್ಯಂತ ಪ್ರಾಚೀನ ಸಾಹಿತ್ಯ ಕೃತಿ  ಮತ್ತು ಸಂಸ್ಕೃತದಲ್ಲಿ ಧಾರ್ಮಿಕ ಕೃತಿಯಾದ ಪ್ರಶ್ನೋತ್ತರ ರತ್ನಮಾಲಿಕಾ . ಅವರ ಆಳ್ವಿಕೆಯಲ್ಲಿ ಅವರು ನೃಪತುಂಗ , ಅತಿಶಾಧವಲ , ವೀರನಾರಾಯಣ , ರಟ್ಟಮಾರ್ತಾಂಡ ಮತ್ತು ಶ್ರೀವಲ್ಲಭ ಮುಂತಾದ ಬಿರುದುಗಳನ್ನು ಹೊಂದಿದ್ದರು . ಅವರು ರಾಷ್ಟ್ರಕೂಟರ ಆಳ್ವಿಕೆಯ ರಾಜಧಾನಿಯನ್ನು ಇಂದಿನ ಬೀದರ್ ಜಿಲ್ಲೆಯ ಮಯೂರಖಂಡಿಯಿಂದ ಆಧುನಿಕ ಕರ್ನಾಟಕ ರಾಜ್ಯದಲ್ಲಿ ಇಂದಿನ ಕಲಬುರಗಿ ಜಿಲ್ಲೆಯ ಮಾನ್ಯಖೇಟಕ್ಕೆ ಸ್ಥಳಾಂತರಿಸಿದರು . ಅವನು ಸಾಮ್ರಾಜ್ಯಶಾಹಿ ರಾಜಧಾನಿಯನ್ನು "ಭಗವಾನ್ ಇಂದ್ರನಿಗೆ ಹೊಂದಿಸಲು " ನಿರ್ಮಿಸಿದನೆಂದು ಹೇಳಲಾಗುತ್ತದೆ . ರಾಜಮನೆತನದವರಿಗೆ ಅತ್ಯುತ್ತಮವಾದ ಕೆಲಸಗಾರಿಕೆಯನ್ನು ಬಳಸಿಕೊಂಡು ವಿಸ್ತೃತ ವಿನ್ಯಾಸದ ಕಟ್ಟಡಗಳನ್ನು ಸೇರಿಸಲು ರಾಜಧಾನಿಯನ್ನು ಯೋಜಿಸಲಾಗಿತ್ತು. 

ಅರಬ್ ಪ್ರವಾಸಿ ಸುಲೈಮಾನ್ ಅಮೋಘವರ್ಷವನ್ನು "ಜಗತ್ತಿನ ನಾಲ್ಕು ಮಹಾನ್ ರಾಜರು" ಎಂದು ಬಣ್ಣಿಸಿದ್ದಾರೆ. ಅವರ ಧಾರ್ವಿುಕ ಮನೋಧರ್ಮ, ಲಲಿತಕಲೆಗಳು ಮತ್ತು ಸಾಹಿತ್ಯದಲ್ಲಿ ಅವರ ಆಸಕ್ತಿ ಮತ್ತು ಅವರ ಶಾಂತಿ-ಪ್ರೀತಿಯ ಸ್ವಭಾವಕ್ಕಾಗಿ, ಇತಿಹಾಸಕಾರ ಪಂಚಮುಖಿ ಅವರನ್ನು ಚಕ್ರವರ್ತಿ ಅಶೋಕನಿಗೆ ಹೋಲಿಸಿ ಅವರಿಗೆ "ದಕ್ಷಿಣದ ಅಶೋಕ" ಗೌರವವನ್ನು ನೀಡಿದ್ದಾರೆ. ಕವಿರಾಜಮಾರ್ಗ ಪಠ್ಯದಲ್ಲಿ ಸಾಕ್ಷಿಯಾಗಿರುವಂತೆ ಅಮೋಘವರ್ಷವು ಕನ್ನಡ ಜನರ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಅತ್ಯುನ್ನತವಾದ ಅಭಿಮಾನವನ್ನು ತೋರುತ್ತಿದೆ .

ಮೊದಲನೇ ಅಮೋಘವರ್ಷ
ಅಮೋಘವರ್ಷ
ಕುಮ್ಸಿಯ ವೀರಭದ್ರ ದೇವಸ್ಥಾನದಲ್ಲಿ ರಾಷ್ಟ್ರಕೂಟ ರಾಜ ಅಮೋಘವರ್ಷ I ರ ಹಳೆಯ ಕನ್ನಡ ಶಾಸನ (ಕ್ರಿ.ಶ. 876)
6ನೇ ರಾಷ್ಟ್ರಕೂಟ ಚಕ್ರವರ್ತಿ
ಆಳ್ವಿಕೆಸಿ.  814  - ಸಿ.  878 CE (64 ವರ್ಷಗಳು)
ಪೂರ್ವಾಧಿಕಾರಿಗೋವಿಂದ III
ಉತ್ತರಾಧಿಕಾರಿಕೃಷ್ಣ II
ತಂದೆಗೋವಿಂದ III
ಜನನ800 CE
ಮರಣ878 CE
ಧರ್ಮಜೈನ ಧರ್ಮ [ 1 ]



ಆರನೇ ವಿಕ್ರಮಾದಿತ್ಯ


ಆರನೇ ವಿಕ್ರಮಾದಿತ್ಯನು ಕಲ್ಯಾಣಿ ಚಾಲುಕ್ಯ ರಾಜವಂಶದ‌ ಪ್ರಖ್ಯಾತ ಮತ್ತು ಪರಾಕ್ರಮಿ ದೊರೆ. ಇವನು ತನ್ನ ಅವಧಿಯಲ್ಲಿ ಶಾಲಿವಾಹನ ಶಕೆಯನ್ನು ರದ್ದು ಮಾಡಿ ತನ್ನದೇ ಆದ ವಿಕ್ರಮ ಶಕೆಯನ್ನು ಆರಂಭಿಸುತ್ತಾನೆ. ಇದು ಚಾಲುಕ್ಯ-ವಿಕ್ರಮ ಶಕೆ ಎಂದು ಪ್ರತೀತಿ ಪಡೆಯಿತು. ಇವನ ಆಳ್ವಿಕೆಯ ಕಾಲ ಕ್ರಿ.ಶ.೧೦೭೬-೧೧೨೬. ಈ ೫೦ ವರುಷಗಳು ಇಡಿಯ ಕಲ್ಯಾಣಿ ಚಾಲುಕ್ಯರ ವಂಶಾವಳಿಯಲ್ಲಿ ಅತ್ಯಂತ ಧೀರ್ಘ ಆಳ್ವಿಕೆ. ಈ ೬ನೇ ವಿಕ್ರಮಾದಿತ್ಯನು ತ್ರಿಭುವನಮಲ್ಲನೆಂದು ಬಿರುದಾಂಕಿತನಾಗಿದ್ದನು. ವಿಜಯನಗರ ಸಾಮ್ರಾಜ್ಯದ ಪೂರ್ವಕಾಲದಲ್ಲಿ ದೊರೆತ ಅತಿ ಹೆಚ್ಚು ಶಾಸನಗಳನ್ನು ಇವನ ಆಳ್ವಿಕೆಯಲ್ಲಿ ಬರೆಸಲ್ಪಟ್ಟಿವೆ.[]

ವಿಕ್ರಮಾದಿತ್ಯ ೬
ವಿಕ್ರಮಾದಿತ್ಯ ೬
ಕೈಠಭೇಶ್ವರ ದೇಗುಲ, ಕುಬತೂರು(ಕ್ರಿಶ.೧೧೧೦)
ಕಲ್ಯಾಣಿ ಚಾಲುಕ್ಯ ಅರಸ
ಆಳ್ವಿಕೆಕ್ರಿ.ಶ.೧೦೭೬ -೧೧೨೬(೫೦ ವರ್ಷಗಳು)
ಪೂರ್ವಾಧಿಕಾರಿಸೋಮೇಶ್ವರ ೨
ಉತ್ತರಾಧಿಕಾರಿಸೋಮೇಶ್ವರ ೩
ಗಂಡ/ಹೆಂಡತಿಚಂದಳಾ ದೇವಿ
ಕೇತಲಾ ದೇವಿ
ಸವಳಾ ದೇವಿ
ಸಂತಾನ
ಸೋಮೇಶ್ವರ ೩
ಮನೆತನಕಲ್ಯಾಣಿ ಚಾಲುಕ್ಯ
ತಂದೆಸೋಮೇಶ್ವರ ೧
ಮರಣಕ್ರಿ.ಶ.೧೧೨೬

ಈ ದೊರೆ ವಿಕ್ರಮಾದಿತ್ಯನು ಕಲೆ ಮತ್ತು ಸಂಸ್ಕೃತಿಯ ಪೋಷಣೆಗೆ ಗಮನಾರ್ಹನು.ಇವನ ಆಸ್ಥಾನ ಕನ್ನಡ ಮತ್ತು ಸಂಸ್ಕೃತ ಕವಿ, ಪಂಡಿತರಿಂದ ವಿಜೃಂಭಿಸುತ್ತಿತ್ತು.







ವಿಷ್ಣುವರ್ಧನ

ಸಾಮ್ರಾಜ್ಯದ ಅತ್ಯಂತ ಪ್ರಸಿದ್ಧ ಅರಸು ಬಿಟ್ಟಿಗ, ಈತನ ನಂತರದ ಹೆಸರು ವಿಷ್ಣುವರ್ಧನ (ಆಡಳಿತ: ಸು ೧೧೧೦-೧೧೪೨). ವಿಷ್ಣುವರ್ಧನನ ಆಡಳಿತದ ಕಾಲದಲ್ಲಿ ಹೊಯ್ಸಳ ಸಾಮ್ರಾಜ್ಯ ಇಂದಿನ ಕರ್ನಾಟಕ ರಾಜ್ಯದ ಬಲಿಷ್ಠ ಸಾಮ್ರಾಜ್ಯವಾದದ್ದಲ್ಲದೆ ಪಕ್ಕದ ರಾಜ್ಯಗಳಲ್ಲಿಯೂ ವಿಸ್ತರಿಸಿತು. ವಿಷ್ಣುವರ್ಧನನ ಕಾಲದಲ್ಲಿ ಕಲೆ ಮತ್ತು ಶಿಲ್ಪಕಲೆಗೆ ಬಹಳ ಪ್ರೋತ್ಸಾಹ ನೀಡಲಾಯಿತು. ಈತನ ಪತ್ನಿ ಮತ್ತು ಹೊಯ್ಸಳ ರಾಣಿ ಶಾಂತಲೆ ಪ್ರಸಿದ್ಧ ಭರತನಾಟ್ಯ ನರ್ತಕಿ ಮತ್ತು ಶಿಲ್ಪಕಲೆಯಲ್ಲಿ ಆಸಕ್ತಿಯಿದ್ದವಳೆಂದು ಹೆಸರಾಗಿದ್ದಾಳೆ. ಈ ಕಾಲದಲ್ಲಿಯೇ ಹೊಯ್ಸಳ ಶಿಲ್ಪಕಲೆಯ ಅತ್ಯುನ್ನತ ಉದಾಹರಣೆಗಳು ಮೂಡಿಬಂದವು. ಹಳೆಬೀಡಿನ ಹೊಯ್ಸಳೇಶ್ವರ ದೇವಾಲಯವನ್ನು ಕಟ್ಟಲು ೮೬ ವರ್ಷಗಳು ಬೇಕಾದವು! ಹಾಗೆಯೇ ಬೇಲೂರಿನ ಚೆನ್ನಕೇಶವ ದೇವಸ್ಥಾನಬೇಲೂರಿನ ಚೆನ್ನಕೇಶವ ದೇವಸ್ಥಾನ ೧೦೩ ವರ್ಷಗಳ ಪರಿಶ್ರಮದ ಫಲ.


ಕೃಷ್ಣದೇವರಾಯ

ಕೃಷ್ಣದೇವರಾಯ ಕ್ರಿ.ಶ.೧೫೦೯ ರಿಂದ ೧೫೨೯ ರ ವರೆಗೆ ಆಳಿದ ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಮತ್ತು ವಿಜಯನಗರದ ಅರಸರಲ್ಲಿ ಅತಿ ಪ್ರಮುಖನು. ತುಳುವ ರಾಜವಂಶದ ಮೂರನೆಯ ಅರಸ[]ವಿಜಯನಗರ ಸಾಮ್ರಾಜ್ಯ ಈತನ ಆಳ್ವಿಕೆಯ ಕಾಲದಲ್ಲಿ ಉಚ್ಛ್ರಾಯಕ್ಕೇರಿತು.ಕನ್ನಡ ನಾಡಿನಲ್ಲಿ "ಮೂರುರಾಯರಗಂಡ", "ಕನ್ನಡರಾಜ್ಯ ರಮಾರಮಣ" ಎಂದೂ, ಆಂಧ್ರದಲ್ಲಿ "ಆಂಧ್ರಭೋಜ" ಎಂದೂ, ಸ್ವತಃ ಉತ್ತಮ ಬರಹಗಾರನಾಗಿದ್ದ ಕೃಷ್ಣದೇವರಾಯನು ಸಮಕಾಲೀನ ಕವಿಗಳಿಂದ "ಉರುಕಳ್ ವೈಭವ ನಿವಾಹ ನಿಧಾನ" ಎಂದೂ ಬಿರುದಾಂಕಿತನಾದ ಈತನ ಕಾಲದ ವೈಭವ ಇಂದೂ ಮನೆಮಾತಾಗಿದೆ.

Sri Krishnadevaraya/ ಶ್ರೀ ಕೃಷ್ಣದೇವರಾಯ
ವಿಜಯನಗರ ಸಾಮ್ರಾಟ
ಸಾಮ್ರಾಟ್ ಶ್ರೀ ಕೃಷ್ಣದೇವರಾಯರ ಕಂಚಿನ ಪ್ರತಿಮೆ
ರಾಜ್ಯಭಾರ೨೬ ಜುಲೈ ೧೫೦೯ - ೧೫೨೯[]
ಜನನ೧೬ ಫೆಬ್ರುವರಿ ೧೪೭೧
ಜನ್ಮ ಸ್ಥಳಹಂಪಿ, ಕರ್ನಾಟಕ
ಮರಣ೧೫೨೯ ಅಕ್ಟೋಬರ್‌ ೧೭
ಸಮಾಧಿ ಸ್ಥಳಹಂಪಿ, ಕರ್ನಾಟಕ
ಪೂರ್ವಾಧಿಕಾರಿವೀರ ನರಸಿಂಹರಾಯ
ಉತ್ತರಾಧಿಕಾರಿಅಚ್ಯುತ ದೇವರಾಯ
ಪಟ್ಟದರಸಿಚಿನ್ನಾ ದೇವಿ,
ತಿರುಮಲಾ ದೇವಿ,
ಅನ್ನಪೂರ್ಣಾ ದೇವಿ
ವಂಶತುಳುವ ವಂಶ
ತಂದೆತುಳುವ ನರಸ ನಾಯಕ
ಧಾರ್ಮಿಕ ನಂಬಿಕೆಗಳುಹಿಂದೂ


ಚಿಕ್ಕದೇವರಾಜ ಒಡೆಯರ್

ಚಿಕ್ಕ ದೇವರಾಜ
ಮೈಸೂರಿನ ೧೪ನೇ ಮಹಾರಾಜ
ಆಳ್ವಿಕೆ೧೬೭೩–೧೭೦೪
ಪೂರ್ವಾಧಿಕಾರಿದೊಡ್ಡ ಕೆಂಪದೇವರಾಜ(ತಂದೆಯ ಚಿಕ್ಕಪ್ಪ)
ಉತ್ತರಾಧಿಕಾರಿಕಂಠೀರವ ನರಸರಾಜII (ಮಗ)
ಸಂತಾನ
ಕಂಠೀರವ ನರಸರಾಜ II
ಪೂರ್ಣ ಹೆಸರು
ಚಿಕ್ಕ ದೇವರಾಜ ಒಡೆಯರ್
ತಂದೆದೊಡ್ಡ ದೇವರಾಜ
ಜನನ೨೨ ಸೆಪ್ಟೆಂಬರ್ ೧೬೪೫
ಮರಣ೧೬ ನವೆಂಬರ್ ೧೭೦೪

ದೇವರಾಜ ಒಡೆಯರ್ II (೨೨ ಸೆಪ್ಟೆಂಬರ್ ೧೬೪೫ - ನವೆಂಬರ್ ೧೭೦೪) ೧೬೭೩ ರಿಂದ ೧೭೦೪ ರವರೆಗೆ ಮೈಸೂರು ಸಾಮ್ರಾಜ್ಯದ ಹದಿನಾಲ್ಕನೆಯ ಮಹಾರಾಜರಾಗಿದ್ದರು . ಈ ಸಮಯದಲ್ಲಿ, ಮೈಸೂರು ತನ್ನ ಪೂರ್ವಜರ ನಂತರ ಮತ್ತಷ್ಟು ಗಮನಾರ್ಹ ವಿಸ್ತರಣೆಯನ್ನು ಕಂಡಿತು. ಅವರ ಆಳ್ವಿಕೆಯಲ್ಲಿ, ಕೇಂದ್ರೀಕೃತ ಮಿಲಿಟರಿ ಶಕ್ತಿಯು ಈ ಪ್ರದೇಶಕ್ಕೆ ಅಭೂತಪೂರ್ವ ಮಟ್ಟಕ್ಕೆ ಹೆಚ್ಚಾಯಿತು.





ಈ ಎಲ್ಲಾ ಮಾಹಿತಿಯನ್ನು ವಿಕಿಪೀಡಿಯದಿಂದ ನೇರವಾಗಿ ಪಡೆಯಲಾಗಿದೆ.


ಸಹಕಾರ : ರವಿಕುಮಾರ್, ಇತಿಹಾಸ ಉಪನ್ಯಾಸಕರು

ಸಂಪಾದನೆ - ಡಾ. ರವಿಶಂಕರ್ ಎ.ಕೆ