ಕನ್ನಡ ನೆಲದಲ್ಲಿ, ಕನ್ನಡ ಭಾಷೆಯಲ್ಲಿ ಆಳ್ವಿಕೆ ಮಾಡಿದ ರಾಜರು
ಮಯೂರ ವರ್ಮ
ಮಯೂರಶರ್ಮ ಅಥವಾ ಮಯೂರವರ್ಮ ( ಆಳ್ವಿಕೆ 345-365 CE)
ತಾಳಗುಂದದ (ಆಧುನಿಕ ಶಿವಮೊಗ್ಗ ಜಿಲ್ಲೆಯಲ್ಲಿ), ಬನವಾಸಿಯ ಕದಂಬ ಸಾಮ್ರಾಜ್ಯದ ಸ್ಥಾಪಕರಾಗಿದ್ದರು , ಇದು ಇಂದಿನ ಆಧುನಿಕ ಕರ್ನಾಟಕ , ಭಾರತದ ರಾಜ್ಯವನ್ನು ಆಳುವ ಆರಂಭಿಕ ಸ್ಥಳೀಯ ಸಾಮ್ರಾಜ್ಯವಾಗಿದೆ . ಕದಂಬರ ಉದಯದ ಮೊದಲು, ಭೂಮಿಯನ್ನು ಆಳುವ ಅಧಿಕಾರದ ಕೇಂದ್ರಗಳು ಕರ್ನಾಟಕ ಪ್ರದೇಶದ ಹೊರಗಿದ್ದವು; ಹೀಗೆ ಕದಂಬರು ಸ್ವತಂತ್ರ ಭೌಗೋಳಿಕ-ರಾಜಕೀಯ ಘಟಕವಾಗಿ ಅಧಿಕಾರಕ್ಕೆ ಬಂದದ್ದು, ಮಣ್ಣಿನ ಭಾಷೆಯಾದ ಕನ್ನಡವನ್ನು ಪ್ರಮುಖ ಪ್ರಾದೇಶಿಕ ಭಾಷೆಯಾಗಿ, ಆಧುನಿಕ ಕರ್ನಾಟಕದ ಇತಿಹಾಸದಲ್ಲಿ ಮಯೂರಶರ್ಮ ಪ್ರಮುಖ ಐತಿಹಾಸಿಕ ವ್ಯಕ್ತಿಯಾಗಿ ಒಂದು ಹೆಗ್ಗುರುತಾಗಿದೆ.
ಕನ್ನಡ ಭಾಷೆಯ ಪ್ರಾಚೀನ ಶಾಸನಗಳು ಬನವಾಸಿಯ ಕದಂಬರಿಗೆ ಸಲ್ಲುತ್ತವೆ.
ಕಾಕುತ್ಸ್ಥ ವರ್ಮ
ದುರ್ವಿನೀತ
ದುರ್ವಿನೀತ ದೊರೆಯು ಗಂಗರಲ್ಲಿ ಅತ್ಯಂತ ಪ್ರಸಿದ್ದ ದೊರೆ. ಈತನ ತಾಯಿ ಜೇಷ್ಠದೇವಿ ಹಾಗೂ ತಂದೆ ಅವಿನೀತ. ಈತ ಜೈನ ಮತಾವಲಂಬಿಯಾಗಿದ್ದನು. ಭಾರವಿಯ ೧೫ನೇ ದಗಂಕ್ಕೆ ಭಾಷ್ಯವನ್ನ ಬರೆದನು.
ಈತ ಗುಣಾಡ್ಯನ “ವಡ್ಡ ಕಥಾ“ವನ್ನು ಪೈಶಾಚಿ ಭಾಷೇಯಿಂದ ಸಂಸ್ಕೃತಕ್ಕೆ ತರ್ಜುಮೆ ಮಾಡಿದರು. ಈತನ ಗುರು -ಪೂಜ್ಯಪಾದ ಅಥವಾ ದೇವಾನಂದಿ.
ದುರ್ವಿನೀತ ದೊರೆಗಿದ್ದ ಬಿರುದುಗಳು - ಅವನೀತ ಸ್ತರ, ಪೂಜಾಲಾಯ, ಅಹೀತ, ಅನೀತ ಹಾಗೂ ಧರ್ಮ ಮಹಾರಾಜ. ಕುಲೋಥರ , ನೀತಿಶಾಸ್ತ್ರ ವಕ್ತ , ಪ್ರಯೋಕ್ಷ ಕುಶಲ. ಈತನ ಗುರು ದೇವಾನಂದಿಯು ಸಂಸ್ಕೃತ ವ್ಯಾಕರಣ “ಶಬ್ದಾವತಾರ“ ಕೃತಿಯನ್ನು ಬರೆದಿದ್ದಾನೆ .
ಇಮ್ಮಡಿ ಪುಲಿಕೇಶಿ
ಇಮ್ಮಡಿ ಪುಲಿಕೇಶಿ, ಚಾಲುಕ್ಯ ವಂಶದ ಪ್ರಸಿದ್ಧ ದೊರೆ.(ಕ್ರಿ.ಶ ೬೧೦-೬೪೨) ಇವನ ಕಾಲದಲ್ಲಿ ಬಾದಾಮಿ ಚಾಲುಕ್ಯರ ಸಾಮ್ರಾಜ್ಯವು ದಖನ್ ಪ್ರಸ್ಥಭೂಮಿಯ ಹೆಚ್ಚಿನ ಪ್ರದೇಶವನ್ನು ಆವರಿಸಿತು. ಬಾದಾಮಿಯ ಚಾಳುಕ್ಯರೆಂದು ಪ್ರಸಿದ್ಧರಾದ ಈ ವಂಶಜರು ಸುಮಾರು ೨೦೦ ವರ್ಷಗಳ ಕಾಲ ತಮ್ಮ ರಾಜ್ಯಭಾರವನ್ನು ಸ್ಥಾಪಿಸಿದ್ದರು."ಇವರು ಮೂಲತಃ ಬನವಾಸಿಯಿಂದ ಬಂದ ಕನ್ನಡದ ಜನಾಂಗದವರು.ಮುಂದೆ ಜೈನ ಸಂಪ್ರದಾಯ ಪಾಲಿಸಿದರು. ಕ್ರಿ.ಶ.ಸು. ೫3೦ರಲ್ಲಿ ಜಯಸಿಂಹನಿಂದ ಪ್ರಾರಂಭವಾದ ಚಾಲುಕ್ಯ ಮನೆತನದ ಆಡಳಿತವು ಕ್ರಿ.ಶ. ೭೫೭ರಲ್ಲಿ ಎರಡನೆಯ ಕೀರ್ತಿವರ್ಮನ ಕಾಲದಲ್ಲಿ ಮುಕ್ತಾಯವಾಯಿತು. ಕ್ರಿ.ಶ. ೭೫೭ರ ರಾಷ್ಟ್ರಕೂಟ 'ದಂತಿದುರ್ಗ'ನು ಚಾಲುಕ್ಯ ಅರಸ 'ಇಮ್ಮಡಿ ಕೀರ್ತಿವರ್ಮ'ನನ್ನು ಯುದ್ಧದಲ್ಲಿ ಸೋಲಿಸಿ ಪ್ರಾಚೀನ ಕರ್ನಾಟಕದ ರಾಜಕೀಯ ವಲಯದಲ್ಲಿ ಚಾಲುಕ್ಯರು ವಿರಮಿಸುವಂತೆ ಮಾಡಿದನು. ಸಾರ್ವಭೌಮರಾಗಿ ಮೆರೆದ ಬಾದಾಮಿ ಚಾಲುಕ್ಯರು ಕರ್ನಾಟಕದಲ್ಲಿ ಸ್ವತಂತ್ರವಾದ ವಿಶಾಲ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದರು. ಕರ್ನಾಟಕದ ಭೌಗೋಳಿಕ ಗಡಿಗಳನ್ನು ವಿಸ್ತರಿಸಿದ ಕನ್ನಡ ಅರಸರಲ್ಲಿ ಇವರ ಪಾತ್ರ ಮಹತ್ವದ್ದು. ತಮ್ಮ ಆಡಳಿತಾವಧಿಯುದ್ದಕ್ಕೂ ಕಂಚಿ ಪಲ್ಲವರ ಜೊತೆಗೆ ಹಗೆತನ ಸಾಧಿಸಿದ ಬಾದಾಮಿ ಚಾಲುಕ್ಯರು, ಕನ್ನಡದ ಶ್ರೇಷ್ಠ ದೊರೆ 'ಇಮ್ಮಡಿ ಪುಲಕೇಶಿ'(ನೌಕಾಪಡೆಯ ಪಿತಾಮಹ)ಯನ್ನು ಕಳೆದುಕೊಂಡು ಹದಿಮೂರು ವರ್ಷಗಳ ಪರಕೀಯ ಆಡಳಿತದ ಬಿಸಿಯನ್ನು ಸಹಿಸಿದರು. ಆದರೆ ಸೋಲಿನ ಕಹಿ ಅನುಭವವನ್ನು ಇಮ್ಮಡಿ ವಿಕ್ರಮಾದಿತ್ಯನು ಪಲ್ಲವರನ್ನು ಸೋಲಿಸುವುದರ ಮೂಲಕ, ಬಾದಾಮಿ ಚಾಲುಕ್ಯ ಸಾಮ್ರಾಜ್ಯವನ್ನು ಮರುಕಟ್ಟಿದ ಕೀರ್ತಿಗೆ ಪಾತ್ರನಾದನು. ಕರ್ನಾಟಕ ಇತಿಹಾಸದಲ್ಲಿ ನಡೆದು ಹೋದ ಈ ಸೋಲು ಗೆಲುವುಗಳು ದೇಶದ ಸಾಂಸ್ಕೃತಿಕ ಕೊಡು ಕೊಳ್ಳುವಿಕೆಯ ಮೇಲೆ ಅಗಾಧವಾದ ಪರಿಣಾವುವನ್ನು ಬೀರಿದವು. ಮುಖ್ಯವಾಗಿ ಕಲಾ ಸಾಂಸ್ಕೃತಿಕ ಆಯಾಮಗಳು ಬದಲಾವಣೆ ಹೊಂದಿ ಆಚರಣೆಯಲ್ಲಿ ಬಂದವು.
ವಿಜಯಾಧಿತ್ಯ
ಬಾದಾಮಿ ಚಳುಕ್ಯರ ರಾಜರುಗಳ ಪೈಕಿ ಇವನ ಆಳಿಕೆಯ ಕಾಲ ಅತಿ ದೀರ್ಘವಾದುದೂ ಶಾಂತಿ ಮತ್ತು ಸುಭಿಕ್ಷೆಯಿಂದ ಕೂಡಿದ್ದೂ ಆಗಿತ್ತು. ವಿಜಯಾದಿತ್ಯ ತನ್ನ ತಂದೆ ವಿನಯಾದಿತ್ಯನ ರೀತಿಯಲ್ಲೇ ಆಡಳಿತದ ಸುವ್ಯವಸ್ಥೆಗಾಗಿ ರಾಜ್ಯದಲ್ಲಿ ಆಗಿಂದಾಗ್ಗೆ ಸಂಚರಿಸುತ್ತಿದ್ದ ನೆಂದೂ ಹಾಗೂ ತನ್ನ ಆಳಿಕೆಯ ಕಾಲದಲ್ಲಿ ಏಲಾಪುರ, ಹತಂಪುರ, ರಕ್ತಪುರ ಹೀಗೆ ಅನೇಕ ಕಡೆ ಬೀಡು ಬಿಟ್ಟಿದ್ದನೆಂದು ಶಾಸನಗಳಿಂದ ತಿಳಿಯುತ್ತದೆ. ಬಾಣರು, ರೇನಾಡುವಿನ ತೆಲುಗು ಚೋಡರು, ಭೂಪಾದಿತ್ಯ, ಉಪೇಂದ್ರ ಮುಂತಾದ ರಾಜರು ಇವನ ಸಾಮಂತರಾಗಿದ್ದರು.
ವಿಜಯಾದಿತ್ಯನ ಕಾಲ ದೇವಾಲಯ ನಿರ್ಮಾಣಕ್ಕೂ ಪ್ರಸಿದ್ಧವಾಗಿದೆ. ಪಟ್ಟದಕಲ್ಲಿನಲ್ಲಿ ವಿಜಯೇಶ್ವರ ಎಂಬ ಈಶ್ವರ ದೇವಸ್ಥಾನವನ್ನು (ಈಗಿನ ಸಂಗಮೇಶ್ವರ ದೇವಾಲಯ) ಕಟ್ಟಿಸಿದ. ವಿಜಯಾದಿತ್ಯ ಜೈನಧರ್ಮಕ್ಕೂ ತನ್ನ ಗೌರವಾದರವನ್ನು ತೋರಿಸಿ ಅನೇಕ ಜೈನಗುರುಗಳಿಗೆ ದತ್ತಿಗಳನ್ನು ನೀಡಿದ. ಇವನ ಸಹೋದರಿ, ಆಳುಪ ಚಿತ್ರವಾಹನನ ಹೆಂಡತಿ ಕುಂಕುಮ ಮಹಾದೇವಿ ಜೈನಧರ್ಮದಲ್ಲಿ ಅಪಾರ ನಿಷ್ಠೆಯನ್ನು ಹೊಂದಿದ್ದಳು. ಈಕೆ ಲಕ್ಷ್ಮೇಶ್ವರದಲ್ಲಿ ಒಂದು ಜೈನ ದೇವಸ್ಥಾನವನ್ನು ಕಟ್ಟಿಸಿದಳು. ವಿಜಯಾದಿತ್ಯ 733ರಲ್ಲಿ ನಿಧನನಾದ.
ಗೋವಿಂದ III (ರಾಷ್ಟ್ರಕೂಟ)ರಾಷ್ಟ್ರಕೂಟ ವಂಶದ ಪ್ರಖ್ಯಾತ ರಾಜ (ಸು.793-814). ಧ್ರುವನ ಮೂರನೆಯ ಮಗ. ಪ್ರಭೂತವರ್ಷ, ಜಗತ್ತುಂಗ, ಶ್ರೀ ವಲ್ಲಭ, ಕೀರ್ತಿನಾರಾಯಣ, ಜಗತ್ರುದ್ರ, ತ್ರಿಭುವನಧವಳ ಎಂಬ ಬಿರುದುಗಳನ್ನು ಹೊಂದಿದ್ದ.
ತನ್ನ ತಂದೆ ಧ್ರುವನ ಇಚ್ಛೆಯಂತೆ ಅವನ ಅನಂತರ ರಾಷ್ಟ್ರಕೂಟ ಸಿಂಹಾಸನವನ್ನೇರಿದ. ಇವನು ರಾಜನಾದ ಮೇಲೆ ಇವನ ಅಣ್ಣ ರಣಾವಲೋಕ ಸ್ತಂಭ ಸ್ವಲ್ಪಕಾಲ ತೆಪ್ಪಗಿದ್ದರೂ ತಮ್ಮನ ಏಳಿಗೆಯನ್ನು ಸಹಿಸಲಿಲ್ಲ. ತನ್ನನ್ನು ಬಿಟ್ಟು ತಮ್ಮನಿಗೆ ತಂದೆ ಪಟ್ಟಗಟ್ಟಿದುದರಿಂದ ಮೊಳೆತ ಅಸೂಯೆ ಹೆಮ್ಮರವಾಗಿ ಬೆಳೆಯತೊಡಗಿತು. ತಮ್ಮನಿಂದ ಅಧಿಕಾರವನ್ನು ಕಸಿದುಕೊಳ್ಳಲು ಕಂಚಿಯವರೆಗಿನ ಹನ್ನೆರಡು ಮಂದಿ ಸಾಮಂತರನ್ನು ಒಂದುಗೂಡಿಸಿ ಗೋವಿಂದನ ವಿರೋಧವಾಗಿ ಒಂದು ಮಹತ್ತರ ಕೂಟವನ್ನು ರಚಿಸಿದ. ಅವರಲ್ಲಿ ಕಂಚಿಯ ದಂತಿಗ, ನೊಳಂಬವಾಡಿಯ ಚಾರುಪೊನ್ನೇರ ಮತ್ತು ಬನವಾಸಿಯ ಕತ್ತಿಯರ ಮುಖ್ಯರು. ಅಲ್ಲದೆ ಗೋವಿಂದನ ಕೆಲವರು ಮಂತ್ರಿಗಳೂ ಸ್ತಂಭನ ಪರವಾಗಿದ್ದರು. 788ರಲ್ಲಿ ಗಂಗರಾಜ ಶ್ರೀಪುರುಷ ಮರಣಹೊಂದಿದಾಗ ಅವನ ಅನಂತರ ಪಟ್ಟಕ್ಕೆ ಬರಬೇಕಾಗಿದ್ದ ಶಿವಮಾರ ರಾಷ್ಟ್ರಕೂಟ ಕಾರಾಗೃಹದಲ್ಲಿ ಬಂದಿಯಾಗಿದ್ದ. ಗೋವಿಂದ ರಣಾವಲೋಕನನ್ನು ಸದೆಬಡಿಯುವುದಕ್ಕೆ ಅನುಕೂಲವಾಗಲೆಂದು ಶಿವಮಾರನನ್ನು ಬಿಡುಗಡೆಮಾಡಿ ಅವನ ರಾಜ್ಯಕ್ಕೆ ಕಳುಹಿಸಿಕೊಟ್ಟ. ಆದರೆ ಶಿವಮಾರ ರಣಾವಲೋಕ ಸ್ತಂಭನ ಪಕ್ಷಕ್ಕೆ ಸೇರಿಕೊಂಡ. ಗೋವಿಂದ ಸ್ತಂಭನ ದಂಗೆಯನ್ನಡಗಿಸಲು ನಿರತನಾದ. ಸ್ತಂಭನಿಗೆ ಮಿತ್ರರಾಜರಿಂದ ಸಹಾಯ ಬರುವುದಕ್ಕೆ ಮೊದಲೇ ಅವನನ್ನು ಸೆರೆಹಿಡಿದ. ಆದರೆ ಅವನ ತಪ್ಪನ್ನು ಕ್ಷಮಿಸಿ ಪುನಃ ಗಂಗವಾಡಿಯ ಮಾಂಡಲಿಕನನ್ನಾಗಿ ನೇಮಿಸಿದ. ಶಿವಮಾರನನ್ನು ಪುನಃ ಕಾರಾಗೃಹಕ್ಕೆ ತಳ್ಳಿದ. ಅನಂತರ ಗೋವಿಂದ ಕಂಚಿಯ ದಂತಿಗನ ಮೇಲೆ ದಂಡೆತ್ತಿಹೋಗಿ ಅವನನ್ನು ಸೋಲಿಸಿದ; ನೊಳಂಬವಾಡಿಯ ಚಾರುಪೊನ್ನೇರ ಶರಣಾಗತನಾದ. 796ರ ಹೊತ್ತಿಗೆ ಗೋವಿಂದ ಇವೆಲ್ಲ ದಿಗ್ವಿಜಯಗಳನ್ನು ನಿರ್ವಹಿಸಿ ದಕ್ಷಿಣಾಪಥದ ಏಕೈಕ ಪ್ರಭುವಾದ.
ಅಮೋಘವರ್ಷ ನೃಪತುಂಗ
ಅಮೋಘವರ್ಷ ಒಬ್ಬ ನಿಪುಣ ಕವಿ ಮತ್ತು ವಿದ್ವಾಂಸ. ಅವರು ಕವಿರಾಜಮಾರ್ಗವನ್ನು ಬರೆದರು (ಅಥವಾ ಸಹ-ಲೇಖಕರು) ಕನ್ನಡದಲ್ಲಿ ಅತ್ಯಂತ ಪ್ರಾಚೀನ ಸಾಹಿತ್ಯ ಕೃತಿ , ಮತ್ತು ಸಂಸ್ಕೃತದಲ್ಲಿ ಧಾರ್ಮಿಕ ಕೃತಿಯಾದ ಪ್ರಶ್ನೋತ್ತರ ರತ್ನಮಾಲಿಕಾ . ಅವರ ಆಳ್ವಿಕೆಯಲ್ಲಿ ಅವರು ನೃಪತುಂಗ , ಅತಿಶಾಧವಲ , ವೀರನಾರಾಯಣ , ರಟ್ಟಮಾರ್ತಾಂಡ ಮತ್ತು ಶ್ರೀವಲ್ಲಭ ಮುಂತಾದ ಬಿರುದುಗಳನ್ನು ಹೊಂದಿದ್ದರು . ಅವರು ರಾಷ್ಟ್ರಕೂಟರ ಆಳ್ವಿಕೆಯ ರಾಜಧಾನಿಯನ್ನು ಇಂದಿನ ಬೀದರ್ ಜಿಲ್ಲೆಯ ಮಯೂರಖಂಡಿಯಿಂದ ಆಧುನಿಕ ಕರ್ನಾಟಕ ರಾಜ್ಯದಲ್ಲಿ ಇಂದಿನ ಕಲಬುರಗಿ ಜಿಲ್ಲೆಯ ಮಾನ್ಯಖೇಟಕ್ಕೆ ಸ್ಥಳಾಂತರಿಸಿದರು . ಅವನು ಸಾಮ್ರಾಜ್ಯಶಾಹಿ ರಾಜಧಾನಿಯನ್ನು "ಭಗವಾನ್ ಇಂದ್ರನಿಗೆ ಹೊಂದಿಸಲು " ನಿರ್ಮಿಸಿದನೆಂದು ಹೇಳಲಾಗುತ್ತದೆ . ರಾಜಮನೆತನದವರಿಗೆ ಅತ್ಯುತ್ತಮವಾದ ಕೆಲಸಗಾರಿಕೆಯನ್ನು ಬಳಸಿಕೊಂಡು ವಿಸ್ತೃತ ವಿನ್ಯಾಸದ ಕಟ್ಟಡಗಳನ್ನು ಸೇರಿಸಲು ರಾಜಧಾನಿಯನ್ನು ಯೋಜಿಸಲಾಗಿತ್ತು.
ಅರಬ್ ಪ್ರವಾಸಿ ಸುಲೈಮಾನ್ ಅಮೋಘವರ್ಷವನ್ನು "ಜಗತ್ತಿನ ನಾಲ್ಕು ಮಹಾನ್ ರಾಜರು" ಎಂದು ಬಣ್ಣಿಸಿದ್ದಾರೆ. ಅವರ ಧಾರ್ವಿುಕ ಮನೋಧರ್ಮ, ಲಲಿತಕಲೆಗಳು ಮತ್ತು ಸಾಹಿತ್ಯದಲ್ಲಿ ಅವರ ಆಸಕ್ತಿ ಮತ್ತು ಅವರ ಶಾಂತಿ-ಪ್ರೀತಿಯ ಸ್ವಭಾವಕ್ಕಾಗಿ, ಇತಿಹಾಸಕಾರ ಪಂಚಮುಖಿ ಅವರನ್ನು ಚಕ್ರವರ್ತಿ ಅಶೋಕನಿಗೆ ಹೋಲಿಸಿ ಅವರಿಗೆ "ದಕ್ಷಿಣದ ಅಶೋಕ" ಗೌರವವನ್ನು ನೀಡಿದ್ದಾರೆ. ಕವಿರಾಜಮಾರ್ಗ ಪಠ್ಯದಲ್ಲಿ ಸಾಕ್ಷಿಯಾಗಿರುವಂತೆ ಅಮೋಘವರ್ಷವು ಕನ್ನಡ ಜನರ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಅತ್ಯುನ್ನತವಾದ ಅಭಿಮಾನವನ್ನು ತೋರುತ್ತಿದೆ .
ಮೊದಲನೇ ಅಮೋಘವರ್ಷ | |
---|---|
ಕುಮ್ಸಿಯ ವೀರಭದ್ರ ದೇವಸ್ಥಾನದಲ್ಲಿ ರಾಷ್ಟ್ರಕೂಟ ರಾಜ ಅಮೋಘವರ್ಷ I ರ ಹಳೆಯ ಕನ್ನಡ ಶಾಸನ (ಕ್ರಿ.ಶ. 876) | |
6ನೇ ರಾಷ್ಟ್ರಕೂಟ ಚಕ್ರವರ್ತಿ | |
ಆಳ್ವಿಕೆ | ಸಿ. 814 - ಸಿ. 878 CE (64 ವರ್ಷಗಳು) |
ಪೂರ್ವಾಧಿಕಾರಿ | ಗೋವಿಂದ III |
ಉತ್ತರಾಧಿಕಾರಿ | ಕೃಷ್ಣ II |
ತಂದೆ | ಗೋವಿಂದ III |
ಜನನ | 800 CE |
ಮರಣ | 878 CE |
ಧರ್ಮ | ಜೈನ ಧರ್ಮ [ 1 ] |
ಆರನೇ ವಿಕ್ರಮಾದಿತ್ಯನು ಕಲ್ಯಾಣಿ ಚಾಲುಕ್ಯ ರಾಜವಂಶದ ಪ್ರಖ್ಯಾತ ಮತ್ತು ಪರಾಕ್ರಮಿ ದೊರೆ. ಇವನು ತನ್ನ ಅವಧಿಯಲ್ಲಿ ಶಾಲಿವಾಹನ ಶಕೆಯನ್ನು ರದ್ದು ಮಾಡಿ ತನ್ನದೇ ಆದ ವಿಕ್ರಮ ಶಕೆಯನ್ನು ಆರಂಭಿಸುತ್ತಾನೆ. ಇದು ಚಾಲುಕ್ಯ-ವಿಕ್ರಮ ಶಕೆ ಎಂದು ಪ್ರತೀತಿ ಪಡೆಯಿತು. ಇವನ ಆಳ್ವಿಕೆಯ ಕಾಲ ಕ್ರಿ.ಶ.೧೦೭೬-೧೧೨೬. ಈ ೫೦ ವರುಷಗಳು ಇಡಿಯ ಕಲ್ಯಾಣಿ ಚಾಲುಕ್ಯರ ವಂಶಾವಳಿಯಲ್ಲಿ ಅತ್ಯಂತ ಧೀರ್ಘ ಆಳ್ವಿಕೆ. ಈ ೬ನೇ ವಿಕ್ರಮಾದಿತ್ಯನು ತ್ರಿಭುವನಮಲ್ಲನೆಂದು ಬಿರುದಾಂಕಿತನಾಗಿದ್ದನು. ವಿಜಯನಗರ ಸಾಮ್ರಾಜ್ಯದ ಪೂರ್ವಕಾಲದಲ್ಲಿ ದೊರೆತ ಅತಿ ಹೆಚ್ಚು ಶಾಸನಗಳನ್ನು ಇವನ ಆಳ್ವಿಕೆಯಲ್ಲಿ ಬರೆಸಲ್ಪಟ್ಟಿವೆ.[೧]
ವಿಕ್ರಮಾದಿತ್ಯ ೬ | |
---|---|
ಕೈಠಭೇಶ್ವರ ದೇಗುಲ, ಕುಬತೂರು(ಕ್ರಿಶ.೧೧೧೦) | |
ಕಲ್ಯಾಣಿ ಚಾಲುಕ್ಯ ಅರಸ | |
ಆಳ್ವಿಕೆ | ಕ್ರಿ.ಶ.೧೦೭೬ -೧೧೨೬(೫೦ ವರ್ಷಗಳು) |
ಪೂರ್ವಾಧಿಕಾರಿ | ಸೋಮೇಶ್ವರ ೨ |
ಉತ್ತರಾಧಿಕಾರಿ | ಸೋಮೇಶ್ವರ ೩ |
ಗಂಡ/ಹೆಂಡತಿ | ಚಂದಳಾ ದೇವಿ ಕೇತಲಾ ದೇವಿ ಸವಳಾ ದೇವಿ |
ಸಂತಾನ | |
ಸೋಮೇಶ್ವರ ೩ | |
ಮನೆತನ | ಕಲ್ಯಾಣಿ ಚಾಲುಕ್ಯ |
ತಂದೆ | ಸೋಮೇಶ್ವರ ೧ |
ಮರಣ | ಕ್ರಿ.ಶ.೧೧೨೬ |
ಈ ದೊರೆ ವಿಕ್ರಮಾದಿತ್ಯನು ಕಲೆ ಮತ್ತು ಸಂಸ್ಕೃತಿಯ ಪೋಷಣೆಗೆ ಗಮನಾರ್ಹನು.ಇವನ ಆಸ್ಥಾನ ಕನ್ನಡ ಮತ್ತು ಸಂಸ್ಕೃತ ಕವಿ, ಪಂಡಿತರಿಂದ ವಿಜೃಂಭಿಸುತ್ತಿತ್ತು.
ವಿಷ್ಣುವರ್ಧನ
ಸಾಮ್ರಾಜ್ಯದ ಅತ್ಯಂತ ಪ್ರಸಿದ್ಧ ಅರಸು ಬಿಟ್ಟಿಗ, ಈತನ ನಂತರದ ಹೆಸರು ವಿಷ್ಣುವರ್ಧನ (ಆಡಳಿತ: ಸು ೧೧೧೦-೧೧೪೨). ವಿಷ್ಣುವರ್ಧನನ ಆಡಳಿತದ ಕಾಲದಲ್ಲಿ ಹೊಯ್ಸಳ ಸಾಮ್ರಾಜ್ಯ ಇಂದಿನ ಕರ್ನಾಟಕ ರಾಜ್ಯದ ಬಲಿಷ್ಠ ಸಾಮ್ರಾಜ್ಯವಾದದ್ದಲ್ಲದೆ ಪಕ್ಕದ ರಾಜ್ಯಗಳಲ್ಲಿಯೂ ವಿಸ್ತರಿಸಿತು. ವಿಷ್ಣುವರ್ಧನನ ಕಾಲದಲ್ಲಿ ಕಲೆ ಮತ್ತು ಶಿಲ್ಪಕಲೆಗೆ ಬಹಳ ಪ್ರೋತ್ಸಾಹ ನೀಡಲಾಯಿತು. ಈತನ ಪತ್ನಿ ಮತ್ತು ಹೊಯ್ಸಳ ರಾಣಿ ಶಾಂತಲೆ ಪ್ರಸಿದ್ಧ ಭರತನಾಟ್ಯ ನರ್ತಕಿ ಮತ್ತು ಶಿಲ್ಪಕಲೆಯಲ್ಲಿ ಆಸಕ್ತಿಯಿದ್ದವಳೆಂದು ಹೆಸರಾಗಿದ್ದಾಳೆ. ಈ ಕಾಲದಲ್ಲಿಯೇ ಹೊಯ್ಸಳ ಶಿಲ್ಪಕಲೆಯ ಅತ್ಯುನ್ನತ ಉದಾಹರಣೆಗಳು ಮೂಡಿಬಂದವು. ಹಳೆಬೀಡಿನ ಹೊಯ್ಸಳೇಶ್ವರ ದೇವಾಲಯವನ್ನು ಕಟ್ಟಲು ೮೬ ವರ್ಷಗಳು ಬೇಕಾದವು! ಹಾಗೆಯೇ ಬೇಲೂರಿನ ಚೆನ್ನಕೇಶವ ದೇವಸ್ಥಾನಬೇಲೂರಿನ ಚೆನ್ನಕೇಶವ ದೇವಸ್ಥಾನ ೧೦೩ ವರ್ಷಗಳ ಪರಿಶ್ರಮದ ಫಲ.
ಕೃಷ್ಣದೇವರಾಯ
ಕೃಷ್ಣದೇವರಾಯ ಕ್ರಿ.ಶ.೧೫೦೯ ರಿಂದ ೧೫೨೯ ರ ವರೆಗೆ ಆಳಿದ ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಮತ್ತು ವಿಜಯನಗರದ ಅರಸರಲ್ಲಿ ಅತಿ ಪ್ರಮುಖನು. ತುಳುವ ರಾಜವಂಶದ ಮೂರನೆಯ ಅರಸ[೨]. ವಿಜಯನಗರ ಸಾಮ್ರಾಜ್ಯ ಈತನ ಆಳ್ವಿಕೆಯ ಕಾಲದಲ್ಲಿ ಉಚ್ಛ್ರಾಯಕ್ಕೇರಿತು.ಕನ್ನಡ ನಾಡಿನಲ್ಲಿ "ಮೂರುರಾಯರಗಂಡ", "ಕನ್ನಡರಾಜ್ಯ ರಮಾರಮಣ" ಎಂದೂ, ಆಂಧ್ರದಲ್ಲಿ "ಆಂಧ್ರಭೋಜ" ಎಂದೂ, ಸ್ವತಃ ಉತ್ತಮ ಬರಹಗಾರನಾಗಿದ್ದ ಕೃಷ್ಣದೇವರಾಯನು ಸಮಕಾಲೀನ ಕವಿಗಳಿಂದ "ಉರುಕಳ್ ವೈಭವ ನಿವಾಹ ನಿಧಾನ" ಎಂದೂ ಬಿರುದಾಂಕಿತನಾದ ಈತನ ಕಾಲದ ವೈಭವ ಇಂದೂ ಮನೆಮಾತಾಗಿದೆ.
Sri Krishnadevaraya/ ಶ್ರೀ ಕೃಷ್ಣದೇವರಾಯ | |
---|---|
ವಿಜಯನಗರ ಸಾಮ್ರಾಟ | |
ರಾಜ್ಯಭಾರ | ೨೬ ಜುಲೈ ೧೫೦೯ - ೧೫೨೯[೧] |
ಜನನ | ೧೬ ಫೆಬ್ರುವರಿ ೧೪೭೧ |
ಜನ್ಮ ಸ್ಥಳ | ಹಂಪಿ, ಕರ್ನಾಟಕ |
ಮರಣ | ೧೫೨೯ ಅಕ್ಟೋಬರ್ ೧೭ |
ಸಮಾಧಿ ಸ್ಥಳ | ಹಂಪಿ, ಕರ್ನಾಟಕ |
ಪೂರ್ವಾಧಿಕಾರಿ | ವೀರ ನರಸಿಂಹರಾಯ |
ಉತ್ತರಾಧಿಕಾರಿ | ಅಚ್ಯುತ ದೇವರಾಯ |
ಪಟ್ಟದರಸಿ | ಚಿನ್ನಾ ದೇವಿ, ತಿರುಮಲಾ ದೇವಿ, ಅನ್ನಪೂರ್ಣಾ ದೇವಿ |
ವಂಶ | ತುಳುವ ವಂಶ |
ತಂದೆ | ತುಳುವ ನರಸ ನಾಯಕ |
ಧಾರ್ಮಿಕ ನಂಬಿಕೆಗಳು | ಹಿಂದೂ |
ಚಿಕ್ಕದೇವರಾಜ ಒಡೆಯರ್
ದೇವರಾಜ ಒಡೆಯರ್ II (೨೨ ಸೆಪ್ಟೆಂಬರ್ ೧೬೪೫ - ನವೆಂಬರ್ ೧೭೦೪) ೧೬೭೩ ರಿಂದ ೧೭೦೪ ರವರೆಗೆ ಮೈಸೂರು ಸಾಮ್ರಾಜ್ಯದ ಹದಿನಾಲ್ಕನೆಯ ಮಹಾರಾಜರಾಗಿದ್ದರು . ಈ ಸಮಯದಲ್ಲಿ, ಮೈಸೂರು ತನ್ನ ಪೂರ್ವಜರ ನಂತರ ಮತ್ತಷ್ಟು ಗಮನಾರ್ಹ ವಿಸ್ತರಣೆಯನ್ನು ಕಂಡಿತು. ಅವರ ಆಳ್ವಿಕೆಯಲ್ಲಿ, ಕೇಂದ್ರೀಕೃತ ಮಿಲಿಟರಿ ಶಕ್ತಿಯು ಈ ಪ್ರದೇಶಕ್ಕೆ ಅಭೂತಪೂರ್ವ ಮಟ್ಟಕ್ಕೆ ಹೆಚ್ಚಾಯಿತು.
ಈ ಎಲ್ಲಾ ಮಾಹಿತಿಯನ್ನು ವಿಕಿಪೀಡಿಯದಿಂದ ನೇರವಾಗಿ ಪಡೆಯಲಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ