ನುಡಿಸು ತಾಯೆ
ಲಿಪಿಮನದಿ ತನಿ ದನಿಯಈ ಕಾಯವ ನಾ ಅರ್ಪಿತ ತಾಯಿ
ಪದಪುಂಜವೇ ನಾ ಪುಷ್ಪಾರ್ಪಿತ ತಾಯಿ
ಸಾಲು ಸಂಗಮದೊಳು ಎನ್ನ
ನಿರತೆ ನಿರ್ಮಲದಿ ರಂಜಿಸು ತಾಯಿ
ಆತ್ಮದ ಪದ ತಂತಿಯ ನಾದದಲಿ
ಸರ್ವಮನ ಮಿಡಿತದಲಿ ಎನ್ನ ನುಡಿಸು ತಾಯಿ
ಸಹೃದಯಗಳ ನಂದಾನಂದದ
ಅಂತರಾಳದ ಬೆಳಕ ನಂದಿಸದಿರು ತಾಯಿ
ಕರಕೂಡಿಸಿ ಲಿಪಿಯಾರಿಸಿ ನಿನ್ನಲಿ
ಮೊರೆಯಿಡುತ ಬರೆವೆ ರಕ್ಷಿಸು ತಾಯಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ