ಉದ್ಯೋಗ ಅರಸಿ ಹೊರಟ ಅಂದನಿಗೆ ರಸ್ತೆಯಲ್ಲಿ ಬರುವಾಗ ಚಿಕ್ಕ ಅಪಘಾತವಾಯಿತು. ಬಹಳ ನೊಂದನು. ಬಡತನವಿದ್ದಾಗಲೇ ಇಂತಹ ಕಷ್ಟಬರಬೇಕಾ ಎಂದು ಆಸ್ಪತ್ರೆ ಸೇರಿದನು. ಆ ದಿನ ಆಸ್ಪತ್ರೆಯಲ್ಲಿ ಎಲ್ಲರೂ ಒತ್ತಡದಲ್ಲಿಯೇ ಓಡಾಡುತ್ತಿದ್ದರು. ಹಾಸಿಗೆಯಲ್ಲಿಯೇ ಗಮನಿಸಿದ ಅಂದನು ನರ್ಸ್ ಅವರನ್ನು ವಿಚಾರಿಸಿದನು. ಸಾಫ್ಟ್ವೇರ್ ಸಮಸ್ಯೆಯಿಂದ ಯಾವ ಕೆಲಸಗಳು ಆಗುತ್ತಿಲ್ಲ. ಇಂಜಕ್ಷನ್ ಇಂದ ಅಪರೇಶನ್ ವರೆಗೂ ಇಡೀ ಆಸ್ಪತ್ರೆಯೇ ತಂತ್ರಜ್ಞಾನದಿಂದ ಕೂಡಿದೆ ಎಂದು ನೊಂದರು. ನಾನು ಸಾಪ್ಟ್ವೇರ್ ತಜ್ಞ, ಒಂದು ಅವಕಾಶ ಕೊಡಿ ಸರಿಪಡಿಸಲು ಪ್ರಯತ್ನಿಸುತ್ತೇನೆ ಎಂದನು. ನರ್ಸ್ ಆಶ್ಚರ್ಯ ಪಟ್ಟರಾದರೂ ನಂಬಿದರು. ಕ್ಷಣಾರ್ಧದಲ್ಲಿಯೇ ವೈದ್ಯರಿಗೆ ತಿಳಿಸಿದರು. ವ್ಯವಸ್ಥೆಮಾಡಲಾಯಿತು. ಹತ್ತು ನಿಮಿಷ ನೋವನ್ನು ಮರೆತು ವೆಬ್ ಲೋಕದಲ್ಲಿ ಮುಳುಗಿದನು, ಎಲ್ಲವೂ ಸರಿಹೋಯಿತು. ವೈದ್ಯರ ತಂಡಕ್ಕೆ ಬಹಳ ಆನಂದವಾಯಿತು. ಉಡುಗೊರೆಯಾಗಿ ಉಚಿತ ಚಿಕಿತ್ಸೆ ನೀಡುತ್ತೇವೆ ಎಂದರು. ಅಂದನು ನಿಧಾನವಾಗಿ ಹೇಳಿದನು ಉಚಿತವೆಂಬುದು ಬೇಡ, ಉದ್ಯೋಗ ನೀಡಿ ಎಂದನು. ಆ ಕ್ಷಣದಲ್ಲಿಯೇ ಒಂದು ಸಭೆ ನಡೆಸಿ ತೀರ್ಮಾನಿಸಿ, ಲಕ್ಷಕ್ಕೂ ಅಧಿಕ ಸಂಬಳದ ಇಂಜಿನಿಯರ್ ಪದವಿ ನೀಡಿದರು.
ಆಸೆಯೇ ದುಃಖಕ್ಕೆ ಮೂಲವೆಂದನು ಬುದ್ಧ. ನಂಬಿಕೆಯೇ ದುಃಖ ನಿವಾರಕನೆಂದ ಅಂದ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ