ಮೆಟ್ರೋ ಕಥನ - ೪೫
ಆಕೆಗೆ ಅವನ ಪರಿಚಯವಿರಲಿಲ್ಲ. ಹೇಳಿದ್ದನ್ನೆಲ್ಲಾ ನಂಬಿದಳು. ಮದುವೆಗೂ ಒಪ್ಪಿದಳು. ಆರಂಭವು ಕವಿತೆಯಂತೆ ಲಯಬದ್ದ ಗೀತೆ, ಬದುಕು ಮುಂದುವರೆದಂತೆ ಕಥೆಯಾಗುತ್ತಾ ಹಿತವೆನಿಸಿತು. ನೆನಪಿಸಿಕೊಂಡಷ್ಟೂ ಅದೇಕೋ ಇತ್ತಿಚೆಗೆ ಕಾದಂಬರಿಯಂತೆ ಸುದೀರ್ಘ, ಕುತೂಹಲ. ಈಗ ಅವಳು ಮೋಸವನ್ನೂ ಅರಿತಿದ್ದಾಳೆ, ಸುಳ್ಳನ್ನು ನಂಬಿ, ನಂಬಿಸುತ್ತಾಳೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ