ಮೆಟ್ರೊ ಕಥನ - ೮೫
ಅರೆಕಾಲಿಕ ಉದ್ಯೊಗಿ ಹೆಂಗಸು ಖುಷಿಯಿಂದ ಬಂದಳು. ಏನಮ್ಮ ಇಷ್ಟು ಖುಷಿಯಾಗಿದ್ದೀಯಾ ಎಂದಾಗ ಏನಿಲ್ಲ ಸಾ.. ನಿಜವಾಗಿಯೂ ಇವತ್ತಿಂದ ಬಸ್ ಚಾರ್ಜ್ ತೆಗೆದುಕೊಳ್ಳಲಿಲ್ಲ. ಬರೋ ಸಂಬಳದಲ್ಲಿ ಸಾವಿರದೈನೂರು ಚಾರ್ಜೆ ಆಗ್ತಿತ್ತು. ಇನ್ಮೆಲೆ ಇದನ್ನಾದರೂ ಉಳಿಸಬಹುದು ಎಂದಳು. ಈಕೆ ಖುಷಿಯಲ್ಲಿ ಯಾವ ಸರ್ಕಾರ, ಯಾವ ಮಂತ್ರಿ ಏನೂ ಮುಖ್ಯವಾಗದೆ ತನ್ನ ಬಡತನವಷ್ಟೆ ಮಾತಾಡಿಸುತ್ತಿತ್ತು.
- ಅಂಕುರ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ