ಮೆಟ್ರೋ ಕಥನ - ೭೩
ಅವಳು ಸಿಗರೇಟು ಸೇದುತ್ತಿದ್ದಾಳೆ, ಅವಳ ಅಣ್ಣ ಹೊಸ ಬೈಕು ಕೊಂಡನು. ಅಪ್ಪನ ಹಳೆಯ ಬಜಾಜ್ ರಿಪೇರಿ ಬಂದರೂ ಓಡಿಸುತ್ತಿದ್ದಾರೆ. ಅಮ್ಮ ದೂರದರ್ಶನದಲ್ಲೇ ಮುಳುಗಿದ್ದಾರೆ. ಆದರೆ ಮನೆಯ ಎದುರೇ ಇರುವ ಹಳೆಯ ಶಾಲೆಯಲ್ಲಿ ಇಂದು ಪರಿಸರ ದಿನಾಚರಣೆ ಕಾರ್ಯಕ್ರಮ. ಮಕ್ಕಳು ಸಡಗರದಿಂದ ಹೂ ಕಿತ್ತು ಕಟ್ಟಿ ಮುಡಿದ್ದಾರೆ. ಮೇಷ್ಟ್ರು ಗೂಗಲ್ ನಲ್ಲಿ ಸುಲಭವಾಗಿ ಸಿಕ್ಕ ಸಾಲುಮರದ ತಿಮ್ಮಕ್ಕನ ಚಿತ್ರ ಮುದ್ರಿಸಿ ಆದರ್ಶವಾಗಿ ಇಟ್ಟು, ತಿಮ್ಮಕ್ಕನ ಸಾಹಸಗಳನ್ನು ಹೇಳುತ್ತಿದ್ದಾರೆ. ಲೆಕ್ಕಕ್ಕೆ ಎಲ್ಲೆಲ್ಲೂ ಒಂದೊಂದು ಗಿಡ ನೆಡುವಂತೆ ನೆಡುತ್ತಿದ್ದಾರೆ. ವಾರದ ನಂತರ ಆ ಗಿಡಗಳು ಅನಾಥವಾಗಲು ಸಿದ್ಧವಾಗಿವೆ.
ಇಲ್ಲಿಗೆ ಪರಿಸರ ದಿನಾಚರಣೆ ಮುಗಿಯಿತು.
- ಅಂಕುರ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ