ಈ ಬ್ಲಾಗ್ ಅನ್ನು ಹುಡುಕಿ

ಭಾನುವಾರ, ಆಗಸ್ಟ್ 13, 2017

ಓ ಪಾರಿಜಾತ

ಓ ಪಾರಿಜಾತ...



ಸೂರ್ಯನಿಲ್ಲದ ವೇಳೆ
ಕೃಷ್ಣ ತಂದನು ಹೂ
ಪಾರಿಜಾತ ಇವಳು ಭಗ್ನಪ್ರೇಮಿ!
ಸತ್ಯಭಾಮೆಯ ಮನೆಯ
ಅಂಗಳವು ಇನ್ನು ವಿರಹ ಕಾಂತಿಯ
ಕಥೆಗೆ ಕೃಷ್ಣಲೀಲೆ!


ಕೇಸರಿಯ ಕಾಂಡದಲಿ
ಬಿಳಿಯ ಚಂದನಲೀಲೆ
ಪರಿಮಳಕೆ ಪ್ರೇಮವು
ರಾತ್ರಿ ರೂಪ
ಬುದ್ಧನ ಸ್ತೂಪದಲೂ
ನಿನ್ನ ಹಾಸಿದ ಅರಿವೆ
ಶಾಂತಿಯಲಿ ಬಂದ ಪ್ರೇಮ ಬಾಲೆ!
ಕ್ಷೀರಸಾಗರದಲ್ಲಿ
ಮಥನದ ಯುದ್ಧಗಳು

ದೇವತೆಗೂ ರಾಕ್ಷಸರ ಪಾಠವಾಯ್ತು.


ಸುರಭಿ, ವಾರಿಣಿಯ ಗೆಳತಿ
ಸುಂದರ ಮಧುಕನ್ಯೆ
ಬಂದಳು ಪ್ರೇಮದಲಿ ಪಾರಿಜಾತ
ಇಂದ್ರನ ಮೋಹದಲಿ
ವಿಷ್ಣುವಿನ ದಾಹದಲಿ
ಪ್ರೇಮ ಮಂದಿರ ವೃಕ್ಷ
ನಿನ್ನ ಜನ್ಮ ಲೀಲೆ!


ಭರತ ಭೂಮಿಯ ಮಗಳೆ
ಕೋಮಲಾಂಗಿಯ ಕನ್ಯೆ
ಪಂಪನ ಕಾವ್ಯಕೂ ಕೈಪಿಡಿಯ
ವರ್ಣನೆ ಓ ಕಬ್ಬಿಗನ ಮಗಳೇ
ಪ್ರಕೃತಿಗೆ ನಿನ್ನ ಸುಗಂಧ ಲೀಲೆ!

2 ಕಾಮೆಂಟ್‌ಗಳು:

Anitha anukruthi ಹೇಳಿದರು...

ವಿಚಾರಪೂರ್ಣವಾಗಿದೆ.ಕಾವ್ಯಸತ್ವದಲ್ಲಿ ಪಾರಿಜಾತ ಪರಿಮಳವಿದೆ.

Unknown ಹೇಳಿದರು...

ಪಾರಿಜಾತದ ಸುಗಂಧದೊಂದಿಗೆ ಕೃಷ್ಣನ ಪ್ರೇಮದಲಿ ಅವಳ‌ ಸೊಬಗು ಸುಂದರ ಅಂಕುರ