ನವರಂಗದೊಳಗೆ ನಾಟ್ಯರೂಪ
ದಸರಾ ವಿಚಾರವಲ್ಲ. ನವರಾತ್ರಿ ಎಂದರೆ ಈಗ ಎಲ್ಲಾ ಕಡೆಯೂ ನವರಾತ್ರಿ ಹೆಸರಿನಲಿ ಮನೆಯಿಂದ ಬೀದಿಯೊಳಗೂ ಸಂಭ್ರಮವಾಗಿರುವ ನವರಾತ್ರಿ ವಿಚಾರ ಎಲ್ಲರಿಗೂ ತಿಳಿದ ವಿಚಾರ.
ಸಾವಿರ ಕಂಬಗಳ ಬಸದಿ ಎಂಬುದೇ ಭಾರತದಲ್ಲಿ ಪ್ರಸಿದ್ಧ ಸ್ಥಳ. ಇದು ಜೈನರ ಕಾಶಿ. ಕರ್ನಾಟಕದ ದಕ್ಷಿಣ ಕನ್ನಡದೊಳಗೆ ಮೂಡಿರುವ ಕರಾವಳಿಯ ಚಂದ್ರನಾಥ ಬಸದಿ ಇದು. ಈ ಬಸದಿಯಲ್ಲಿನ ಮಾಹಿತಿ ಎಲ್ಲಾ ಕಡೆಯೂ ಲಭ್ಯ ಇರುವ ಕಾರಣ ಇದರ ಮಾಹಿತಿಯೂ ಸೂಕ್ತವಲ್ಲ. ನವರಂಗ ಎಂದರೆ ಹಲವು ವಿಚಾರಗಳಿಗೆ ಮುಖ್ಯ ವೇದಿಕೆ. ದೇಗುಲಗಳ, ಬಸದಿಗಳ ಮುಂಭಾಗದ ನಡುವಣ ಇರುವ ಪ್ರಾಂಗಣ ಕೆಲವು ವಿಶೇಷತೆಯನ್ನು ಹೊಂದಿದೆ. ಇದು ಪ್ರಾಚೀನತಮ ಮುಖ್ಯ ಭೂಮಿಕೆಯನ್ನು ಅನಾವರಣಗೊಳಿಸುತ್ತಾ ಬಂದಿದೆ. ಪ್ರತಿಭೆಗಳ ಮೊದಲ ಪ್ರದರ್ಶನ ಇಲ್ಲಿಯೇ ಅನಾವರಣವಾಗಬೇಕಾಗಿತ್ತು. ದೇವರ ಮುಂಭಾಗದ ಈ ಪ್ರದರ್ಶನ ತುಂಬಾ ಭಕ್ತಿಯಿಂದ ಜರುಗುತ್ತಿತ್ತು.
ವಿಶ್ವ ಪ್ರವಾಸಿ ದಿನದ ಪ್ರಯುಕ್ತ ಸಾವಿರ ಕಂಬದ ಬಸದಿಯೊಳಗೆ ಸಾಂಸ್ಕೃತಿಕ ವೈಭವ ಸಾರುವ ಭಕ್ತಿ ಹಾಗೂ ಭಾವನಾತ್ಮಕ ಜಗತ್ತಿನ ಅನಾವರಣಕ್ಕೆ ವೇದಿಕೆ ಸಜ್ಜುಗೊಳಿಸಲಾಯಿತು. ಆದರೆ ಮಳೆಯ ಹೊಸ ಅರ್ಥ ನಾಡಿಗೆ ಬರೆದಾಗ ಕರಾವಳಿಯಲ್ಲಿ ಸುಮ್ಮನಿರುವುದೇ.. ಆದರೂ ಮೋಹನ ಆಳ್ವರು ಬದ್ಧತೆಗೆ ಪ್ರಮಾಣಿಕರು. ಮಕ್ಕಳು, ಒಂದಿಷ್ಟು ಕಲಾಸಕ್ತರು, ಚಾರುಕೀರ್ತಿಗಳು ಎಲ್ಲಾ ಬಂದರು. ೮೦ಅಡಿಗಳಲಿ ರಾಮಕಥೆ, ಮಣಿಪುರದ ದೋಲ್ಚಲಮ್, ಶ್ರೀಲಂಕಾ ಡೋಲಿನ ವೈಭವ ಇವೆಲ್ಲಾ ಮೈಚಳಿ ಮರೆತು ಕುಣಿಯುವ ನರ್ತಿಸುವ ವೈಭವಗಳು.
೨೦ಅಡಿಯೊಳಗಿನ ನವರಂಗಕೆ ಹೊಂದಿಸಿದರೆ ಏನಾಗಬಹುದು. ದೊಡ್ಡ ವೇದಿಕೆ ನಿರ್ಮಿಸಿದ ಬೆವರಲ್ಲಿ ಮಳೆಯ ಮಂದಿರವಾಯಿತು. ವೇದಿಕೆಯನ್ನು ರಂಗುಗೊಳಿಸಬೇಕಾದ ಬೆಳಕುಗಳು ನವರಂಗಕೆ ಬಂದವು. ಸದಾ ಮೌನವಾಗಿದ್ದ ಸಾವಿರಾರು ಕಂಭಗಳಿಗೂ ಸಂಗೀತದ ಆಲಾಪನೆಯ ಭವ್ಯ ಸಂಸ್ಕಾರ. ನರ್ತಿಸುವ ವಿಧ್ಯಾರ್ಥಿಗಳಿಗೆ ನವರಂಗದ ಮೊದಲ ಕಲಾ ಸಂಸ್ಕಾರ.
https://kn.m.wikipedia.org/wiki/%E0%B2%B8%E0%B2%BE%E0%B2%B5%E0%B2%BF%E0%B2%B0_%E0%B2%95%E0%B2%82%E0%B2%AC%E0%B2%A6_%E0%B2%AC%E0%B2%B8%E0%B2%A6%E0%B2%BF
6 ಕಾಮೆಂಟ್‌ಗಳು:
Nice
ಲೇಖನ ಚೆನ್ನಾಗಿದೆ
ಮನವ ಮುದಗೊಳಿಸುವ ಲೇಖನ. ತುಂಬಾ ಚೆನ್ನಾಗಿದೆ.
ಮನವ ಮುದಗೊಳಿಸುವ ಲೇಖನ. ತುಂಬಾ ಚೆನ್ನಾಗಿದೆ.
superrr
ಉತ್ತಮವಾದ ಲೇಖನ. ಧನ್ಯವಾದಗಳು.
ಕಾಮೆಂಟ್ ಪೋಸ್ಟ್ ಮಾಡಿ