ಮೆಟ್ರೋ ಕಥನ - ೯೬
ಜಗತ್ತಿನ ಎಲ್ಲಾ ವಿಷಯಗಳನ್ನು ಸಂಗ್ರಹಿಸಿರುವ ಅಂತರ್ಜಾಲವನ್ನು ನಂಬಿ ವಿದ್ಯಾರ್ಥಿಗಳು ಖಾಲಿತಲೆಯಲ್ಲಿ ಗಿಣಿಪಾಠಗಳನ್ನು ಓದಿ, ಒಪ್ಪಿಸುತ್ತಿದ್ದರು. ಯಂತ್ರಗಳೇ ಮಾತಾಡುತ್ತಿದ್ದವು. ಮನುಷ್ಯ ಸೋಮಾರಿಯಾಗಿ, ಸುಖದ ಲೋಲುಪತೆಯನ್ನು ಅರಸುತ್ತಿದ್ದನು. ಒಂದು ದಿನ ಅಂತರ್ಜಾಲ ಬಳಕೆಯು ವಿನಾಶ ಹೊಂದಿದ ದುರಂತ ಕೇಳಿ, ಜಗತ್ತೇ ಹುಚ್ಚರ ಸಂತೆಯಾಯಿತು. ಎಲ್ಲಾ ಕೆಲಸಗಳು ನಿಂತವು. ಬೆವರಿನ ಭಾಷೆಯು ಉಸಿರಾಡಿತು. ಬುದ್ದಿಗೆ, ತೋಳಿಗೆ ಕೆಲಸ ಬಂದು ಮನುಷ್ಯನು ಜಗತ್ತನ್ನು ಮರೆತು ಗ್ರಾಮಸ್ವರಾಜ್ಯಕ್ಕೆ ಹೆಜ್ಜೆ ಹಾಕಿದನು.
- ಅಂಕುರ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ