ಕೈಬುಟ್ಟಿಯ ಕ ನಸುಗಳು
ವಿನಃ ನಾಯಕ
ವಿನಾಯಕನನ್ನು ದೇವರಿಗೆಲ್ಲಾ ಮೊದಲ ಪೂಜಿತನೆಂದುನೆಂದು ಧರ್ಮ ರೂಪಿಸಿಕೊಂಡಿದ್ದೇವೆ. ಅಂತೆಯೇ ವರ್ಷಕ್ಕೊಮ್ಮೆ ತಾಯಿ ಮಗನ ಪೂಜಿಸಿ ಹರ್ಷ ಪಡುತ್ತೇವೆ.ಅತ್ಯಂತ ಹೆಚ್ಚಾಗಿ ಸಮಾನ ಭಕ್ತಿ, ಶ್ರದ್ಧೆ ಪಡೆಯುವ ದೇವರು ವಿನಾಯಕನೇ ಇರಬೇಕು. ಆದರೇ ಕಡುಕಷ್ಟವಯ್ಯಾ ನಿನ್ನ ಆರಾಧನೆಯೆಂದು ಒಂದು, ಮೂರು, ಐದು, ಹನ್ನೊಂದು ಮತ್ತೆ ಊರಿನ ಭಕ್ತರು ಕಾಣಿಕೆ ಹೆಚ್ಚಿದಂತೆ ಬೆಸಸಂಖ್ಯೆಯ ದಿನದೂಡಿ ಸಂಭ್ರಮಿಸಿ, ಕೆಲವು ಕಡೆ ಆಟ, ಹಾಡು ಎಂದಾದರೆ ಮತ್ತೆ ಅದೇ ಮಹನೀಯರು ಸಿನಿಮಾ ಹಾಡಿಗೆ ಹುಚ್ಚರಂತೆ ಒನ್ಸಮೋರ್ ತೆಲುಗು ಅನ್ನುವ, ನಿದ್ರೆಯ ಪಾನಂಧತೆಯಲ್ಲೇ ನೀರಿನೊಳಗೆ ಗಣಪತಿ ಬಪ್ಪ ಮೋರಿ ಯಾ ಅನ್ನುವ ಭಕ್ತರ ಬೇಡಿದ್ದನೇ ಕೊಡುವ ಈ ವಿನಾಯಕ ವಿನಃ ನಾಯಕನೇ ಇರಬೇಕು. ಎ. ಎನ್ ಮೂರ್ತಿರಾವ್ ದೇವರು ಕೃತಿ ರಚಿಸಿದ್ದು ಸಾರ್ಥಕವೇ? ಅದನ್ನು ಓದಿ ಚೆಂದ ಈ ಚಂದ ಲೈಫ್ ಅನ್ನುಕೊಂಡವರ ಅವರವರ ವಿನಾಯಕನೇ ಕಾಪಡಬೇಕು.
ತಿಲಕ್ ಅವರಿಗೆ ಕಾಲಜ್ಞಾನ ತಿಳಿದಿದ್ದರೆ ಸ್ವಾತಂತ್ರ್ಯ ಸಂಘಟನೆಗೆ ಬೇರೆಯೇ ಯೋಚಿಸುತ್ತಿದ್ದರು ಅಲ್ಲವೇ!
ಗುರುಸಮಾಜ ಪರಿವರ್ತನ
ಸಂವಿಧಾನದ ಪೀಠಿಕೆಯಲ್ಲೇ ಜಾತ್ಯಾತೀತ ಘೋಷಿಸಿಕೊಂಡ ಸರ್ವಧರ್ಮ ಅಭಿವೃದ್ಧಿಶೀಲ ಭಾರತೀಯರು ನಾವು.
ಜಾತಿ ಕಾಲಂ ಇಲ್ಲದ ಯಾವುದಾದರೂ ಅಪ್ಲಿಕೇಷನ್ ಉಂಟೇ! ಜಾತಿ ಸಂಬಂಧ ಅನ್ನೋ ಕರಳು ಜೀವಾತ್ಮಕ ಒಗ್ಗಟ್ಟಿನ ಸಂಕೇತವಾಗಿ ಪರಂಪರೆಯಿಂದ ಬಂದಿರೊದು ಸಹಜ.
ಜಾತಿ ನಾಶವಾಯಿತು
ತೊಡುವ ವೇಷವಾಯಿತು
ಅನ್ನೋ ತರಾ ತರಗತಿ ಗುರುಗಳ ಬದುಕು ಕೂಡ. ಜಾತಿ ಧರ್ಮದ ಆಚೆ ನಿಂತು ಯೋಚಿಸೋ ಪಾಠಗಳನ್ನೇ ಭ್ರಮಾಪತಂಗಗಳಿಗೆ ರಸವತ್ತಾಗಿ ಉಣಬಡಿಸೊ ಗುರುಗಳು ‘ಎಸ್ಸಿ ಎಸ್ಟಿಯರೋ ಸ್ವಲ್ಪ ಎದ್ದು ನಿಲ್ರಪ್ಪಾ ನಿಮ್ಮ ಲಿಸ್ಟ್ ಬರಕೋಬೇಕು’ ಅನ್ನೋ ಜ್ಯಾತ್ಯತೀತತೆ ಗುರುವೃತ್ತಿ ಸಮೀಕ್ಷೆ ಫಾರಂ ಹೊತ್ತು ಮನೆ ಮನೆ ಅಲೆದು ಜಾತಿ ಆದಾಯ ಬರೆದು ಸುಸ್ತಾದವರ ಕಥೆಯನ್ನಾದರೂ ಪಠ್ಯ ಮಾಡಬಾರದೆ!
ಜಾತಿನೂ ಕೆಲವರಿಗೆ ಲಾಭ ಮಾಡೋದಾದ್ರೆ ಬಲಿ ಆಗೋ ಪ್ರಾಣಿ ಯಾವುದಾದ್ರೆನು.. ಅಲ್ಲವೇ!
ಆತ್ಮ -ಜ್ಞಾನ
ಆತ್ಮ ಎಂಬ ವಿಚಾರ ಒಂದು ಪಂಥಕ್ಕೆ ಅನ್ನುವ ಮಾತಾಗಿದೆ. ಸದಾ ವೃತ್ತಿಯಲ್ಲೆ ತೊಡಗಿ ಆ ಜಂಜಾಟಕ್ಕೆ ಲೀನವಾದವರ ಮುಂದೆ ಇದೊಂದು ಒಣ ಹರಟೆ. ಆದರೆ ಅವರ ಬದುಕೆ ನಿಜವಾದ ಆತ್ಮಜ್ಞಾನ ಅಂತ ತಿಳಿಸೋದು ಹೇಗೆ! ನಮ್ಮ ಭಾಷಣಕಾರರು ವೇದಿಕೆಯಲ್ಲೇ ಚಿಂತಿಸೋದು ಆದ್ರೆ ಆತ ಇಲ್ಲಿಗೆ ಬರಲಾರ.
ಸಿನಿಮಾ ಹಿಂದೆ
ಸಿನಿಮಾ ಅನ್ನೋ ಬಣ್ಣದ ಲೋಕದ ಹಿಂದೆ ಸಾವಿರಾರು ಜನ ಪರಿಶ್ರಮ ಇದೆ ಅಂತ ಎಲ್ಲರಿಗೂ ಗೊತ್ತಾಗಬಹುದು. ಆದ್ರೆ ಅವರ್ಯಾರು ಮುಖ್ಯ ಆಗ್ಲೇಯಿಲ್ಲ. ಕೆಲವರು ಕಾಣ್ತಾರೆ ಕೆಲವರು ಕಾಣೋಲ್ಲ. ಇವರೆಲ್ಲಾ ಕಾವಲುಗಾರ ಇದ್ದಾಂಗೆ ದೇಶ ಆಗ್ಲಿ ಮನೆ ಆಗ್ಲಿ. ಬಿ.ಎಂ ಪುಟ್ಟಯ್ಯ ಗುರುಗಳು ಪಾಠದಲ್ಲಿ ಹೇಳಿದ್ದು ನೆನಪಿದೆ ರಾಜನ ಹೊತ್ತು ಕುದುರೆ ಬರುತ್ತೆ ಹೊರೆತು ರಾಜ ಎಂದಿಗೂ ಬರಲಾರ ಅವನು ಕುಳಿತಿರುತ್ತಾನೆ. ಸಮಾಜದ ರಚನೆಯೇ ಹೀಗೆ ಕಾಣುತ್ತೆ ಅನಿಸುತ್ತದೆ.
ಭಾಷೆ
ನಾವು ಕಲಿಯುವ ಭಾಷೆಗೆ ಇದೇ ಸರಿಯಾದ ಉತ್ತರ ಅಂತ ಹೇಳಿಕೊಂಡು ಬರಲಾಗುತ್ತಿದೆ. ನಾವು ಕೊದುವ ಹೆಸರು, ಸಂಖೇತ, ಕಾರ್ಯ ಇದೆಲ್ಲಾ ನಾವು ಗ್ರಹಿಸಿರೋ ರೀತಿ ಅಲ್ಲವೆ, ಇದು ತಿಳಿದಿದ್ದರೂ ಪರಂಪರೆಯಂತೆ ಮುಂದುವರೆಸುತ್ತಿದ್ದೇವೆ. ಗ್ರಹಿಕಯಲ್ಲೇ ವಿಶ್ವದ ವಿಶ್ವಾಸ ಗಳಿಸೋ ಅದಷ್ಟೋ ಅಂಧರ ಗ್ರಹಿಕೆಗಳಿಗೆ ನಮ್ಮ ಕಲ್ಪನಾ ಭ್ರಮೆಗಳನ್ನೇ ಹೇರುತ್ತಿದ್ದೇವೆ ಅನಿಸುವುದಿಲ್ಲವೇ. ಬದಲಿ ಯೋಚಿಸಬಹುದು ಅನಿಸಿದರೂ ಅದು ಕೂಡ ಅಮುಖ್ಯ ಅನಿಸಬಹುದು ಎಕೆಂದರೆ ಕಾರ್ಯ ಮುಖ್ಯವೇ ಹೊರೆತು ವಸ್ತು.ವ್ಯಕ್ತಿ.ಹೆಸರು ಇವೆಲ್ಲಾ ಈ ಅಲೋಚನೆಯಲ್ಲಿ ಶೂನ್ಯ ಆಗಬಹುದು.
ಮಗುವಿನ ಆಯ್ಕೆ
ಮಕ್ಕಳ ಆಯ್ಕೆಯ ಸ್ವಾತಂತ್ರವನ್ನು ನಾವು ದೊಡ್ಡವರು, ತಿಳಿದವರು, ಏನೇನೆಲ್ಲಾ ಭಾವನೆಗಳೊಂದಿಗೆ ಕಿತ್ತುಕೊಂಡು ನಮ್ಮ ಭ್ರಮೆಗಳನ್ನೆ ಹೇರುತ್ತಿದ್ದೇವೆ ಅನಿಸುತ್ತದೆ. ಮಕ್ಕಳು ತಮಗಿಷ್ಟದ ಹೆಸರು, ಧರ್ಮ-ಜಾತಿ, ಬದುಕುಗಳನ್ನು ಸಮಾಜಮುಖಿಯಾಗಿ ಪ್ರೌಢವಾಸ್ಥೆಯ ನಂತರ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ ನೀಡಬಹುದಲ್ಲವೇ.. ಮನುಷ್ಯ ಪ್ರಾಣಿ ಬಿಟ್ಟು ಉಳಿದೆಲ್ಲಾ ಪ್ರಾಣಿಗಳು ಸಾಮಾನ್ಯವಾಗಿ ನೀಡಿರಬಹುದೆನಿಸುತ್ತದೆ. ಆದರೆ ಇತ ಮನುಷ್ಯ, ಸೃಷ್ಠಿಕರ್ತ ಅಷ್ಟಾದರೂ ಹಕ್ಕು ಬೇಡವೆ! ಹೀಗೂ ಅನಿಸಬಹುದು. ಕೆಲವರಿಗೆ ಇದು ಕರ್ತವ್ಯ.. ಹಲವರಿಗಿದು ಸಮಾಜ ಪ್ರಕ್ರಿಯೆ ಸತ್ಯ ಯಾವುದೋ ಇರಬೇಕು. ತಮ್ಮ ಹೆಸರನ್ನೂ ಮಕ್ಕಳ ಹೆಸರಿನೊಂದಿಗೆ ಪರಂಪರೆಯಂತೆ ಮುಂದುವರೆಸುವಾಗ ಅದೆಷ್ಟು ದಿನ ಈ ಬಾಲಲೀಲೆಯನ್ನು ಹೊತ್ತು ಸಾಗಬೇಕೋ ಈ ಮಕ್ಕಳು!.
ಕೃತಿ
ಇದೊಂದು ಶಾಶ್ವತ ರೂಪ. ವಿಶ್ವಾಸದ ವಿಶ್ವ. ಬರಹ, ದನಿ ನೋಟ ರೂಪಗಳು ಬೇರೆ ಇರಬಹುದು. ಜಗತ್ತಿನಲ್ಲಿ ಯಾವುದು ಪೂರ್ಣ ಕೃತಿ ಅಲ್ಲ ಅನಿಸಬಹುದು. ಆದರೆ ಆ ಕ್ಷಣಕ್ಕೆ ಪೂರ್ಣವಾಗಿ ಒಪ್ಪಿಕೊಳ್ಳುತ್ತೇವೆ. ಅದಕ್ಕೆ ನಂಬಿಕೆ, ಸತ್ಯ, ತೃಪ್ತಿ ಎನೆಲ್ಲಾ ಭಾವ ಕೀಲಿಕೈಗಳನ್ನು ರಿಪೇರಿ ಮಾಡಿರುತ್ತೇವೆ. ಹಾಗದ್ರೆ ಅಪೂರ್ಣ ಇರಬಹುದಾದುದು ಅದು ಕೊರತೆ, ನೋವು ಈ ಹೆಸರುಗಳನ್ನು ಪಡೆದಿರಬಹುದು. ಅಯ್ಯೋ! ದೇವರೇ ಅಪೂರ್ಣ. ನಾಸ್ತಿಕ ಜಗತ್ತು ನಾನು ನನ್ನಾಸೆಯೇ ಅಪೂರ್ಣ. ಇದು ಶ್ಲೋಕದಿಂದಲೇ ಅರ್ಥವಾಗಬೇಕು ಎಂದೇನು ಅಲ್ಲ, ಅನಕ್ಷರಸ್ಥನಾಗಿಯೂ ಈ ವಿಚಾರದಲ್ಲಿ ಉತ್ತಮವಾಗಿ ಮಾತನಾಡಬಹುದು.
ಜ್ಞಾನಂ ವಿಜ್ಞಾನಂ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ