@4
ರನ್ನ ಕವಿ ಪ್ರಶಸ್ತಿ
ಪ್ರಸ್ತುತ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಗೊಳಿಸಿರುವ ಈ ಕೃತಿಯನ್ನು 1928ರ ಕಾಲಘಟ್ಟದಲ್ಲಿ ಮೈಸೂರಿನ ವಿಶ್ವವಿದ್ಯಾಲಯ ಸಂಘ ಪ್ರಕಟಗೊಳಿಸಿತ್ತು. ಈ ಕೃತಿಗೆ ತನ್ನದೇ ಆದ ಐತಿಹಾಸಿಕ ಮಹತ್ವವಿದೆ. ಒಬ್ಬ ಕವಿಯನ್ನು ಕುರಿತು ಹಲವು ಸಾಹಿತ್ಯ ವಿದ್ವಾಂಸರು ಲೇಖನಗಳನ್ನು ರಚಿಸಿ ಮೊದಲಬಾರಿಗೆ ಕವಿ ಹಾಗೂ ಕೃತಿ ಕೇಂದ್ರಿತ ವಿಮರ್ಶೆಯನ್ನು ಮಂಡಿಸಿದ್ದಾರೆ. ಅಂತಹ ಅಧ್ಯಯನಕ್ಕೆ ಒಳಗಾದ ಕನ್ನಡದ ಮೊದಲ ಕವಿ ರನ್ನನಾಗಿದ್ದಾನೆ. ಪಂಪ ಕವಿ ಕುರಿತು ಇದೇ ಮಾರ್ಗದಲ್ಲಿ ಮುಳಿಯ ತಿಮ್ಮಪ್ಪಯ್ಯ 1938ರಲ್ಲಿ ನಾಡೋಜ ಪಂಪ ಕೃತಿ ಹೊರತಂದರು. ಮುಖ್ಯವಾಗಿ ಕೃತಿ ವಿಮರ್ಶೆ ನೀಡುವುದು ಇಲ್ಲಿನ ಉದ್ದೇಶವಲ್ಲ. ಮುಖ್ಯವಾಗಿ ರನ್ನಕವಿ ಪ್ರಶಸ್ತಿ ಕೃತಿಗೆ ಬರೆದಿರುವ ಮುನ್ನುಡಿ ಬರಹ ಶತಮಾನಕೂ ಸಲ್ಲುವ ಸಾಹಿತ್ಯ ವ್ಯಾಖ್ಯಾನವನ್ನು ಬಿ.ಎಂ.ಶ್ರೀ ಕಂಠಯ್ಯ ನೀಡಿದ್ದಾರೆ. ವಿಮರ್ಶೆ ಎಂದರೇನು?, ವಿಮರ್ಶಕನು ಯಾವ ಜ್ಞಾನವನ್ನು ಹೊಂದಿರಬೇಕು?, ಸಾಹಿತ್ಯ ಸೃಷ್ಠಿಗೆ ಇರಬೇಕಾದ ಭಾಷಾ ಚಿಂತನೆ., ಉತ್ತಮ ಸಾಹಿತ್ಯ ಗುರ್ತಿಸುವಲ್ಲಿ ವಿಮರ್ಶಕನ ಪಾತ್ರ, ಈ ಅಂಶಗಳು ಚರ್ಚೆಯಾಗಿವೆ. “ಕನ್ನಡ ಕಾವ್ಯ ರಾಶಿಯನ್ನು ಹೊರಕ್ಕೆ ತಂದು ಹೆಮ್ಮೆಪಟ್ಟದ್ದಾಯಿತು. ಈಗ ಬೇಕಾಗಿರುವುದು ಅದರ ಯೋಗ್ಯತೆಯನ್ನು ಗೊತ್ತು ಮಾಡುವ ವಿಮರ್ಶೆ. ಜಳ್ಳನ್ನು ತೂರಿ, ಕಾಳನ್ನು ತುಂಬಿಕೊಳ್ಳಬೇಕಾಗಿದೆ ಈಗ, ಸಾಹಿತ್ಯ ಕಲಾ ಪುತ್ರರ ಆತ್ಮ ಪುಷ್ಟಿಗಾಗಿ”.
(ಕೃತಿ ಕುರಿತ ಅಧ್ಯಯನ ನನ್ನ ‘ವಿಮರ್ಶೆಯ ಕಾವು’ ಲೇಖನದಲ್ಲಿ ತಿಳಿಯಬಹುದು)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ