*ಸಿ. ಇ. ಟಿ ಸೂಕ್ಷ್ಮತೆಯಲಿ ಕನ್ನಡಕೂ ಕನ್ನಡಿ!*
ಕನ್ನಡ ಸಾಹಿತ್ಯ ಕುರಿತು ಅಧ್ಯಯನಗಳು ವಿಶೇಷವಾಗಿ ಗರಿಬಿಚ್ಚಿವೆ. ಅಧ್ಯಯನ ಎಂಬ ಪದದ ಮೂಲಾರ್ಥವೇ ಅಂಕದ ಸವಾರಿ ಎನಿಸಿದೆ.
ಸಿಇಟಿ ಎಂಬ ಪದವೇ ನೆನಪಿನ ಹಾಗೂ ಯೋಚಿಸಿ ಅರಿವನ್ನು ಪಡೆಯುವ ಜ್ಞಾನವಾಗಿ ಬೆಳವಣಿಗೆಯಾಗುತ್ತಿದೆ.
ಉದ್ಯೋಗ ಸ್ಥಾನಗಳು ಲಾಭಾಂಶದ ಬಿಳಿನೆರಳಾಗುತ್ತಿರುವ ಸಂದರ್ಭದಲ್ಲಿ ಆಶ್ರಯದ ಕೂಸಗಳದೆಷ್ಟೋ!
ಗೆಲ್ಲಬೇಕಾದವರು ವಿದ್ಯೆ ಕಲಿತವರಲ್ಲ, ಉದ್ಯೋಗ ನಿಮಿತ್ತರು. ಬಡತನ, ಅಧ್ಯಯನ ನಿಮಿತ್ತ, ವೃತ್ತಿ, ಪ್ರವೃತ್ತಿ ಮೊದಲಾದ ಅಂಶಗಳನ್ನು ಹೊಂದಿದವರಾಗಿ ಗೆಲ್ಲುವ ಅನಿವಾರ್ಯತೆ ಇದೆ ಇವರೇ ಬಂಡವಾಳ..
ಕನ್ನಡ ಸಾಹಿತ್ಯ ಕೂಡ ಸಿ ಇ ಟಿಗೆ ದಕ್ಕಿದಾಗ ಅದರ ಉಳಿವು ಅಳಿವಿನ ರಾಜಕೀಯ ಬೆಳವಣಿಗೆ ಚಿಂತನಾರ್ಹ.
ಉದ್ಯೋಗ ಸಲುವಾಗಿ ಅರ್ಹತೆಯನ್ನು ಹೊಂದಿದ ಸದ್ಯದ ೨೧.೦೦೦ಕ್ಕೂ ಮಿಗಿಲಾಗಿ ಸಾಹಿತ್ಯ ಅಭ್ಯರ್ಥಿಗಳು ಬಂಡವಾಳದ ಪ್ರತ್ಯೇಕ ಮಾದರಿಗಳು. ಗೆದ್ದವರ ಅರಿವು ತರಬೇತಿಯ ವಿವಿಧ ರೂಪಗಳನ್ನು ಪ್ರಾರಂಭಿಸಿದರೆ, ಪ್ರಕಾಶಕರು ಮತ್ತು ಪುಸ್ತಕದ ವ್ಯಾಪಾರಿಗಳು ಸುಮಾರು ೧೦_೦೦೦ ದಷ್ಟು ಪ್ರತಿಗಳ ಮುದ್ರಣ ಹಾಗೂ ಮಾರಾಟದ ವಹಿವಾಟಿಗೆ ನಿಂತು ಮೂಲಪ್ರತಿ, ಹೋಲಿಕೆ ಪ್ರತಿ ಹೀಗೆಲ್ಲಾ ಮುದ್ರಿಸಲು ಪ್ರಾರಂಭಿಸುತ್ತಿದ್ದಾರೆ. ಆದರೆ ರೆಡಿಮೆಡ್ ಯುಗದಲ್ಲಿ ಇಂತಹ ತಯಾರಿಸಿದ ಸಿಲಬಸ್ ಪೂರ್ಣತೆಯ ಪುಸ್ತಕಗಳು ಸಿದ್ಧಮಾದರಿಯಲ್ಲಿ ದೊರೆತರೆ ಹೇಗೆ! ಹೌದು ಈಗ ಇವುಗಳ ಹಾವಳಿಯೇ ಹೆಚ್ಚು. ಪ್ರಾಣಹೋಗುವವನ ದಾಹದಾಟದ ದಾಳಗಳು. ಹತ್ತಾರು ಜನರ ಅಧ್ಯಯನವನ್ನು ಕದ್ದುಕೊಲೆಗಯ್ಯುವ ಕೌತ್ಸುಕಾಭರಣಗಳೂ ಇದ್ದಾವೆ. ಇರಲಿ :ವ್ಯಾಪಾರಂ ದ್ರೋಹ ಚಿಂತನಂ' ಅಲ್ಲವೇ..
ಉತ್ತಮ ಚಿಂತನೆ ಎಂದರೆ ಇದೇ ವ್ಯವಹಾರ ಹಲವರಿಗೆ ಸಾಹಿತ್ಯದ ಆಳ ಅಗಲ ಪರಿಚಯಿಸಿದ ಪರಿ ಅನನ್ಯವಾದುದು.
ಪ್ರಾಧ್ಯಾಪಕರ ಹುದ್ದೆಗೆ ಮೊದಲು ಇದರ ಬಿಸಿ ತುಪ್ಪದ ಅರಿವು ಎಲ್ಲರಿಗೂ ದಕ್ಕಿತು. ಇಲ್ಲಿ ಎಚ್ಚರಗೊಂಡವರು ಪಿಯು ಉಪನ್ಯಾಸಕ ಹುದ್ದೆಗೆ ಬೇಕಾದ ತುಪ್ಪ ಕಾಸಲು ಪ್ರಾರಂಭಿಸಿದರು. ಗೆದ್ದವರು ಜ್ಞಾನಿಗಳೇನೂ ಅಲ್ಲ, ಸೋತವರು ಅಜ್ಞಾನಿಗಳಲ್ಲ..
ಈ ನಿಟ್ಟಿನಲ್ಲಿ ಸ್ಪರ್ಧಾ ಶ್ರೇಯಸ್ಸು, ಏಣಿ ಈ ಸಿಇಟಿ ಮಾದರಿಯ ಪುಸ್ತಕಗಳ ಕಥೆ ಭಿನ್ನವಾಗಿದೆ. ಇದರ ಸಂಪಾದಕರು ಇದುವರೆಗೂ ಎಲೆಮರೆಯ ಕಾಯಿಯಂತೆ ಸಾಹಿತ್ಯ ಅಧ್ಯಯನ ಮಾಡಿದ್ದಾರೆ, ಹಲವರ ತಪ್ಪುಗಳ ಗ್ರಹಿಸಿದ್ದಾರೆ, ದೀರ್ಘವಾದ ಅಧ್ಯಯನವನ್ನು ಓದುಗರಿಗೆ ಒಪ್ಪಿಸುವ ಕೆಲಸ ಮಾಡಿದ್ದಾರೆ ಅನಿಸುತ್ತದೆ, ಯಾವುದೇ ವ್ಯಾಕರಣ ದೋಷವಿಲ್ಲದ ಈ ಕೃತಿಗಳು ಕೆಲವು ಸಣ್ಣ ಕೊರೆತೆಗಳ ಹೊರತುಪಡಿಸಿ ಉತ್ತಮ ಸಾಹಿತ್ಯ ಸೇತುವೆಗಳೆನ್ನಬಹುದು. ವ್ಯವಹಾರವನ್ನು ವಸ್ತುನಿಷ್ಠವಾಗಿ ಮಾಡುವ ಕ್ರಮ ಇಲ್ಲಿ ಗಮನಿಸಬಹುದು.
ಅಕ್ಷರಗಳ ಪುಟದೊಡಲಿನಲಿ ಅಕ್ಷಯರೂಪದ ಮಹಿಮೆ ಅಧ್ಯಯನ ಸ್ವರೂಪಿಯಾದುದು. ಅರ್ಥವಂತಿಕೆ ಮಾತ್ರ ಜೀವನ ರೂಪಿಸುತ್ತದೆ ವ್ಯವಹಾರಿಕರ ಹಿನ್ನಲೆಯ ಬಿಳಿನೆರಳಲ್ಲ..
ಬನ್ನಿ ಯೋಗ್ಯವಾದುದನ್ನು ಆರಿಸಿಕೊಳ್ಳುವ.- ಅಂಕುರ
ಬುದ್ಧಿವಂತ ಯೋಚಿಸುತ್ತಾನೆ, ದಡ್ಡನಾದವ ಅನ್ವಯಿಕೊಳ್ಳುತ್ತಾನೆ- ಹಿರಿಯರ ಮಾತು
2 ಕಾಮೆಂಟ್ಗಳು:
ಸ್ಪರ್ಧಾ ಶ್ರೇಯಸ್ಸು ಉತ್ತಮ ಮಾರ್ಗದರ್ಶಿ.ದಕ್ಕಿಸಿಕೊಂಡವರ ಜ್ಞಾನ ಅಕ್ಷಯವಾಗುವುದು.
ಕಂದ....ನಿನ್ನ ಚಡಪಡಿಕೆಯ ನೋವು ಅರ್ಥವಾಗತ್ತೆ. ಆದರೆ ಯಾವ ಒಂದು ನಿರ್ದಿಷ್ಟ ಪುಸ್ತಕವೂ ಸಿ.ಇ.ಟಿ ಗೆ ಪರಿಪೂರ್ಣ ಓದು ಆಗಲಾರದು.ಸಿ.ಇ.ಟಿ ನಿರ್ದಿಷ್ಟ ವ್ಯಕ್ತಿಗಳಿಗೆ ಮಾತ್ರವಲ್ಲ. ಅದೊಂದು ಒಪ್ಪಿತ ವಿಧಾನ ಅಷ್ಟೆ. ಸಿ.ಇ.ಟಿ ಉದ್ಯೋಗ ನಿಮಿತ್ತದವರಿಗೆ ಮಾತ್ರವಲ್ಲ. ನಿಜವಾದ ಓದುಗ ಉದ್ಯೋಗ ಪಡೆಯದೆ ಇರುವುದಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ